Advertisement

ದೇವ್ರಾಣೆಗೂ ಲೋಕಸಭೆಗೆ ಸ್ಪರ್ಧಿಸಲ್ಲ: ಸಿದ್ದರಾಮಯ್ಯ

12:50 AM Feb 05, 2019 | Team Udayavani |

ಕುಷ್ಟಗಿ: ದೇವ್ರಾಣೆಗೂ ಲೋಕಸಭೆ ಚುನಾವಣೆಗೆ ಮತ್ತೂಮ್ಮೆ ಸ್ಪರ್ಧಿಸುವುದಿಲ್ಲ. ಹಾಗಂತ ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ ಅಂತಲ್ಲ. ಮೈತ್ರಿ ಪಕ್ಷಗಳು ಇನ್ನೂ ಕ್ಷೇತ್ರ ಹಂಚಿಕೆ ಕುರಿತು ತೀರ್ಮಾನಿಸಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

Advertisement

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಪ್ಪಳ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಕೊಪ್ಪಳದ ಮುಖಂಡರು ಒತ್ತಾಯ ಮಾಡುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ನಾನು ಸ್ಪರ್ಧೆ ಮಾಡಲ್ಲ. ಬಿಜೆಪಿಯವರಿಗೆ ಅಧಿಕಾರದ ಭ್ರಮೆ ಹಿಡಿದಿದೆ. ಇದಕ್ಕಾಗಿ ಕಾಂಗ್ರೆಸ್‌ ಶಾಸಕರನ್ನು ಖರೀದಿಸಲು 50 ಕೋಟಿ ರೂ. ಆಫರ್‌ ಮಾಡುತ್ತಿದ್ದಾರೆ. ನಮ್ಮ ಶಾಸಕರು ನೂರು ಕೋಟಿ ರೂ. ಕೊಟ್ಟರೂ ಬಿಜೆಪಿ ಸೇರಲ್ಲ. ಬಿಜೆಪಿಯವರು ಒಬ್ಬ ಶಾಸಕನಿಗೆ 50 ಕೋಟಿ ರೂ. ಆಫರ್‌ ಮಾಡಿದ್ದಾರೆ. ಅವರಿಗೆ ಅಷ್ಟೊಂದು ಹಣ ಎಲ್ಲಿಂದ ಬಂತು? ಸಾರ್ವಜನಿಕರ ಹಣ ಲೂಟಿ ಮಾಡಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next