ಇದರೊಂದಿಗೆ ಕರ್ನಾಟಕ “ಸಿ’ ವಿಭಾಗದ ಈವರೆಗಿನ ಎಲ್ಲ 5 ಪಂದ್ಯಗಳನ್ನು ಗೆದ್ದು ಅಜೇಯ ಓಟ ಮುಂದುವರಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ರಾಜ್ಯ ತಂಡ 6 ವಿಕೆಟಿಗೆ 299 ರನ್ ಬಾರಿಸಿದರೆ, ಚಂಡೀಗಢ 7ಕ್ಕೆ 277 ರನ್ ಮಾಡಿ ಗೆಲುವಿನ ಗಡಿಯಿಂದ ಹಿಂದೆಯೇ ಉಳಿಯಿತು.
Advertisement
ಆರ್. ಸಮರ್ಥ್ (5) ಮತ್ತು ಮಾಯಾಂಕ್ ಅಗರ್ವಾಲ್ (19) ಬೇಗನೇ ಪೆವಿಲಿಯನ್ ಸೇರಿಕೊಂಡ ಬಳಿಕ ದೇವದತ್ತ ಪಡಿಕ್ಕಲ್ ಹಾಗೂ ನಿಕಿನ್ ಜೋಸ್ ಸೇರಿಕೊಂಡು ತಂಡವನ್ನು ಆಧರಿಸುವ ಕಾಯಕದಲ್ಲಿ ತೊಡಗಿದರು. ಇವರಿಂದ 3ನೇ ವಿಕೆಟಿಗೆ 171 ರನ್ ಒಟ್ಟುಗೂಡಿತು. ಪಡಿಕ್ಕಲ್ 9 ಫೋರ್, 6 ಸಿಕ್ಸರ್‌ಗಳೊಂದಿಗೆ ಅಬ್ಬರಿಸಿ 103 ಎಸೆತಗಳಿಂದ 114 ಬಾರಿಸಿದರು. ನಿಕಿನ್ ಜೋಸ್ ನಾಲ್ಕೇ ರನ್ನಿನಿಂದ ಸೆಂಚುರಿ ತಪ್ಪಿಸಿಕೊಂಡರು. ಇವರ 96 ರನ್ 114 ಎಸೆತಗಳಿಂದ ಬಂತು. ಸಿಡಿಸಿದ್ದು 6 ಬೌಂಡರಿ ಹಾಗೂ ಒಂದು ಸಿಕ್ಸರ್.
ಚೇಸಿಂಗ್ ವೇಳೆ ಚಂಡೀಗಢ ಚೆಂದದ ಬ್ಯಾಟಿಂಗ್ ಮಾಡಿತಾದರೂ ರನ್‌ರೇಟ್ ಕಾಯ್ದುಕೊಳ್ಳುವಲ್ಲಿ ವಿಫಲವಾಯಿತು. ಆರಂಭಕಾರ ಅರ್ಸ್ಲಾನ್ ಖಾನ್ 103 ರನ್ ಬಾರಿಸುವ ಮೂಲಕ ತಂಡದ ಪಾಲಿನ ಆಪತಾºಂಧವರಾದರು (103 ಎಸೆತ, 11 ಬೌಂಡರಿ, 1 ಸಿಕ್ಸರ್). ನಾಯಕ ಮಮನ್ ವೋಹ್ರಾ 34, ಅಂಕಿತ್ ಕೌಶಿಕ್ 51, ಭಾಗಮೇಂದ್ರ ಲಾಥರ್ 32 ರನ್ ಹೊಡೆದರು.
Related Articles
Advertisement
ಸಂಕ್ಷಿಪ್ತ ಸ್ಕೋರ್ಕರ್ನಾಟಕ-6 ವಿಕೆಟಿಗೆ 299 (ದೇವದತ್ತ ಪಡಿಕ್ಕಲ್ 114, ನಿಕಿನ್ ಜೋಸ್ 96, ಮನೀಷ್ ಪಾಂಡೆ ಅಜೇಯ 53, ಮನ್‌ದೀಪ್ ಸಿಂಗ್ 31ಕ್ಕೆ 2, ಸಂದೀಪ್ ಶರ್ಮ 51ಕ್ಕೆ 2). ಚಂಡೀಗಢ-7 ವಿಕೆಟಿಗೆ 277 (ಅಸ್ಲಾìನ್ ಖಾನ್ 102, ಅಂಕಿತ್ ಕೌಶಿಕ್ 51, ಮನನ್ ವೋಹ್ರಾ 34, ವಿ. ಕೌಶಿಕ್ 44ಕ್ಕೆ 2, ಕೆ. ಗೌತಮ್ 36ಕ್ಕೆ 1).