Advertisement
20ರ ಹರೆಯದ ಪಡಿಕ್ಕಲ್ ಗುರುವಾರದ ರಾಜಸ್ಥಾನ್ ರಾಯಲ್ಸ್ ಎದುರಿನ ಪಂದ್ಯದಲ್ಲಿ ಅಜೇಯ 101 ರನ್ ಬಾರಿಸುವ ಜತೆಗೆ ಕೊಹ್ಲಿಯೊಂದಿಗೆ ಮೊದಲ ವಿಕೆಟಿಗೆ 16.3 ಓವರ್‌ಗಳಲ್ಲಿ 181 ರನ್ ಪೇರಿಸುವಲ್ಲಿ ನೆರವಾದರು. ಆರ್‌ಸಿಬಿಗೆ 10 ವಿಕೆಟ್‌ಗಳ ಭರ್ಜರಿ ಜಯ ತಂದಿತ್ತರು. ರಾಜಸ್ಥಾನ್ ತಂಡದ 177ಕ್ಕೆ ಉತ್ತರವಾಗಿ ಆರ್‌ಸಿಬಿ ಕೇವಲ 16.3 ಓವರ್‌ಗಳಲ್ಲಿ ನೋಲಾಸ್ 181 ರನ್ ಬಾರಿಸಿತು.
Related Articles
Advertisement
“ನಮ್ಮಿಬ್ಬರ ನಡುವೆ ಉತ್ತಮ ಹೊಂದಾಣಿಕೆ ಇತ್ತು. ಸತತವಾಗಿ ಸ್ಟ್ರೈಕ್ ರೊಟೇಟ್ ಮಾಡುತ್ತ ಹೋದೆವು. ಇದೊಂದು ಉತ್ತಮ ಟ್ರ್ಯಾಕ್ ಆಗಿತ್ತು. ಹೀಗಾಗಿ ಯಾವ ಹಂತದಲ್ಲೂ ಬ್ಯಾಟಿಂಗ್ ಕಠಿನ ಎನಿಸಲಿಲ್ಲ’ ಎಂದರು.
“ಹಾಗೆಯೇ ಕೋವಿಡ್‌ನಿಂದ ಚೇತರಿಸಿಕೊಂಡು ಆಡಲಿಳಿದ ನನ್ನ ಮುಂದೆ ದೊಡ್ಡ ಸವಾಲಿತ್ತು. ಈಗ ನಿರಾಳನಾಗಿದ್ದೇನೆ. ತಂಡದ ಗೆಲುವಿನಲ್ಲಿ ನನ್ನ ಪಾಲನ್ನು ಸಲ್ಲಿಸುತ್ತಿರುವ ತೃಪ್ತಿ ಇದೆ’ ಎಂದೂ ಪಡಿಕ್ಕಲ್ ಹೇಳಿದರು.
ಮೊದಲ ಶತಕದ ಅನುಭವ“ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಶತಕದ ಕುರಿತು ಚಿಂತಿಸಲೇ ಇಲ್ಲ. ಪಂದ್ಯವನ್ನು ಸಾಧ್ಯವಾದಷ್ಟು ಬೇಗ ಮುಗಿಸುವುದೇ ನಮ್ಮ ಯೋಜನೆಯಾಗಿತ್ತು. ಹಾಗೆಯೇ ನನ್ನ ಆಟದಲ್ಲಾಗಲೀ, ಟೆಕ್ನಿಕ್‌ನಲ್ಲಾಗಲೀ ಯಾವುದೇ ವಿಶೇಷ ಬದಲಾವಣೆ ಮಾಡಿಕೊಳ್ಳಲಿಲ್ಲ. ಕಳೆದೆರಡು ವರ್ಷಗಳ ಆಟವನ್ನೇ ಆಡಿದ್ದೇನೆ. ಸ್ಥಿರ ಪ್ರದರ್ಶನ ಮುಂದುವರಿಸುವುದು ನನ್ನ ಗುರಿ’ ಎಂದು ಪಡಿಕ್ಕಲ್ ಹೇಳಿದರು. ಅವರು ಕೇವಲ 52 ಎಸೆತ ಎದುರಿಸಿ 11 ಬೌಂಡರಿ, 6 ಸಿಕ್ಸರ್ ಸಿಡಿಸಿ ಅಬ್ಬರಿಸಿದರು.
ಆರ್‌ಸಿಬಿ ತನ್ನ ಮುಂದಿನ ಪಂದ್ಯವನ್ನು ರವಿವಾರ ಚೆನ್ನೈ ವಿರುದ್ಧ ಆಡಲಿದೆ.