Advertisement
ತಾಲೂಕಿನ ಜಾಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಮೇನಹಳ್ಳಿ ಗಡಿ ಗ್ರಾಮದಲ್ಲಿ ಸುಸಜ್ಜಿತ ವಾದ 80/40 ಅಡಿಗಳ ಖಾಲಿ ಜಾಗದಲ್ಲಿ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಾಣ ಮಾಡಿ, 9 ಬ್ಲಾಕ್ ಗಳನ್ನಾಗಿಸಿದ್ದು, ಘನ ತ್ಯಾಜ್ಯದ ಉಪಯುಕ್ತತೆ ಮತ್ತು ಕೊಂಡುಕೊಳ್ಳುವವರ ಅಗತ್ಯಕ್ಕೆ ಸಂಬಂಧಿಸಿದಂತೆ, ವಿವಿಧ ಹಂತದಲ್ಲಿ ಕಸವನ್ನು ವಿಂಗಡಿಸಿ ಶೇಖರಿಸಲಾಗುತ್ತಿದ್ದು, ಹಸಿ ಕಸ ವನ್ನು ಪ್ರತ್ಯೇಕಿಸಿ ಪ್ಲಾಸ್ಟಿಕ್ ಮತ್ತು ಇತರೆ ವಸ್ತುಗಳನ್ನು ತೆಗೆದು ಕಾಂಪೋಸ್ಟ್ (ನರೇಗಾ) ಅಡಿಯಲ್ಲಿ 10/15 ಅಡಿಯನಿರ್ಮಾಣಗೊಂಡ ತೊಟ್ಟಿಯಲ್ಲಿ ತುಂಬಿಸ ಲಾಗುತ್ತದೆ.
Related Articles
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 13 ಹಳ್ಳಿಗಳು ಬರಲಿದ್ದು, ಈಗಾಗಲೇ ಎಸ್‌ಬಿಎಂ ಯೋಜನೆಯಡಿಯಲ್ಲಿ ಮತ್ತು ದಾನಿಗಳ ಸಹಕಾರದಲ್ಲಿ ಕಸವಿಲೇವಾರಿ ಟ್ಯಾಕ್ಟರ್, ಮಾರುತಿ ಸುಪರ್ ಕ್ಯಾರಿ ವಾಹನ ಇದ್ದು, ಸ್ವ-ಸಹಾಯ ಸಂಘದ 6 ಜನ ಸದಸ್ಯರನ್ನು ಒಳಗೊಂಡಂತಹ ಸ್ವಚ್ಛತಾಗಾರರನ್ನು ಒಡಂಬಡಿಕೆ ಮೂಲಕ ನೇಮಿಸಿಕೊಂಡಿದ್ದು, ಪ್ರತಿ ಹಳ್ಳಿಯಿಂದ ಒಣ/ಹಸಿ ಕಸವನ್ನು ಸಂಗ್ರಹಿಸಿ, ವಾರದ 3 ದಿನ (ದಿನ ಬಿಟ್ಟು ದಿನ) ದಿನಚರಿ ಮೂಲಕ ವ್ಯವಸ್ಥಿತವಾಗಿ ಮತ್ತು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಗ್ರಾಮ ಪಂಚಾಯಿತಿ ಕ್ರಮವಹಿಸಲಾಗಿದೆ.
Advertisement
6 ತಿಂಗಳ ಹಿಂದೆ ಗ್ರಾಪಂಯೂ ಮೂಲ ಭೂತ ಸೌಕರ್ಯ ವಂಚಿತವಾಗಿತ್ತು. ಅಗತ್ಯ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಗ್ರಾಪಂನಲ್ಲಿದ್ದ ವರ್ಗ 1ರ ಸ್ವಂತ ಸಂಪನ್ಮೂಲವನ್ನು ಬಳಸಿ ಕೊಂಡು ಸುಸಜ್ಜಿತವಾದ ಹೈಟೆಕ್ ಗ್ರಂಥಾ ಲಯ ಮತ್ತು ತ್ಯಾಜ್ಯ ವಿಲೇವಾರಿ ಘಟಕವನ್ನು 2-3 ತಿಂಗಳಲ್ಲಿ ಪ್ರಾರಂಭಿಸಲು ಸಭೆಗಳನ್ನು ಕರೆದು ಸೂಕ್ತ ತೀರ್ಮಾನ ತೆಗೆದುಕೊಂಡು 4 ತಿಂಗಳ ಅವಧಿ ಯಲ್ಲಿ ಗ್ರಂಥಾಲಯ ಮತ್ತು ವಿಲೇವಾರಿ ಘಟಕವನ್ನು ನಿರ್ಮಾಣ ಮಾಡ ಲಾಗಿದೆ. ಈಗಾಗಲೇ ಗ್ರಂಥಾಲಯದಲ್ಲಿಗ್ರಾಪಂ ವ್ಯಾಪ್ತಿಯ ನಾಗರೀಕರು ಮತ್ತು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳುತ್ತಿದ್ದು, ಜೂ.15ರ ನಂತರ ಕಸ ವಿಲೇವಾರಿ ಘಟವೂ ಕಾರ್ಯ ನಿರ್ವಹಿಸಲು ಸ್ವಚ್ಛ ಗ್ರಾಪಂಯನ್ನಾಗಿಸಲು ನಾಗರೀಕರ ಸಹಕಾರ ನೀಡಬೇಕು.
● ಪ್ರಕಾಶ್.ಎಚ್, ಪಿಡಿಒ, ಜಾಲಿಗೆ ಗ್ರಾಪಂ