Advertisement

ಗಮನ ಸೆಳೆದ ಗ್ರಾಮ ಭಾರತ : ಗರಿಗೆದರಿದ ದೇವರಬಾಳು-ಕಟ್ಟಿನಾಡಿಗೆ ಸಂಪರ್ಕ ಸೇತು ನಿರೀಕ್ಷೆ

03:00 AM Jul 03, 2021 | Team Udayavani |

ಕುಂದಾಪುರ (ಹಳ್ಳಿಹೊಳೆ): “ಹಳ್ಳಿಹೊಳೆ-ಇಳಿದಷ್ಟೂ ಸಮಸ್ಯೆ ಆಳ’ ಎಂಬ ಶೀರ್ಷಿಕೆ ಸೇರಿದಂತೆ ಹಳ್ಳಿಹೊಳೆ ಮತ್ತು ಸುತ್ತಮುತ್ತಲ ಗ್ರಾಮಗಳ ಮೂಲ ಸೌಲಭ್ಯ ಕೊರತೆಯ ಕುರಿತು ಗುರುವಾರ ಉದಯವಾಣಿ ಯಲ್ಲಿ ಪ್ರಕಟವಾದ “ಗ್ರಾಮ ಭಾರತ’ ಹೊಸ ಸರಣಿಗೆ ಜನರಿಂದ ಅಭೂತ ಪೂರ್ವ ಅಭಿಪ್ರಾಯ ವ್ಯಕ್ತವಾಗಿದೆ.

Advertisement

ಈ ಭಾಗದ ಜನಪ್ರತಿನಿಧಿಗಳೂ ವರದಿಗೆ  ಸ್ಪಂದಿಸಿದ್ದು, ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುತ್ತಿದ್ದೇವೆ. ಈ ವರದಿಗಳನ್ನೂ ಗಮನಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪ್ರತಿಕ್ರಿಯಿಸಿದ್ದಾರೆ.

ಇದೇ ಸಂದರ್ಭದಲ್ಲಿ ಹಳ್ಳಿಹೊಳೆಯಲ್ಲದೆ ಉಭಯ ಜಿಲ್ಲೆಗಳಿಂದ ಓದುಗರು ವರದಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಳ್ಳಿಹೊಳೆ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಬೆಳಗ್ಗೆಯೇ ವರದಿಯನ್ನು ಓದಿ “ಸರಿಯಾಗಿ ವರದಿ ಮಾಡಿದ್ದೀರಿ, ಇನ್ನಾದರೂ ನಮ್ಮ ಸಮಸ್ಯೆಗಳು ಬಗೆಹರಿಯಲಿ’ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. “ಇದುವರೆಗೆ ಬಗೆಹರಿಯದ ಹಲವಾರು ಪ್ರಮುಖ ಸಮಸ್ಯೆಗಳ ಕುರಿತು ನೈಜ ವರದಿ ಮಾಡಿದ್ದಕ್ಕೆ ಧನ್ಯವಾದಗಳು. ಪತ್ರಿಕೆಯ ಕೆಲಸ ಜನರ ಸಮಸ್ಯೆ, ಕೊರತೆಯನ್ನು ಅಧಿಕಾರಿಗಳಿಗೆ, ಜನಪ್ರತಿನಿಧಿಗಳ ಗಮನಕ್ಕೆ ತರುವುದು. ಅದನ್ನು ನೀವು ನಿರ್ವಹಿಸಿದ್ದೀರಿ. ಸರಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸುವ ಭರವಸೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆಯಲ್ಲದೆ ಇದು ಸರಕಾರದ, ಜನಪ್ರತಿನಿಧಿಗಳ ಕಣ್ತೆರೆಸುವ ವರದಿ ಎಂದು ಶ್ಲಾಘನೆ ವ್ಯಕ್ತವಾಗಿದೆ.

ಸೇತುವೆ ಮತ್ತಿತರ ಸೌಲಭ್ಯ ಒದಗಿಸಲು ಕ್ರಮ
ದೇವರಬಾಳು – ಕಟ್ಟಿನಾಡಿ, ರಾಮನಹಕ್ಲು ಸಂಪರ್ಕಿಸುವ ಕಬ್‌ಹಿತ್ಲು ಹೊಳೆಗೆ ವಾರದೊಳಗೆ ಸೇತುವೆ ಮಂಜೂರಾತಿಗೆ ಪ್ರಯತ್ನಿಸುತ್ತೇನೆ.

“ಉದಯವಾಣಿ’ಹಳ್ಳಿಗಳ ಅಭ್ಯುದಯದ ಆಶಯದೊಂದಿಗೆ ಆರಂಭಿಸಿದ “ಗ್ರಾಮ ಭಾರತ’ ಸರಣಿಯಲ್ಲಿ ಹಳ್ಳಿಹೊಳೆ ಗ್ರಾಮದ ಕುರಿತ ಸಮಗ್ರ ವರದಿಗೆ ಪ್ರತಿಕ್ರಿಯಿಸಿದ ಅವರು, ಇದು ಜನಪರ ಕಾಳಜಿಯ ವರದಿ. ಅದರಲ್ಲಿ ಪ್ರಸ್ತಾವವಾದ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುವೆ ಎಂದರು.

Advertisement

ನೆಟ್‌ವರ್ಕ್‌ ಶೀಘ್ರ ಇತ್ಯರ್ಥ
ಹಳ್ಳಿಹೊಳೆ ನೆಟ್‌ವರ್ಕ್‌ ಸಮಸ್ಯೆಯನ್ನು ಬೇಗ ಇತ್ಯರ್ಥ ಪಡಿಸಲಾಗುವುದು. ಬೈಂದೂರು ಕ್ಷೇತ್ರ ವ್ಯಾಪ್ತಿಯ ಅನೇಕ ಊರುಗಳಲ್ಲಿ ಈ ಸಮಸ್ಯೆ ಇದ್ದು, ಬಗೆಹರಿಸಲು ಪ್ರಯತ್ನ ನಡೆದಿದೆ. ಸಿಎಂ ಕಚೇರಿಗೂ ಈ ಸಂಬಂಧ ಪತ್ರ ಬರೆಯಲಾಗಿದೆ ಎಂದು ಸ್ಪಷ್ಟಪಡಿಸಿದರು. ಪ್ರೌಢಶಾಲೆ ಬೇಡಿಕೆ ಬಗ್ಗೆ ಮಕ್ಕಳ ಸಂಖ್ಯೆಯನ್ನು ಗಮನಿಸಿಕೊಂಡು ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗುವುದು. ಬೈಂದೂರು ತಾಲೂಕು ಕೇಂದ್ರಕ್ಕೆ ನೇರ ಬಸ್‌ ಸೌಲಭ್ಯ ವಿಚಾರದ ಕುರಿತಂತೆ ತಾಲೂಕು ರಚನೆ ಕಾರ್ಯ ಸಂಪೂರ್ಣಗೊಂಡ ಬಳಿಕ ಗಮನಹರಿಸುವುದಾಗಿ ತಿಳಿಸಿದ್ದಾರೆ.
-ಬಿ. ವೈ. ರಾಘವೇಂದ್ರ, ಸಂಸದರು

ಹಳ್ಳಿಗಳ ಅಭಿವೃದ್ಧಿಗೆ ಗರಿಷ್ಠ ಪ್ರಯತ್ನ
ಬೈಂದೂರು ಕ್ಷೇತ್ರದಲ್ಲಿ ಅಭಿವೃದ್ಧಿಯಾಗಬೇಕಾದ ಬಹಳಷ್ಟು ಹಳ್ಳಿ ಗಳಿದ್ದು, ನನ್ನ ಶಾಸಕತ್ವದ ಅವಧಿಯಲ್ಲಿ ಗರಿಷ್ಠ ಪ್ರಯತ್ನ ಮಾಡಿದ್ದೇನೆ. 3 ವರ್ಷಗಳಲ್ಲಿ ಹಳ್ಳಿಹೊಳೆ ಸಹಿತ ಅನೇಕ ಊರುಗಳಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸ ಮಾಡ ಲಾಗಿದೆ. ಹಳ್ಳಿಹೊಳೆ ಮುಖ್ಯ ರಸ್ತೆಗೆ ಅನುದಾನ ಮಂಜೂರಾಗಿ, ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ಡೀಮ್ಡ್ ಫಾರೆಸ್ಟ್‌ ನಿಯಮದಿಂದಾಗಿ ಕೆಲವೆಡೆ ಅಡ್ಡಿಯಾಗಿದೆ. ನಡುಮುದ್ರೆಯಲ್ಲಿ ಕಿಂಡಿ ಅಣೆಕಟ್ಟು, ಹನಿR-ಎಳಬೇರುವಿನಲ್ಲಿ ಕಿಂಡಿ ಅಣೆಕಟ್ಟು, ಬರೆಗುಂಡಿ, ದೇವರಬಾಳು ರಸ್ತೆಗಳಿಗೆಲ್ಲ ಅನುದಾನ ಮಂಜೂರುಗೊಳಿಸಲಾಗಿದೆ. ನೆಟ್‌ವರ್ಕ್‌ ಸಮಸ್ಯೆ ಬಗ್ಗೆ ಸಂಸದರ ಗಮನಕ್ಕೆ ತರಲಾಗಿದ್ದು, ಟವರ್‌ ನಿರ್ಮಾಣಕ್ಕೆ ಜಾಗ ಗುರುತಿಸಲು ಡಿ.ಸಿ.ಗೆ ಸೂಚಿಸಲಾಗಿದೆ. ದೇವರಬಾಳುವಿಗೆ ಸೇತುವೆ ಬೇಡಿಕೆ ಗಮನದಲ್ಲಿದ್ದು, ಪ್ರಯತ್ನ ಚಾಲ್ತಿಯಲ್ಲಿದೆ.

-ಬಿ.ಎಂ. ಸುಕುಮಾರ್‌ ಶೆಟ್ಟಿ, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next