Advertisement

‘ಸೃಜನಶೀಲ ಕೌಶಲ ಬೆಳೆಸಿಕೊಳ್ಳಿ’

05:16 PM Dec 30, 2017 | |

ದರ್ಬೆ: ಪ್ರಚಲಿತ ವಿದ್ಯಮಾನದಲ್ಲಿ ವಿದ್ಯಾರ್ಥಿಗಳು ತರಗತಿಯ ಪಠ್ಯಗಳಿಗೆ ಸೀಮಿತವಾಗಿರದೆ, ತಮ್ಮ ಸೃಜನಶೀಲ ಕೌಶಲಗಳನ್ನು ಬೆಳೆಸುವ ಕಡೆಗೆ ಆದ್ಯತೆ ನೀಡುವ ಅನಿವಾರ್ಯತೆಯಿದೆ ಎಂದು ಐಟಿಎಂನ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ರೋನಿತ್‌ ಕೆ. ನಂಜಪ್ಪ ಹೇಳಿದರು.

Advertisement

ಸಂತ ಫಿಲೋಮಿನಾ ಕಾಲೇಜಿನ ವ್ಯವಹಾರ ನಿರ್ವಹಣೆ ವಿಭಾಗದ ಆಶ್ರಯದಲ್ಲಿ ಕೌಶಲ ಅಭಿವೃದ್ಧಿ ಕುರಿತು ಆಯೋಜಿಸಲಾದ ವಿಶೇಷ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿ ಯಾಗಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಸ್ಪರ್ಧಾ ಸಾಮರ್ಥ್ಯ ಮತ್ತು ನವೀನ ಕೌಶಲಗಳನ್ನು ಹೆಚ್ಚಿಸಿಕೊಳ್ಳುವ ಕಡೆಗೆ ಗಮನ ಹರಿಸಿದಾಗ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸಬಹುದು ಎಂದರು.

ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥ ರಾಧಾಕೃಷ್ಣ ಗೌಡ ಮತ್ತು ವ್ಯವಹಾರ ನಿರ್ವಹಣೆ ಸಂಘದ ಸಂಯೋಜಕ ಪ್ರಶಾಂತ್‌ ರೈ ಉಪಸ್ಥಿತರಿದ್ದರು. ಕಾಲೇಜಿನ ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಸೇವಾ ಘಟಕದ ಸಂಯೋಜಕ ವಿನಯಚಂದ್ರ, ಬಿಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪುಷ್ಪಾ ಎನ್‌., ಅಭಿಷೇಕ್‌ ಸುವರ್ಣ ಮತ್ತು ಹರ್ಷಿತ್‌ ಆರ್‌. ಸಹಕರಿಸಿದರು. ವ್ಯವಹಾರ ನಿರ್ವಹಣೆ ಸಂಘದ ಸಂದರ್ಶ್‌ ರೈ ಸ್ವಾಗತಿಸಿ, ನಿಕ್ಸನ್‌ ಜೋಸೆಫ್‌ ವಂದಿಸಿದರು. ರೋಷ್ನಿ ಎಂ. ವೈ. ನಿರ್ವಹಿಸಿದರು.

ಸ್ಪಷ್ಟ ಜ್ಞಾನ ಅಗತ್ಯ
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ| ಲಿಯೋ ನೊರೋನ್ಹಾ ಮಾತನಾಡಿ, ವ್ಯವಹಾರ ಆಡಳಿತ
ಅಧ್ಯಯನ ಮಾಡುವ ವಿದ್ಯಾರ್ಥಿಗಳು ಉದ್ದಿಮೆ ಕ್ಷೇತ್ರದಲ್ಲಿ ಆಗಿಂದಾಗ್ಗೆ ಆಗುತ್ತಿರುವ ಬದಲಾವಣೆಗಳ ಕುರಿತು
ಸ್ಪಷ್ಟ ಜ್ಞಾನವನ್ನು ಪಡೆದುಕೊಳ್ಳಬೇಕು. ಇದರೊಂದಿಗೆ ಸಾಮಾನ್ಯ ಜ್ಞಾನ, ಸಂವಹನ ಕಲೆ, ಕ್ರಿಯಾತ್ಮಕತೆ ಮುಂತಾ
ದವುಗಳ ಕಡೆಗೂ ಗಮನಹರಿಸುವ ಅಗತ್ಯವಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next