Advertisement

ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಿ

04:11 PM Feb 07, 2018 | |

ಇಂಡಿ: ಪ್ರಾಥಮಿಕ ಹಂತದಿಂದಲೇ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಶಿಕ್ಷಣ ನೀಡುವುದರ ಜೊತೆಗೆ
ಸಮಾಜಕ್ಕೆ ಒಬ್ಬ ಒಳ್ಳೆಯ ನಾಗರಿಕನಾಗಿ ಬದುಕಬೇಕೆಂಬ ತಿಳಿವಳಿಕೆ ಮೂಡಿಸಿಸುವುದು ಮುಖ್ಯವಾಗಿದೆ ಎಂದು ಉಪ ವಿಭಾಗಾಧಿ ಕಾರಿ ಡಾ| ಪಿ. ರಾಜು ಹೇಳಿದರು.

Advertisement

ಚವಡಿಹಾಳದ ಗುರುಬಸವ ವಿಜ್ಞಾನ ಪದವಿ ಮಹಾವಿದ್ಯಾಲಯ ಹಾಗೂ ಗುರುಬಸವ ಕಿರಿಯ ಪ್ರಾಥಮಿಕ ಶಾಲೆ (ಕನ್ನಡ ಮತ್ತು ಆಂಗ್ಲ ಮಾಧ್ಯಮ)ಯಲ್ಲಿ 2017-18ನೇ ಸಾಲಿನ ರಾಜ್ಯಮಟ್ಟದ ಅಬ್ಯಾಕಸ್‌ ಪರೀಕ್ಷಾ ಸ್ಪರ್ಧೆಯಲ್ಲಿ ಭಾಗವಹಿಸಿ ರ್‍ಯಾಂಕ್‌ ಪಡೆದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಮತ್ತು ಪದವಿ ವಿದ್ಯಾರ್ಥಿಗಳಿಗಾಗಿ ಗಣಕಯಂತ್ರದ ಸಾಧಕ ಬಾಧಕಗಳ
ಬಗ್ಗೆ ಚರ್ಚಾಕೂಟದಲ್ಲಿ ಅವರು ಮಾತನಾಡಿದರು.

ಇಂಡಿಯಂಥ ಹಿಂದುಳಿದ ತಾಲೂಕಿನಲ್ಲಿ ಆಂಗ್ಲ ಮಾಧ್ಯಮ ಹಾಗೂ ವಿಜ್ಞಾನ ಶಿಕ್ಷಣ ನೀಡುತ್ತಿರುವ ಸಂಸ್ಥೆಯ ಕಾರ್ಯ ಮೆಚ್ಚುವಂಥದ್ದು ಎಂದು ಸಂಸ್ಥೆ ಅಧ್ಯಕ್ಷರಿಗೆ ಶ್ಲಾಘಿಸಿದರು. ಪದವಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಗಣಕಯಂತ್ರದ ಸಾಧಕ ಬಾಧಕಗಳ ಬಗ್ಗೆ ಕುಮಾರ ಆದರ್ಶ ಖೇಡಗಿ, ಐಶ್ವರ್ಯ ಬಿರಾದಾರ, ರಾಣಿ ಪ್ರಚಂಡಿ ಹಾಗೂ ಪುಷ್ಪಾ ಪವಾರ, ಆಧುನಿಕ ಜಗತ್ತಿನಲ್ಲಿ ಕಂಪ್ಯೂಟರ್‌ ಆಧಾರಿತ ಜೀವನ ಶೈಲಿಯಿಂದ ಉಂಟಾಗುತ್ತಿರುವ ಅನುಕೂಲಗಳು ಹಾಗೂ ಅನಾನುಕೂಲಗಳ ಬಗ್ಗೆ ಉದಾಹರಣೆ ಸಹಿತವಾಗಿ
ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಎಂ.ಬಿ. ಬಿರಾದಾರ ಮಾತನಾಡಿ, ಬೆಳೆವಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳಲ್ಲಿರುವ ಅಗಾಧ ಶಕ್ತಿಯನ್ನು ಹೊರ ತರಬೇಕಾದರೆ ಸೂಕ್ತ ಮಾರ್ಗದರ್ಶನ ಮಾಡಬೇಕಾದುದು ಪಾಲಕರ ಹಾಗೂ ಶಿಕ್ಷಕರ ಕರ್ತವ್ಯ. ಅಬ್ಯಾಕಸ್‌ ಪರೀಕ್ಷೆಯಲ್ಲಿ ಭಾಗವಹಿಸಿ ರ್‍ಯಾಂಕ್‌ ಗಳಿಸಿದ ವಿದ್ಯಾರ್ಥಿಗಳ ಸಾಧನೆ ಸ್ಮರಣೀಯ ಎಂದರು. 

ಈ ವೇಳೆ ಅಬ್ಯಾಕಸ್‌ ತರಬೇತಿ ನೀಡಿದ ಶಿಕ್ಷಕಿಯರಾದ ಸುಜಾತಾ ಮಡ್ನಳ್ಳಿ ಅವರಿಗೆ ಸನ್ಮಾನಿಸಿ ಐದು ಸಾವಿರ ನಗದು ಬಹುಮಾನ ವಿತರಿಸಲಾಯಿತು. ರಾಜ್ಯಮಟ್ಟದ ಅಬ್ಯಾಕಸ್‌ ಪರೀಕ್ಷಾ ಸ್ಪರ್ಧೆಯಲ್ಲಿ ರ್‍ಯಾಂಕ ಪಡೆದ ವಿದ್ಯಾರ್ಥಿಗಳಾದ ದೀಪಿಕಾ ಧೂಮಕನಾಳ, ದರ್ಶನ ಬಿರಾದಾರ, ವಿಶ್ವಕುಮಾರ ದಶವಂತ, ಸಿದ್ಧಾರ್ಥ ಬಿರಾದಾರ, ಅಯಾಜ ಚೌಧರಿ ಹಾಗೂ ರೋಶನಿ ಜಾಧವ ರಾಜ್ಯ ಮಟ್ಟದಲ್ಲಿ ಶಾಲೆಯ ಹೆಸರನ್ನು ತಂದ ಪ್ರಯುಕ್ತ ಪಾಲಕರು ವಿದ್ಯಾರ್ಥಿಗಳು ಶಿಕ್ಷಕರು ಆಡಳಿತ ಮಂಡಳಿಯವರು ಹರ್ಷ ವ್ಯಕ್ತಪಡಿಸಿದರು. 

Advertisement

ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಿ.ಎಸ್‌. ಸಾರವಾಡ, ಪ್ರಾಚಾರ್ಯರಾದ ಎ.ಎಸ್‌. ಪಾಟೀಲ, ಮುಖ್ಯ ಗುರುಗಳಾದ ಜಿ.ಜಿ. ದೇಸಾಯಿ ಕಾರ್ಯಕ್ರಮದಲ್ಲಿ ಇದ್ದರು. ಪ್ರಾಥಮಿಕ ಶಾಲಾ ಮುಖ್ಯಗುರು ಪಿ.ಆರ್‌. ಹೂಗಾರ ಸ್ವಾಗತಿಸಿದರು. ಪೂಜಾ ನರೋಣಿ ನಿರೂಪಿಸಿದರು. ಪದವಿ ಕಾಲೇಜಿನ ವಿದ್ಯಾರ್ಥಿನಿ ಸಿರಿನಾ, ಶೃತಿ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next