Advertisement

ಪರರಿಗೆ ಒಳಿತು ಮಾಡುವ ಗುಣ ಬೆಳೆಸಿಕೊಳ್ಳಿ

12:13 PM May 05, 2017 | |

ತಿ.ನರಸೀಪುರ: ಮನುಷ್ಯರು ಸದ್ಗುಣ ಶೀಲರಾಗಿ, ಇತರರಿಗೆ ಒಳಿತು ಮಾಡುವ ಗುಣವನ್ನು ಬೆಳೆಸಿ ಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ವಾಗಲು ಸಾಧ್ಯ ಎಂದು ವಿಜಯಪುರ ಜಾnನಯೋಗಾ ಶ್ರಮದ ಶ್ರೀ ಸಿದ್ದೇಶ್ವರಸ್ವಾಮೀಜಿ ಅಭಿಪ್ರಾಯಪಟ್ಟರು.

Advertisement

ತಾಲೂಕಿನ ಹಿರಿಯೂರು ಗುರುಮಲ್ಲೇಶ್ವರ ದಾಸೋಹ ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಗುರುಮಲ್ಲಸ್ವಾಮಿಗಳವರ ಗದ್ದುಗೆ ಉದ್ಘಾಟನೆ, ವಟುದೀûಾ ಸಂಸ್ಕಾರ ಮತ್ತು ಧಾರ್ಮಿಕ ಸಭೆಯ ಸಾನಿಧ್ಯವಹಿಸಿ ಮಾತನಾಡಿದರು.

ಮನುಷ್ಯ ದೇಹ ಹೂವಿನ ಬಳ್ಳಿಯಿದ್ದಂತೆ, ಹೂವಿನ ಬಳ್ಳಿ ಹೇಗೇ ಸುಗಂಧವಾಗಿರುತ್ತದೋ ಹಾಗೇ ಮನುಷ್ಯನ ನಡೆ ನುಡಿಗಳು ಕೂಡಿರಬೇಕು. ಮನುಷ್ಯ ದೊಡ್ಡ ದೊಡ್ಡ ಮನೆಗಳನ್ನು ನಿರ್ಮಿಸಿಕೊಂಡು ಸಂಪತ್ತನ್ನ ಕ್ರೂಡೀಕರಿಸಿದರೇ ಸಾಲದು ಬದಲಿಗೆ ತನ್ನ ಆಂತರಿಕ ಸಂಪನ್ನ ವೃದ್ಧಿಸಿ ಕೊಳ್ಳಬೇಜು ಎಂದರು.

ದೇವಾಲಯಕ್ಕೆ ಗರ್ಭಗುಡಿಯ ಕಲಶ ಎಷ್ಟು ಮುಖ್ಯವೋ ಹಾಗೇ ಮನುಷ್ಯನಿಗೆ ಅಂಗಗಳು ಅಷ್ಟೇ ಮುಖ್ಯ. ಮನುಷ್ಯನಿಗೆ ಅಂಗವನ್ನು ನೀಡಿರುವುದು ಉತ್ತಮ ಕೆಲಸ ಮಾಡಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಹೊರತು ನೀಚ ಕೃತ್ಯಗಳನ್ನು ಎಸಗಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಲು ಅಲ್ಲ.

ಹಾಗಾಗಿ ಪ್ರತಿಯೊಬ್ಬರು ಸಮಾಜದಲ್ಲಿ ಸದ್ಗುಣ ವಂತರಾಗಿ ಧರ್ಮ ಕಾರ್ಯಗಳನ್ನು ಮಾಡುವ ಮೂಲಕ ಇತರರಿಗೆ ಮಾದರಿಯಾಗಬೇಕು ಹಾಗೂ ಶ್ರೀಗಳು ನೀಡುವ ಆಶೀರ್ವಚನವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

Advertisement

ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ 300ಕ್ಕೂ ಶಾಖಾ ಮಠಗಳನ್ನು ಹೊಂದಿರುವ ದೇವನೂರು ಮಠವು ದಾಸೋಹಕ್ಕೆ ಹೆಸರುವಾಸಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಕೆಲವು ಮಠಗಳಲ್ಲಿ ಶ್ರೀಗಳ ಕೊರತೆ ಕಾಡುತ್ತಿದ್ದು ಮಠಗಳು ಕ್ಷೀಣಿಸತೊಡಗಿವೆ. ಇಂತಹ ಸಂದರ್ಭದಲ್ಲಿ ಈ ಗ್ರಾಮದ ಜನರು ವಟುವೊಂದನ್ನು ಮಠಕ್ಕೆ ನೀಡಿ ಈ ಮಠದ ಅಭಿವೃದ್ಧಿ ಹಾಗೂ ಧಾರ್ಮಿಕ ಕಾರ್ಯಗಳಿಗೆ ಸಹಕಾರ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ವಾಟಾಳು ಶ್ರೀ ಸಿದ್ದಲಿಂಗಶಿವಚಾರ್ಯಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಮೈಸೂರು ಜೆಎಸ್‌ಎಸ್‌ ಕಾಲೇಜಿನ ಸಹ ಅರ್ಥಶಾಸ್ತ್ರ ಪ್ರಾಧ್ಯಾಪಕ ಪೊ›. ಡಿ.ಎಸ್‌.ಸದಾಶಿವಮೂರ್ತಿ ದಾಸೋಹ ಕುರಿತು ಉಪನ್ಯಾಸ ನೀಡಿದರು.

ಕನಕಪುರ ಮಠದ ಶ್ರೀ ಮುಮ್ಮಡಿನಿರ್ವಾಣಸ್ವಾಮೀಜಿ, ದೇವನೂರು ಶ್ರೀ ಮಹಾಂತಸ್ವಾಮೀಜಿ, ವಾಣಿಜ್ಯ ತೆರೆಗೆ ಇಲಾಖೆ ಅಪಾರ ಆಯುಕ್ತ ಯಳವರಹುಂಡಿ ಸಿದ್ದಪ್ಪ, ಪಿಆರ್‌ಎಂ ಸಹ ಪ್ರಾಧ್ಯಾಪಕ ಡಾ.ವೀರಭದ್ರಸ್ವಾಮಿ, ಮಾದಾಪುರ ಗ್ರಾಪಂ ಅಧ್ಯಕ್ಷ ಗೌಡ್ರುಪ್ರಕಾಶ್‌, ಗ್ರಾಮದ ಮುಖಂಡರಾದ ನಾಗಪ್ಪ, ನವೀನ್‌, ಚನ್ನಬಸವಣ್ಣ, ಪರಶಿಮೂರ್ತಿ, ಸತ್ಯರಾಜು,  ಸೋಮಣ್ಣ, ಪ್ರಭುಸ್ವಾಮಿ, ಶಿವಣ್ಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next