Advertisement

ಮಕ್ಕಳಲ್ಲಿ ಸಾಹಿತ್ಯ ಆಸಕ್ತಿ ಬೆಳೆಸಿ

12:55 PM Apr 07, 2018 | Team Udayavani |

ಬಸವಕಲ್ಯಾಣ: ಗುಣಮಟ್ಟದ ಶಿಕ್ಷಣ, ಉತ್ತಮ ಸಂಸ್ಕಾರ ಕಲ್ಪಿಸುವ ಜತೆಗೆ ಸಂಗೀತ, ಸಾಹಿತ್ಯ, ಕಲೆಗಳ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಬೆಳೆಸಬೇಕು ಎಂದು ಶಿವಯೋಗಮಂದಿರದ ಅಧ್ಯಕ್ಷ ಜಗದ್ಗುರು ಡಾ| ಸಂಗನಬಸವ ಮಹಾಸ್ವಾಮಿಗಳು ಸಲಹೆ ನೀಡಿದರು.

Advertisement

ತಾಲೂಕಿನ ಖೇರ್ಡಾ (ಬಿ)ಗ್ರಾಮದಲ್ಲಿ ಶ್ರೀ ಶಿವಲಿಂಗೇಶ್ವರರ ಜಾತ್ರಾ ಮಹೋತ್ಸವ ನಿಮಿತ್ತ ನಡೆದ ಧರ್ಮ ಸಭೆಯಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಶಿಕ್ಷಣದ ಜತೆಗೆ ಸಂಗೀತ, ಸಾಹಿತ್ಯ, ಕಲೆಗೆ ಹೆಚ್ಚು ಒತ್ತು ಕೊಟ್ಟಾಗ ಮಾತ್ರ ಶಾಂತಿ, ನೆಮ್ಮದಿಯಿಂದ ಕೂಡಿದ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.

ವೀರಶೈವ ಲಿಂಗಾಯತ ಹಾಗೂ ಲಿಂಗಾಯತ ಎರಡೂ ಒಂದೇ ಆಗಿವೆ. ವಿನಾಕಾರಣ ಗೊಂದಲಕ್ಕೆ ಎಡೆ ಮಾಡದೇ
ಸಮಾಜ ಬಾಂಧವರು ಒಂದಾಗಿ ನಡೆಯಬೇಕು. ಶೈಕ್ಷಣಿಕವಾಗಿ ಹಿಂದುಳಿದ ಈ ಭಾಗದಲ್ಲಿ ದೊಡ್ಡ ದೊಡ್ಡ ಶಾಲಾ ಕಾಲೇಜುಗಳು ಪ್ರಾರಂಭಿಸಿ ಶೈಕ್ಷಣಿಕ ಕ್ರಾಂತಿಗೆ ಮುಂದಾಗಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಶಾಸಕ ರಾಜಶೇಖರ ಪಾಟೀಲ, ದೇವರಲ್ಲಿ ಭಕ್ತಿ-ಶ್ರದ್ಧೆ ಇದ್ದಾಗ ಜೀವನದಲ್ಲಿ ಶಾಂತಿ-ನೆಮ್ಮದಿ ಜತೆಗೆ ಸಂತೃಪ್ತಿ ಕಾಣಲು ಸಾಧ್ಯವಾಗುತ್ತದೆ.

ಶಿವಲಿಂಗೇಶ್ವರರ ಮೇಲೆ ಭಕ್ತಿ ಶ್ರದ್ಧೆ ಇಟ್ಟಿವರ ಇಷ್ಟಾರರ್ಥಗಳು ಈಡೇರುತ್ತವೆ ಎಂದು ಹೇಳಿದರು. ಸಾನ್ನಿಧ್ಯ ವಹಿಸಿದ್ದ ಹಿರನಾಗಾಂವ ಶ್ರೀ ಜಯಶಾಂತಲಿಂಗ ಮಹಾಸ್ವಾಮೀಜಿ, ಯಡ್ರಾಮಿಯ ಶ್ರೀ ಸಿದ್ಧಲಿಂಗ ದೇವರು, ನೆರಡಗುಂಬದ ಶ್ರೀ ಪಂಚಮ ಸಿದ್ಧಲಿಂಗ ಸ್ವಾಮಿಗಳು ಆಶೀರ್ವಚನ ನೀಡಿದರು. ಶ್ರೀ ಕುಮಾರೇಶ್ವರ ಜೀವನ ದರ್ಶನ ಕುರಿತು ಶ್ರೀ ಮಲ್ಲಿಕಾರ್ಜುನ ಶಾಸ್ತ್ರೀ ಖೇಳಗಿಮಠ ಪ್ರವಚನ ನಡೆಸಿಕೊಟ್ಟರು. ಮಠದ ನಿಯೋಜಿತ ಉತ್ತಾತಾಧಿಕಾರಿ ಶ್ರೀ ವಿಶ್ವನಾಥ ದೇವರ ನೇತೃತ್ವ ವಹಿಸಿದ್ದರು.

Advertisement

ತಾಪಂ ಸದಸ್ಯೆ ಲಲಿತಾಬಾಯಿ ರಾಠೊಡ, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀಬಾಯಿ ಚಂದಗೊಂಡ, ಉಪಾಧ್ಯಕ್ಷ ಶಿಲ್ಪಾ ರಾಠೊಡ, ಪ್ರಮುಖರಾದ ಧೂಳಪ್ಪ ಪಾಟೀಲ, ಜೈಭೀಮ ಕಾಂಬಳೆ, ಸೂರ್ಯಕಾಂತ ಪಾಟೀಲ, ವಿಜಯಕುಮಾರರೆಡ್ಡಿ, ಜಲಂದರ್‌ ಸುಲ್ತಾಪುರ, ಮಲ್ಲಿಕಾರ್ಜುನ ಹೊಸಮನಿ, ಅಮೃತರೆಡ್ಡಿ ಕುಟೇಗಾಂವ, ಡಾ| ಸದಾನಂದ ಪಾಟೀಲ, ರಾಜು ಸಜ್ಜನಶೆಟ್ಟಿ, ಶಿವಾನಂದ ವಾಲಿ, ಲಿಂಗರಾಜ ಪಾಟೀಲ, ಚಂದ್ರಕಾಂತ ಸ್ವಾಮಿ ಇದ್ದರು.

ಜಾತ್ರಾ ಮಹೋತ್ಸವ ನಿಮಿತ್ತ ಕುಸ್ತಿ, ನಂದಿಕೋಲ ಮೆರವಣಿಗೆ ಸೇರಿದಂತೆ ಇತರ ಕಾರ್ಯಕ್ರಮಗಳು ಜರುಗಿದವು. ಗ್ರಾಮ ಸುತ್ತಲಿನ ಗ್ರಾಮಗಳಿಂದ ಆಗಮಿಸಿದ ಭಕ್ತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next