Advertisement

ಕಾನೂನು ಗೌರವಿಸುವ ಗುಣ ಬೆಳೆಸಿಕೊಳ್ಳಿ

02:35 PM Aug 31, 2017 | Team Udayavani |

ಚಿಕ್ಕಮಗಳೂರು: ಮನುಷ್ಯ ಹುಟ್ಟಿನಿಂದ ಸಾಯುವವರೆಗೆ ಕಾನೂನಿನ ಜೊತೆಯಲ್ಲೇ ಬದುಕಬೇಕು. ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳಲು ಸಾಧ್ಯವಿಲ್ಲ ಎಂದು ವಕೀಲೆ ಡಿ.ಎಸ್‌.ಮಮತಾ ತಿಳಿಸಿದರು.

Advertisement

ನಗರದ ಟೌನ್‌ ಮಹಿಳಾ ಸಮಾಜ ಪದವಿ ಪೂರ್ವ ಕಾಲೇಜು ಮತ್ತು ಲಯನ್ಸ್‌ ಕ್ಲಬ್‌ ವತಿಯಿಂದ ರೋಟರಿ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಕಾನೂನು ಅರಿವು ಶಿಬಿರದಲ್ಲಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಬಾಲಾಪರಾಧಗಳ ಜೊತೆಗೆ ಬಾಲ್ಯ ವಿವಾಹಗಳೂ ಹೆಚ್ಚುತ್ತಿವೆ. ವಿದ್ಯಾರ್ಥಿಗಳು ಇಂತಹ ವಿಚಾರಗಳ ಬಗ್ಗೆ ಜಾಗೃತರಾಗಬೇಕು. ಕಾನೂನು ಬಾಹಿರವಾದ ಇಂತಹ ಪ್ರಕರಣಗಳನ್ನು ತಡೆಯಲು ಮುಂದಾಗಬೇಕು ಎಂದು ಕರೆ ನೀಡಿದರು. ಸಮಾಜ ಹೆಣ್ಣುಮಕ್ಕಳನ್ನು ಗೌರವದಿಂದ ಕಾಣಬೇಕು. ಅಪಮಾನ, ದೌರ್ಜನ್ಯಗಳನ್ನು ತಡೆಯಬೇಕು. ಬಾಲ ಕಾರ್ಮಿಕರು, ಬಾಲ್ಯ ವಿವಾಹ ಇನ್ನಿತರೆ ದೌರ್ಜನ್ಯಗಳು ಕಂಡು ಬಂದಲ್ಲಿ ವಿದ್ಯಾರ್ಥಿಗಳು ತಮ್ಮ ಶಾಲಾ-ಕಾಲೇಜು ಮುಖ್ಯಸ್ಥರು ಹಾಗೂ ಪೊಲೀಸರ ಗಮನಕ್ಕೆ ತರಬೇಕು ಎಂದು ಹೇಳಿದರು. ನಮ್ಮ ಕಲೆ, ಸಂಸ್ಕೃತಿ, ರಾಷ್ಟ್ರಧ್ವಜ, ರಾಷ್ಟ್ರಗೀತೆಗಳಿಗೆ ಅದರದ್ದೇ ಆದ ಕಾನೂನಿನ ಚೌಕಟ್ಟುಗಳಿವೆ. ಅದನ್ನು ಮೀರಿ ಯಾರೂ ನಡೆದುಕೊಳ್ಳಬಾರದು ಎಂದು ಸಲಹೆ ಮಾಡಿದರು.

ಶಿಬಿರದ ಅಧ್ಯಕ್ಷತೆ ವಹಿಸಿದ್ದ ಲಯನ್ಸ್‌ ಕ್ಲಬ್‌ ಅಧ್ಯಕ್ಷೆ ಎ.ಆರ್‌.ಲೇಖಾ ಮಾತನಾಡಿ, ಚಿಕ್ಕ ವಯಸ್ಸಿನಿಂದಲೇ ಕಾನೂನನ್ನು ಗೌರವಿಸುವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.ಲಯನ್ಸ್‌ ಕ್ಲಬ್‌ ಕಾರ್ಯದರ್ಶಿ ಕೀರ್ತಿ ಶೇs…, ಖಜಾಂಚಿ ಸವಿತ ಆರ್‌.ಮೋಕ್ಷಾ, ಟಿಎಂಎಸ್‌ ಕಾರ್ಯದರ್ಶಿ ನೇತ್ರ ವೆಂಕಟೇಶ್‌, ಪ್ರಾಂಶುಪಾಲ ಇಂದ್ರೇಶ್‌, ಅನಸೂಯಾ ಉಪಸ್ಥಿತರಿದ್ದರು. ನಟರಾಜ್‌ ಸ್ವಾಗತಿಸಿ, ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next