Advertisement
ತಾಲೂಕಿನ ವೀರಘೋಟ ಗ್ರಾಮದ ಆದಿ ಮೌನೇಶ್ವರ ಆಸನಕಟ್ಟೆಯಲ್ಲಿ ಹಮ್ಮಿಕೊಂಡ 1.96 ಲಕ್ಷ ಗಣಗಳ ಇಷ್ಟಲಿಂಗ ಪೂಜಾ ಕಾರ್ಯಕ್ರಮದ ಮೂರನೇ ದಿನ ರವಿವಾರ ನಡೆದ ರೈತ ಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮನೆ, ಹೊಲ ಕೆಲಸತ್ತ ಗಮನಹರಿಸದ ರೈತರು ಆಳುವ ಸರಕಾರದ ಆಗು-ಹೋಗುಗಳ ಬಗ್ಗೆ ಚಿಂತೆ ಮಾಡುತ್ತಿರುವುದು ವಿಷಾದನೀಯ ಸಂಗತಿ ಎಂದರು.ವರಲಕ್ಷ್ಮೀ ಹತ್ತಿ ಅಭಿವೃದ್ಧಿಪಡಿಸಿ 1 ಲಕ್ಷ ಕೋಟಿ ಆದಾಯ ಗಳಿಸಿ ನಿರುದ್ಯೋಗಿ ಜನರಿಗೆ ಉದ್ಯೋಗ ನೀಡಲಾಗಿತ್ತು. ಈ ಭಾಗದಲ್ಲಿ ಉತ್ತಮ ಬೆಳೆ ಬೆಳೆಯಲು ಫಲವತ್ತಾದ ಭೂಮಿ ಇದೆ. ರೈತರು ಪರಿಶ್ರಮದಿಂದ ಫಲ ಕಾಣಬಹುದು ಎಂದರು. ಒಬ್ಬೊಬ್ಬ ರೈತರು ಒಂದೊಂದು ಬೆಳೆ ಬೆಳೆದು ನೀವೇ ಮಾರಾಟಕ್ಕೆ ಇಳಿದರೆ ಉತ್ತಮ ಬೆಲೆ ಸಿಗುವಲ್ಲಿ ಯಾವುದೇ ಅನುಮಾವಿಲ್ಲ. ಕೃಷಿ ಪದ್ಧತಿಯಲ್ಲಿ ಅನೇಕ ವಿಧಾನಗಳು ಇದ್ದು, ಸರಿಯಾದ ರೀತಿಯಲ್ಲಿ ರೈತರು ಬೆಳೆಗಳಿಗೆ ಹೆಚ್ಚಿನ ಗಮನ ಕೊಟ್ಟಾಗ ಬೆಳೆಗಳು ರೈತನ ಕೈಬಲಪಡಿಸುತ್ತವೆ ಎಂದು ಹೇಳಿದರು.