Advertisement
ಡೆಟಾಲ್ ಭಾರತದಾದ್ಯಂತ ಇಂತಹ 100 ಮಂದಿ ಕೋವಿಡ್ ಯೋಧರ ಅನುಭವಗಳನ್ನು ಸಂಗ್ರಹಿಸಿದೆ ಮತ್ತು ಸಹಸ್ರಾರು ಜನರಿಗೆ ನಿಸ್ವಾರ್ಥವಾಗಿ ಸಹಾಯ ಮಾಡಿದ ಕೋವಿಡ್ ರಕ್ಷಕರ ಗೌರವಾರ್ಥವಾಗಿ ಅವುಗಳನ್ನು ಲಿಕ್ವಿಡ್ ಹ್ಯಾಂಡ್‌ವಾಶ್ ಪ್ಯಾಕ್‌ಗಳಲ್ಲಿ ಇರಿಸಿ ಜನರಿಗೆ ತಲುಪಿಸುತ್ತಿದೆ.
Related Articles
Advertisement
ಇದನ್ನೂ ಓದಿ:ಇನ್ನೊಂದು ವಾರ ಲಾಕ್ ಡೌನ್ ವಿಸ್ತರಣೆ ಸಾಧ್ಯತೆ : ಸುಳಿವು ನೀಡಿದ ಸಿಎಂ
ಅಂತಹ ಒಂದು ಘಟನೆ ಬೆಂಗಳೂರಿನ 32 ವರ್ಷದ ಮನ್ಸೂರ್ ಚೆಟ್ಲು ಅವರ ಕಥೆ. ಕೋವಿಡ್ ನ ಎರಡನೇ ಅಲೆಯು ರಾಜ್ಯವನ್ನು ಅಪ್ಪಳಿಸುತ್ತಿದ್ದಂತೆ, ಅವರು ಉಚಿತ ಆಹಾರ ಪ್ಯಾಕೆಟ್‌ಗಳು, ಆಮ್ಲಜನಕ ಸಿಲಿಂಡರ್‌ಗಳನ್ನು ಕೋವಿಡ್ ಸಂತ್ರಸ್ತರಿಗೆ ವಿತರಿಸಿದರು, ಜೊತೆಗೆ ಈ ಸಿಲಿಂಡರ್‌ಗಳನ್ನು ಹೇಗೆ ಬಳಸಬೇಕೆಂದು ಜನರಿಗೆ ಮಾರ್ಗದರ್ಶನವನ್ನು ನೀಡಿದರು ಮತ್ತು ಬೃಹತ್ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ಸಹಯೋಗದೊಂದಿಗೆ ಕೋವಿಡ್ ಟ್ರಯಾಜ್ ತೆರೆಯಲು ಸಹಾಯ ಮಾಡಿದರು. ಮನ್ಸೂರ್ ಅವರು ಮಾರ್ಚ್ 2021 ರಲ್ಲಿ ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದರೂ ಅವರು ಸಹಾಯ ಮುಂದುವರೆಸಿದರು. ಲಗೇಜ್ ಟ್ರಕ್‌ಗಳು, ಆಮ್ಲಜನಕದ ಪೈಪ್‌ಲೈನ್‌ಗಳನ್ನು ಸ್ಥಾಪಿಸಿದರು. ದಿನಕ್ಕೆ ಸುಮಾರು 18 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ ಮನ್ಸೂರ್, ಕೋವಿಡ್ ನಿಂದ ಬಳಲುತ್ತಿರುವ ಸುಮಾರು 1,000 ಕ್ಕೂ ಹೆಚ್ಚು ಜನರಿಗೆ ಸಹಾಯ ಮಾಡುದರು. ಗುರುತಿನ ಚೀಟಿಗಳ ಕೊರತೆಯಿಂದಾಗಿ ಸಹಾಯ ಪಡೆಯಲು ಸಾಧ್ಯವಾಗದ ನಿರ್ಗತಿಕರಿಗೆ ಮತ್ತೊಂದು ಟ್ರಯಾಜ್ ಸ್ಥಾಪಿಸುವ ಮೂಲಕ ತನ್ನ ಕೆಲಸವನ್ನು ವಿಸ್ತರಿಸಲು ಅವರು ನಿರ್ಧರಿಸಿದ್ದಾರೆ.
ಇಂಥ ಅನೇಕ ಕಥನಗಳನ್ನು ಇದು ಒಳಗೊಂಡಿದೆ. ಡೆಟಾಲ್ 4 ಮಿಲಿಯನ್ #DettolSalute ಪ್ಯಾಕ್‌ಗಳನ್ನು ತಯಾರಿಸಿದೆ.