Advertisement

ಓದುವ ಹವ್ಯಾಸ ಬೆಳೆಸಿಕೊಳ್ಳಿ: ಮಣಿಕಂಠ ರಾಠೊಡ

10:43 AM Feb 22, 2022 | Team Udayavani |

ಚಿತ್ತಾಪುರ: ವಿದ್ಯಾರ್ಥಿಗಳು ಜೀವನದಲ್ಲಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಉದ್ಯಮಿ, ಸಮಾಜ ಸೇವಕ ಮಣಿಕಂಠ ರಾಠೊಡ ಹೇಳಿದರು.

Advertisement

ಪಟ್ಟಣದ ಎಕ್ಸ್‌ಲೆಂಟ್‌ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುಬಸವ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಡಾ| ಶ್ರೀ ಶಿವಕುಮಾರಸ್ವಾಮಿ ಸಿದ್ಧಗಂಗಾ ಸಾಹಿತ್ಯ ವೇದಿಕೆ ಟ್ರಸ್ಟ್‌ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನಾಗಾವಿ ಸ್ಟಡಿ ಸೆಂಟರ್‌ ತರಬೇತಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಪರ್ಧಾತ್ಮಕ ಯುಗದಲ್ಲಿ ಓದಿಗೆ ಹೆಚ್ಚಿನ ಬೆಲೆ ಇದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಒತ್ತು ಕೊಡದಿದ್ದರೇ ಮುಂದಿನ ದಿನಗಳಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದರು.

ಧಾರವಾಡ ಸ್ಟಡಿ ಸೆಂಟರ್‌ ನಿರ್ದೇಶಕ ಡಾ| ರುದ್ರೇಶ ಮೇಟಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಹೊಂದಿದರೆ ಭವಿಷ್ಯ ಉಜ್ವಲವಾಗುತ್ತದೆ ಎಂದು ಹೇಳಿದರು.

ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು, ಚಿತ್ತಾಪುರದ ಡಾ| ಶಿವಕುಮಾರಸ್ವಾಮಿ ಸಿದ್ಧಗಂಗಾ ಟ್ರಸ್ಟ್‌ ಅಧ್ಯಕ್ಷ ರೇವಣಸಿದ್ಧಪ್ಪ ರೋಣದ, ಧಾರವಾಡ ಸ್ಟಡಿ ಸೆಂಟರ್‌ ವಿಷಯ ಸಂಪನ್ಮೂಲ ವ್ಯಕ್ತಿ ಪ್ರಮೀಳಾ ಮೇಟಿ, ಕಸಾಪ ತಾಲೂಕು ಅಧ್ಯಕ್ಷ ವೀರೇಂದ್ರಕುಮಾರ ಕೊಲ್ಲೂರ, ಬಂಜಾರಾ ಸಮಾಜದ ಮುಖಂಡ ಅಶ್ವತ್ಥ ರಾಠೊಡ, ಮುಖಂಡ ಶಿವಕುಮಾರ ಸುಣಗಾರ, ಶಿಕ್ಷಕ ಶಾಮಭಟ್‌ ಜೋಶಿ ಮಾತನಾಡಿದರು.

Advertisement

ವಿದ್ಯಾರ್ಥಿನಿಯರಾದ ಅಂಬಿಕಾ, ಶ್ವೇತಾ ಅನಿಸಿಕೆ ವ್ಯಕ್ತಪಡಿಸಿದರು. ಮುಖಂಡರಾದ ನಾಗರಾಜ ಭಂಕಲಗಿ, ಕೋಟೇಶ್ವರ ರೇಷ್ಮಿ, ರೇಣುಕಾ ರೋಣದ, ರಾಜಶೇಖರ ಬೊಮ್ಮನಳ್ಳಿ, ಶಿವಶರಣಪ್ಪ ಸುಲೇಗಾಂವ, ಆನಂದ ಪಾಟೀಲ, ಮಹ್ಮದ ಯೂನುಸ್‌, ಶಂಕರ ಬಡಿಗೇರ, ಶಾನ ಮೇಧಾ, ಮನೋಜ ರಾಠೊಡ ಇತರರು ಇದ್ದರು. ಸ್ಟಡಿ ಸೆಂಟರ್‌ ವ್ಯವಸ್ಥಾಪಕ ಸಂಗಮೇಶ ರೋಣದ ಪ್ರಾಸ್ತಾವಿಕ ಮಾತನಾಡಿದರು. ಬಸವರಾಜ ಬೊಮ್ಮನಳ್ಳಿ ಸ್ವಾಗತಿಸಿದರು, ರಾಜೇಶ್ವರಿ ನಿರೂಪಿಸಿದರು, ವಿಜಯಕುಮಾರ ರೋಣದ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next