Advertisement
ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದ ವಿವಿಧೆಡೆ ಅಳವಡಿಸಿದ್ದ ಇ-ಶೌಚಾಲಯಗಳು ನಿರ್ವಹಣೆ ಕೊರತೆಯಿಂದ ಅವ್ಯವಸ್ಥೆಯ ತಾಣವಾಗಿವೆ. ಕೆಲವೆಡೆ ಬಳಕೆಯ ಸ್ಥಿತಿಯಲ್ಲಿದ್ದರೂ ತಾಂತ್ರಿಕವಾಗಿ ಎಲ್ಲವೂ ದುರಸ್ತಿ ಹಂತ ತಲುಪಿವೆ. ಹೀಗಾಗಿ ಕೆಲವೆಡೆ ಶೌಚಾಲಯಗಳ ಮುಂದೆ ಮೂಗು ಮುಚ್ಚಿಕೊಂಡು ದಾಟುವಂತಾಗಿದ್ದು,ಜನರು ಪಾಲಿಕೆ ಹಾಗೂ ಸ್ಮಾರ್ಟ್‌ಸಿಟಿ ಕಂಪನಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಎಲ್ಲಾ ಅವ್ಯವಸ್ಥೆಗಳಿಗೆ ತಿಲಾಂಜಲಿಇರಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಸಮಗ್ರ ಯೋಜನೆ ರೂಪಿಸಿದ್ದು, ಅಂದುಕೊಂಡಂತೆ ಆದರೆ ಏಪ್ರಿಲ್ ತಿಂಗಳ ಆರಂಭದಲ್ಲಿ ಸುಸ್ಥಿತಿಗೆ ತಲುಪಲಿವೆ.
Related Articles
Advertisement
ನಿರ್ವಹಣೆಗಾಗಿ ಯೋಜನೆ :
ಮಹಾನಗರ ಪಾಲಿಕೆ 30 ಇ-ಶೌಚಾಲಯಗಳ ನಿರ್ವಹಣೆಗಾಗಿ ಯೋಜನೆ ರೂಪಿಸಿದ್ದು, ತಾಂತ್ರಿಕ ಕಾರ್ಯನಿರ್ವಹಣೆ ಜೊತೆಗೆ ಪ್ರತಿಶೌಚಾಲಯಕ್ಕೆ ಒಬ್ಬರಂತೆ ನಿರ್ವಹಣಾ ಸಿಬ್ಬಂದಿ, ಸ್ವತ್ಛತೆ ಸೇರಿದಂತೆ ಪ್ರತಿಯೊಂದು ಕಾರ್ಯ ಗುತ್ತಿಗೆ ನೀಡಲು ನಿರ್ಧರಿಸಿದೆ. ಇ-ಶೌಚಾಲಯಗಳು ಅತ್ಯಾಧುನಿಕ ತಾಂತ್ರಿಕತೆ ಹೊಂದಿರುವ ಹಿನ್ನೆಲೆಯಲ್ಲಿ ತಾಂತ್ರಿಕ ಸಿಬ್ಬಂದಿಇರಬೇಕು. ಮೊದಲ ಒಂದು ವರ್ಷಗುತ್ತಿಗೆ ಪಡೆದ ಕಂಪನಿಯ ನಿರ್ವಹಣೆಯಕಾರ್ಯವೈಖರಿ ಮೇಲೆ ಮುಂದಿನ ನಾಲ್ಕುವರ್ಷ ಮುಂದುವರಿಸುವ ಯೋಜನೆಯಿದೆ.ಏಪ್ರಿಲ್ ತಿಂಗಳಲ್ಲಿ ಗುತ್ತಿಗೆ ಸೇರಿದಂತೆ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳುವ ಅಂದಾಜಿದೆ.
ಪಾಲಿಕೆ ಹೆಗಲಿಗೆ ಹೊಣೆ :
ಶೌಚಾಲಯಗಳ ನಿರ್ವಹಣೆ ಗುತ್ತಿಗೆ ನೀಡಲು ಯೋಜನೆ ತಯಾರಿಸುತ್ತಿದ್ದು, ಪಾಲಿಕೆ ವ್ಯಾಪ್ತಿಯ 15 ಶೌಚಾಲಯಗಳನ್ನು ಸಂಪೂರ್ಣ ದುರಸ್ತಿಗೊಳಿಸಿ ಸುಸ್ಥಿತಿಗೆ ತರುವಂತೆ ಕಂಪೆನಿಗೆ ನೊಟೀಸ್ ನೀಡಿದ ಹಿನ್ನೆಲೆಯಲ್ಲಿ ಅಗತ್ಯ ಬಿಡಿಭಾಗಗಳ ಅಳವಡಿಕೆ ಸೇರಿದಂತೆ ಮೂಲರೂಪಕ್ಕೆ ತರುವ ಕೆಲಸ ಕಂಪೆನಿಯಿಂದ ನಡೆಯುತ್ತಿದೆ. ಸ್ಮಾರ್ಟ್‌ಸಿಟಿಯ 15 ಶೌಚಾಲಯಗಳನ್ನು ನಿರ್ವಹಿಸುವುದುಅವರಿಗೆ ಅಸಾಧ್ಯವಾಗಿದ್ದು, ಇವುಗಳನ್ನು ಕೂಡ ಪಾಲಿಕೆಗೆ ಹಸ್ತಾಂತರಿಸಲು ಮುಂದಾಗಿದ್ದಾರೆ. ಹೀಗಾಗಿ ಎಲ್ಲಾ ಶೌಚಾಲಯಗಳನ್ನು ಸುಸ್ಥಿತಿಗೆ ತಂದ ನಂತರ ಜಂಟಿ ಸಮೀಕ್ಷೆ ನಡೆಸಿ ಏಪ್ರಿಲ್ ತಿಂಗಳೊಳಗೆ ಪಾಲಿಕೆ ತನ್ನ ಸುಪರ್ದಿಗೆ ಪಡೆಯಲಿದೆ. ಶೌಚಾಲಯದ ಸ್ವತ್ಛತೆ ಪಾಲಿಕೆಯ ಜವಾಬ್ದಾರಿಯಾಗಿರುವುದರಿಂದ ಸ್ಮಾರ್ಟ್‌ಸಿಟಿಯಿಂದ ನೀಡಿರುವ ಜೆಟ್ಟಿಂಗ್ ಯಂತ್ರಗಳನ್ನು ಬಳಸಿ ಸ್ವಚ್ಛಗೊಳಿಸಿ ಜನಬಳಕೆಗೆ ಯೋಗ್ಯ ರೀತಿಯಲ್ಲಿ ಇರಿಸುವ ಕೆಲಸ ನಡೆಯುತ್ತಿದೆ.
ಸ್ಮಾರ್ಟ್‌ಸಿಟಿಗೆ ಪೂರಕವಾಗಿ ಅತ್ಯಾಧುನಿಕ ಇ-ಶೌಚಾಲಯಗಳನ್ನು ಅಳವಡಿಸಲಾಗಿತ್ತು. ಆದರೆ ಜನರು ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಲಿಲ್ಲ. ಇದರಲ್ಲಿನ ಕೆಲ ವಸ್ತುಗಳನ್ನು ಮುರಿದುಹಾಕಿದ್ದಾರೆ. ಕೆಲವು ಕಳ್ಳತನವಾಗಿವೆ.ಅವ್ಯವಸ್ಥೆ ಹೋಗಲಾಡಿಸಲು ಎಲ್ಲ ಇ-ಶೌಚಾಲಯಗಳ ಸಂಪೂರ್ಣ ನಿರ್ವಹಣೆಗಾಗಿ ಯೋಜನೆಸಿದ್ಧಪಡಿಸಲಾಗಿದೆ. ದುರಸ್ತಿಯಲ್ಲಿರುವಶೌಚಾಲಯಗಳನ್ನು ಸಿದ್ಧಪಡಿಸುವ ಕೆಲಸ ನಡೆಯುತ್ತಿದೆ. ಏಪ್ರಿಲ್ ತಿಂಗಳೊಳಗೆ ಇದು ಕಾರ್ಯರೂಪಕ್ಕೆ ಬರಲಿದೆ. –ಡಾ| ಸುರೇಶ ಇಟ್ನಾಳ, ಆಯುಕ್ತ, ಹು-ಧಾ ಮಹಾನಗರ ಪಾಲಿಕ
ಹೇಮರಡ್ಡಿ ಸೈದಾಪುರ