ಮಂಗಳೂರು: ಅಯೋಧ್ಯೆಯಲ್ಲಿ ರಾಮಧಿಮಂದಿರ ನಿರ್ಮಾಣವಾದರೆ ಮಾತ್ರ ದೇಶದಲ್ಲಿ ರಾಮರಾಜ್ಯ ನಿರ್ಮಾಣವಾಗುತ್ತದೆ ಎಂದು ವಿಶ್ವ ಹಿಂದೂ ಪರಿಷತ್‌ನ ಅಖೀಲ ಭಾರತೀಯ ಸಹ ಕಾರ್ಯದರ್ಶಿ ಸುರೇಂದ್ರ ಕುಮಾರ್ ಜೈನ್ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃ ಮಂಡಳಿ, ದುರ್ಗಾ ವಾಹಿನಿ ಮತ್ತು ಶ್ರೀ ರಾಮೋತ್ಸವ ಸಮಿತಿ ವತಿಯಿಂದ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಶ್ರೀ ರಾಮೋತ್ಸವ ಸಮಾರೋಪದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ದೇಶದ ವಿಕಾಸ ರಾಮ ಮಂದಿರದಿಂದ ಆಗುತ್ತದೆ. ರಾಮ ಮಂದಿರ ನಿರ್ಮಾಣ ಈ ಸಮಾಜಕ್ಕೆ ಬೇಕಾಗಿದೆ ಹೊರತು ಸರಕಾರಕ್ಕಲ್ಲ. ಅಯೋಧ್ಯೆಯಲ್ಲಿ ಯಾವಾಗ ರಾಮ ಮಂದಿರ ನಿರ್ಮಾಣವಾಗುತ್ತಯೋ ಅಂದು ದೇಶದಲ್ಲಿ ಭಯೋತ್ಪಾದನೆ ನಿಲ್ಲುತ್ತದೆ ಎಂದು ಅವರು ಹೇಳಿದರು.
ಶ್ರೀರಾಮ ರಾಷ್ಟ್ರ ಪುರುಷ. ಸಮಾಜದಲ್ಲಿ ಏಕತೆ, ಪರಸ್ಪರ ಪ್ರೀತಿ ಸಹೋದರತೆಯ ಭಾವನೆ ಬೆಳೆಯಲು ಶ್ರೀರಾಮನ ಆದರ್ಶ ಗುಣವನ್ನು ಮೈಗೂಡಿಸಿಕೊಳ್ಳಬೇಕು. ಎಲ್ಲರನ್ನು ಒಂದಾಗಿಸಿ ಕೊಂಡೊಯ್ಯುವ ಗುಣವನ್ನು ಶ್ರೀರಾಮನಿಂದ ಕಲಿಯಬೇಕಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದಂತಹ ಮಹಾನ್ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಈ ಹಿಂದೆ ಕಾಶ್ಮೀರದಲ್ಲಿ ಸೇನೆಯ ಮೇಲೆ ಕಲ್ಲು ಎಸೆಯುತ್ತಿದ್ದರು. ಆದರೆ, ಈಗ ಕರ್ನಾಟಕದಲ್ಲಿ ಪೊಲೀಸರ ಮೇಲೆ ಕಲ್ಲು ಎಸೆದು ದೌರ್ಜನ್ಯ ನಡೆಸಲಾಗುತ್ತಿದೆ. ಆ ಮೂಲಕ ಕರ್ನಾಟಕ ಇದೀಗ ಕಾಶ್ಮೀರವಾಗುತ್ತಿದೆ. ಕರಾವಳಿಯ ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದರೂ ಸರಕಾರ ಸುಮ್ಮನೆ ಕುಳಿತಿದೆ. ಹೀಗಾಗಿ ನಾವೆಲ್ಲರೂ ಈ ಬಗ್ಗೆ ಎಚ್ಚರ ವಹಿಸಬೇಕಿದೆ ಎಂದು ಖಾರವಾಗಿ ನುಡಿದರು.
ಶ್ರೀ ರಾಮೋತ್ಸವ ಸಮಿತಿಯ ಗೌರವಾಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಧಿಗೋಡು, ಉದ್ಯಮಿಗಳಾದ ದೇವಿ ಪ್ರಸಾದ್ ಶೆಟ್ಟಿ, ಸತೀಶ್ ಶೆಟ್ಟಿ ಮೂಡು ಜಪ್ಪುಗುತ್ತು, ಆಸರೆ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷೆ ಡಾ| ಆಶಾ ಜ್ಯೋತಿ ರೈ, ಸಮಿತಿ ಅಧ್ಯಕ್ಷ ಸಂದೇಶ್ ಶೆಟ್ಟಿ , ಗೌರವ ಮಾರ್ಗದರ್ಶಕ ರಾಜಗೋಪಾಲ ರೈ, ಪುಷ್ಪಧಿರಾಜ್ ಜೈನ್, ಉಪಾಧ್ಯಕ್ಷ ಸುದರ್ಶನ ಮೂಡಧಿಬಿದಿರೆ, ಆರ್ಥಿಕ ಸಮಿತಿ ಸಂಚಾಲಕರಾದ ಜಗದೀಶ್ ಶೇಣವ, ಜಿತೇಂದ್ರ ಕೊಟ್ಟಾರಿ, ಶರಣ್ ಪಂಪ್‌ವೆಲ್, ಬಿಜೆಪಿ ಮುಖಂಡಧಿರಾದ ವೇದವ್ಯಾಸ ಕಾಮತ್, ಉಮಾಧಿನಾಥ ಅಮೀನ್, ಕಾರ್ಯದರ್ಶಿ ಗೋಪಾಲ ಕುತ್ತಾರ್, ಕೋಶಾಧಿಧಿಕಾರಿ ಪ್ರಶಾಂತ್ ಉಬರಂಗಳ, ದುರ್ಗಾವಾಹಿನಿ ಜಿಲ್ಲಾ ಸಂಚಾಧಿಲಕಿ ಸುರೇಖಾರಾಜ್ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ರಾವಣ ಪ್ರತಿಕೃತಿ ದಹನ ಹಾಗೂ ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಿತು.