Advertisement
ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿಕೊಂಡ ಸುರೇಶ್ ಡಿ. ಪಡುಕೋಣೆ, ಮುಖ್ಯ ಅತಿಥಿ ಹೊಟೇಲ್ ಉದ್ಯಮಿ ಸುರೇಶ್ ಪೂಜಾರಿ, ಅಧ್ಯಕ್ಷ ಸುಬ್ಬ ಜಿ. ದೇವಾಡಿಗ, ಶ್ರೀ ಏಕನಾಥೇಶ್ವರಿ ದೇವಸ್ಥಾನ ಕಟ್ಟಡ ಸಮಿತಿಯ ಅಧ್ಯಕ್ಷ ಅಣ್ಣಯ್ಯ ಶೇರಿಗಾರ್, ಟ್ರಸ್ಟಿ ಎಚ್. ಮೋಹನ್‌ದಾಸ್, ಸಂಘದ ಉಪಾಧ್ಯಕ್ಷ ಎನ್. ಎನ್ ದೇವಾಡಿಗ, ಗೌರವ ಪ್ರಧಾನ ಕಾರ್ಯದರ್ಶಿ ಬಿ.ಎಂ. ದೇವಾಡಿಗ, ಮಹಿಳಾ ವಿಭಾಗದ ಅಧ್ಯಕ್ಷೆ ಸೀತಾ ಎಂ. ದೇವಾಡಿಗ, ಯುವ ವಿಭಾಗದ ಅಧ್ಯಕ್ಷ ರವೀಂದ್ರ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.
Related Articles
Advertisement
ಶ್ರೀ ಏಕನಾಥೇಶ್ವರಿ ಕಟ್ಟಡ ಸಮಿತಿಯ ಟ್ರಸ್ಟಿ ಎಚ್. ಮೋಹನ್‌ದಾಸ್ ಮಾತನಾಡಿ, ಏಕನಾಥೇಶ್ವರಿ ದೇವಸ್ಥಾನ ಕಟ್ಟಡ ನಿರ್ಮಿಸುವಲ್ಲಿ ಅಣ್ಣಯ್ಯ ಶೇರಿಗಾರ್ ಅವರೊಂದಿಗೆ ಸಹಕರಿಸಿದ ಸಂದರ್ಭವನ್ನು ನೆನೆಸಿಕೊಂಡು, ತುಳು-ಕನ್ನಡಿಗರು ಭಾಷೆ ಯಿಂದ ಬೇರೆಯಾಗದೆ ನಾವೆಲ್ಲರೂ ದೇವಾಡಿಗರು ಎಂಬ ಭಾವನೆ ಬೆಳೆಸಿಕೊಂಡು ಮುನ್ನಡೆಯಬೇಕೆಂದು ತಿಳಿಸಿದರು.
ಅಂದು ಬೆಳಗ್ಗೆ ಸಮಾಜ ಬಾಂಧವರಿಗಾಗಿ ಸಂಸ್ಥೆಯು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ವೈವಿಧ್ಯಮಯ ನೃತ್ಯಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನರಂಜಿಸಿದವು. ಬೆಳಗ್ಗೆಯಿಂದ ಮಧ್ಯಾಹ್ನದ ತನಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಾಂಸ್ಕೃತಿಕ ಕಾರ್ಯಕ್ರಮಗಳ ತೀರ್ಪುಗಾರರಾಗಿ ಲಲಿತಾ ಅಂಗಡಿ, ಕುಮಾರಿ ಪ್ರಾಂಜಲಿ ರಾವ್ ಮತ್ತು ಕುಮಾರಿ ಸ್ನೇಹಲ್ ಹೆರೆಂಜಾಲ್ ಇವರು ಸಹಕರಿಸಿದರು. ಅವರಿಗೆ ಸಂಘದ ಅಧ್ಯಕ್ಷರು ಹೂಗುತ್ಛ ನೀಡಿ ಅಭಿನಂದಿಸಿದರು.
ಬೆಳಗ್ಗಿನ ಕಾರ್ಯಕ್ರಮಗಳ ತರುವಾಯ ಸಂಘದ ಮಹಿಳಾ ವಿಭಾಗದವರಿಂದ ಅರಸಿನ ಕುಂಕುಮ ಕಾರ್ಯಕ್ರಮವು ನೆರವೇರಿತು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಅಪರಾಹ್ನದ ಭೋಜನ ವಿರಾಮದ ಅನಂತರ ಕುಮಾರಿ ನಿಶೀತಾ ಅಶೋಕ್ ದೇವಾಡಿಗ ಇವರ ಸ್ವಾಗತ ನೃತ್ಯದೊಂದಿಗೆ ಸಭಾ ಕಾರ್ಯಕ್ರಮ ಆರಂಭಗೊಂಡಿತು. ಸಭಾ ಕಾರ್ಯಕ್ರಮವನ್ನು ಗಣ್ಯರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಸಭಾ ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ, ವಾರ್ಷಿಕ ಕ್ರೀಡೋತ್ಸವದಲ್ಲಿ ವಿಜೇತರಾದ ಕ್ರೀಡಾಳುಗಳಿಗೆ ಮತ್ತು ಡಿಪಿಎಲ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು. ಅತಿಥಿ ಗಣ್ಯರನ್ನು ಹಾಗೂ ಸಮಸ್ತ ಸಮಾಜ ಬಾಂಧವರನ್ನು ಜಿ.ಎ ದೇವಾಡಿಗರು ಹೃದಯಪೂರ್ವಕವಾಗಿ ಸ್ವಾಗತಿಸಿ, ಸಂಘದ ಕುರಿತಾಗಿ ಸಂಕ್ಷಿಪ್ತ ಮಾಹಿತಿಯನ್ನು ಸಭೆಗೆ ನೀಡಿದರು. ಮಹಿಳಾ ವಿಭಾಗದ ಅಧ್ಯಕ್ಷೆ ಸೀತಾ ಎಂ. ದೇವಾಡಿಗ ಹಾಗೂ ಯುವ ವಿಭಾಗದ ಅಧ್ಯಕ್ಷ ರವೀಂದ್ರ ದೇವಾಡಿಗ ಇವರು ತಮ್ಮ ವಿಭಾಗಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಸಂಕ್ಷಿಪ್ತವಾಗಿ ಸಭೆಗೆ ತಿಳಿಸಿದರು.
ಸಭಾ ಕಾರ್ಯಕ್ರಮವನ್ನು ಪ್ರಧಾನ ಕಾರ್ಯದರ್ಶಿ ಬಿ.ಎಂ. ದೇವಾಡಿಗ ಮತ್ತು ಜಿ.ಎ. ದೇವಾಡಿಗರು ನಿರೂಪಿಸಿದರು. ಹಾಗೆಯೇ ಬೆಳಗ್ಗಿನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಶೋಕ್ ದೇವಾಡಿಗ ಮತ್ತು ರೋಹಿತ್ ದೇವಾಡಿಗ ನಿರೂಪಿಸಿದರು.
ಮಾಜಿ ಅಧ್ಯಕ್ಷ ಎಸ್.ವಿ. ದೇವಾಡಿಗ, ಮಹಿಳಾ ವಿಭಾಗದ ಉಪಾಧ್ಯಕ್ಷೆ ಸುಶೀಲಾ ಎಸ್.ದೇವಾಡಿಗ ಮತ್ತಿತರರು ಉಪಸ್ಥಿತರಿದ್ದು ಸಹಕರಿಸಿದರು. ಜತೆ ಕಾರ್ಯದರ್ಶಿ ಪ್ರಭಾಕರ ದೇವಾಡಿಗ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.