Advertisement

ನವೆಂಬರೊಳಗೆ ದೇವೇಗೌಡರ ಜೀವನ ಚರಿತ್ರೆ ಬಿಡುಗಡೆ

06:25 AM Sep 16, 2017 | Team Udayavani |

ಶಿವಮೊಗ್ಗ: “ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ಜೀವನ ಚರಿತ್ರೆ ನವೆಂಬರ್‌ ಒಳಗೆ ಬಿಡುಗಡೆಗೊಳ್ಳಲಿದೆ’ ಎಂದು ಪುಸ್ತಕದ ಲೇಖಕ ಹಾಗೂ ಜೆಡಿಎಸ್‌ ರಾಜ್ಯ ವಕ್ತಾರ ವೈ.ಎಸ್‌.ವಿ.ದತ್ತಾ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “1973ರಿಂದಲೂ ಜನತಾ ಪರಿವಾರದಲ್ಲಿ ಹಾಗೂ ದೇವೇಗೌಡರ ಅನುಯಾಯಿಯಾಗಿ, ಬೆಂಬಲಿಗನಾಗಿ, ಒಡನಾಡಿಯಾಗಿ ರಾಜಕೀಯ ಜೀವನ ನಡೆಸುತ್ತಿದ್ದೇನೆ. ಇದೀಗ ಅವರ ಜೀವನ ಚರಿತ್ರೆ ಬರೆಯುತ್ತಿದ್ದು, ನವೆಂಬರ್‌ ವೇಳೆಗೆ ಅದನ್ನು ಬಿಡುಗಡೆಗೊಳಿಸುವ ಇಚ್ಛೆ ಇದೆ. 

ದೇವೇಗೌಡರ ರಾಜಕೀಯ ಜೀವನದಲ್ಲಿ ಎದುರಾದಂತಹ ಸಮಸ್ಯೆಗಳು, ಅವರ ರಾಜಕೀಯ ಹೋರಾಟ, ರೈತರ ಬಗೆಗಿನ ಕಾಳಜಿ, ಕೆಲವು ಸನ್ನಿವೇಶಗಳಲ್ಲಿ ಎದುರಿಸಿದಂತಹ ಘಟನೆಗಳು ಇನ್ನು ಮುಂತಾದ ವಿಷಯಗಳ ಸಮಗ್ರ ವಾಸ್ತವಿಕ ಸತ್ಯವನ್ನು ಜೀವನ ಚರಿತ್ರೆ ಒಳಗೊಂಡಿರುತ್ತದೆ. ಕಳೆದ ಕೆಲ ತಿಂಗಳಿಂದ ಬಿಡುವಿಲ್ಲದೆ ಪುಸ್ತಕ ಮುಗಿಸುವ ಕಾರ್ಯದಲ್ಲಿ ಮಗ್ನನಾಗಿದ್ದು, ರಾಜಕೀಯ ಚಟುವಟಿಕೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲು ಸಾಧ್ಯವಾಗಿಲ್ಲ ‘ ಎಂದು ಹೇಳಿದರು.

ನಾನು ಜನತಾ ಪರಿವಾರದ ಕಟ್ಟಾ ಅನುಯಾಯಿಯಾಗಿದ್ದೇನೆ. ಕಾಂಗ್ರೆಸ್‌ ಸೇರುವಂತಹ ಯೋಚನೆಯನ್ನು ಎಂದೂ ಮಾಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ಸುದ್ದಿಯಲ್ಲಿ ಯಾವುದೇ ಹುರುಳಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next