Advertisement

ಜನಪದ ಕಲೆ ಸಂರಕಣೆ ಹವ್ಯಾಸ ಬೆಳೆಸಿಕೊಳ್ಳಿ

06:44 PM Mar 12, 2022 | Team Udayavani |

ಕೆರೂರ: ಪೂರ್ವಜರಿಂದ ಮನುಕುಲಕ್ಕೆ ಬಳುವಳಿ ಯಾಗಿ ಬಂದಿರುವ ಜೀವನಾನುಭವಗಳ ಕಣಜ ವೆಂದೇ ಬಿಂಬಿಸಲಾಗುವ ಜನಪದ ಕಲೆಗಳನ್ನು ತಂತ್ರಜ್ಞಾನದ ಈ ಯುಗದಲ್ಲಿ ಸಂರಕ್ಷಿಸುವುದು ಅವಶ್ಯವಿದೆ. ಯುವ ಜನಾಂಗ ಈ ಕಲೆಗಳ ಬಗೆಗೆ ಅಭಿರುಚಿ, ಹವ್ಯಾಸ ಬೆಳೆಸಿಕೊಳ್ಳುವಂತೆ ಕಸಾಪ ಬಾದಾಮಿ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಶಂಕರ ಹೂಲಿ ಹೇಳಿದರು.

Advertisement

ಪಟ್ಟಣದ ಮತ್ತಿಕಟ್ಟಿ ಓಣಿಯ ಗಡಾದ ದುರ್ಗಾದೇವಿ ದೇಗುಲದ ಆವರಣದಲ್ಲಿ ಹಮ್ಮಿಕೊಂಡಿದ್ದ ಜಾನಪದ ಕಲಾ ಸಂಭ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಾನಪದ ಕಲೆಗಳು ಜೀವನಾನುಭವ ಭಂಡಾರವಾಗಿದ್ದು ಹಳ್ಳಿಗರು ದಿನವಿಡೀ ಹೊಲ, ಗದ್ದೆಗಳಲ್ಲಿ ದುಡಿದು ಬಂದು, ಸಂಜೆ ಬೇಸರ ನೀಗಿಸುವ ಜೊತೆಗೆ ಮನರಂಜನೆಗಾಗಿ ಜಾನಪದ ಕಲೆಗಳ ಸಂಪ್ರದಾಯ ಬೆಳೆದು ಬಂದಿತು.

ಮನಸ್ಸಿಗೆ ಮುದ ನೀಡುವ ಅಪ್ಪಟ ಹಳ್ಳಿ ಸೊಗಡಿನ ಈ ಕಲೆಗಳನ್ನು ನಾವು ಜತನದಿಂದ ಕಾಯ್ದುಕೊಳ್ಳಬೇಕು ಎಂದರು. ಹಿರಿಯ ಕಲಾವಿದ ಲಿಂಗರಾಜ ಕ್ವಾಣ್ಣೂರ ಮಾತನಾಡಿ, ಜಾನಪದ ಪರಿಷತ್ತಿನ ಮೂಲಕ ಗ್ರಾಮೀಣ ಕಲೆಗಾರರ ಮಾಹಿತಿ ಕ್ರೋಢಿಕರಿಸಿದ್ದು ಅವರಿಗೆ ಸೂಕ್ತ ಪ್ರೋತ್ಸಾಹ, ಅಗತ್ಯ ಸೌಲಭ್ಯಗಳಿಗಾಗಿ ಸಂಘಟಿಸಲಾಗುತ್ತಿದೆ ಎಂದರು.

ಕಲಾವಿದ ಮಲ್ಲಿಕಾರ್ಜುನ ಪೂಜಾರ ಮಾತನಾಡಿ, ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಜನಪದ ಕಲೆಗಳ ಉಳಿವಿಗೆ ಅನೇಕ ಎಲೆಮರೆಯ ಕಲಾವಿದರು ಶ್ರಮಿಸುತ್ತಿದ್ದು ಅಂತಹವರಿಗೆ ಸೂಕ್ತ ವೇದಿಕೆ, ಸೌಲಭ್ಯಗಳನ್ನು ಕಲ್ಪಿಸಲು ಇಲಾಖೆ ಪ್ರಾಮುಖ್ಯತೆ ನೀಡಬೇಕು ಎಂದರು.

ಶಿಕ್ಷಕ ಬಸವರಾಜ ಪ್ಯಾಟಿಶೆಟ್ಟರ, ಸಿ.ಎಸ್‌. ನಾಗನೂರ ಇತರರು ಮಾತನಾಡಿದರು. ಕಾರ್ಯಕ್ರಮದ ಸಾನಿಧ್ಯವನ್ನು ದೇವಾಂಗಮಠದ ವೀರಭದ್ರ ಸ್ವಾಮೀಜಿ ವಹಿಸಿದ್ದರು. ಪಪಂ ಮಾಜಿ ಅಧ್ಯಕ್ಷೆ ಶ್ಯಾವಂತ್ರೆವ್ವ ಮತ್ತಿಕಟ್ಟಿ, ಫಕೀರಪ್ಪ ಮತ್ತಿಕಟ್ಟಿ, ಎ. ಎಸ್‌. ಚಂದಾವರಿ, ಬಸವಂತಪ್ಪ ಮತ್ತಿಕಟ್ಟಿ, ಸಿಆರ್‌ಪಿ ಎನ್‌. ಎಲ್‌. ರಾಠೊಡ, ಮಂಜುನಾಥ ಮತ್ತಿಕಟ್ಟಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next