ಮುದ್ದೇಬಿಹಾಳ: ತಾಲೂಕಿನ ಅಡವಿ ಸೋಮನಾಳ ಗ್ರಾಮದಲ್ಲಿ ನಡೆದಿದ್ದ ನಿಂಗಪ್ಪ ಹನುಮಪ್ಪ ವಾಲಿಕಾರ (40) ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂ ಧಿಸಿದಂತೆ ಆರೋಪಿ ಅದೇ ಗ್ರಾಮದ ಬಾಳಪ್ಪ ಹೆಳವರ ಎಂಬಾತನನ್ನು ಇಲ್ಲಿನ ಸಿಪಿಐ ಆನಂದ ವಾಘೊ¾àಡೆ ಮತ್ತು ಅವರ ತಂಡ ಜು. 2ರಂದು ಬಂಧಿ ಸಿ ಜೈಲಿಗೆ ಕಳುಹಿಸಿದ್ದಾರೆ.
ಜೂ. 30ರಂದು ಕ್ಯಾತನಡೋಣಿ ತಾಂಡಾದಲ್ಲಿ ರಾಮಣ್ಣ ಲಮಾಣಿ ಇವರ ಮನೆಯ ಮುಂದಿನ ರಸ್ತೆಯ ಮೇಲೆ ನಿಂಗಣ್ಣನು ತನ್ನ ಮಗಳ ಶಾಲೆಯ μà ತುಂಬಬೇಕಿದ್ದು ಕೈಗಡ ಪಡೆದ ಹಣ ಮರಳಿ ಕೊಡುವಂತೆ ಬಾಲಪ್ಪನಿಗೆ ಕೇಳಿದ್ದಾನೆ. ರಸ್ತೆಯಲ್ಲಿ ಹಣ ಕೇಳಿದ್ದಕ್ಕೆ ಕೋಪಗೊಂಡ ಬಾಲಪ್ಪ ತನ್ನ ಕೈಯಲ್ಲಿದ್ದ ಕೂರಿಗೆ ತಾಳದಿಂದ ನಿಂಗಪ್ಪನ ತಲೆಗೆ ಹೊಡೆದಿದ್ದಾನೆ. ಬಿಡಿಸಲು ಹೋದ ಸಾಕ್ಷಿದಾರರಿಗೂ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ.
ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವದಿಂದ ನರಳುತ್ತಿದ್ದ ನಿಂಗಪ್ಪನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮುದ್ದೇಬಿಹಾಳ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆತರುವಾಗ ಮಾರ್ಗಮಧ್ಯೆ ನಿಂಗಪ್ಪ ಸಾವನ್ನಪ್ಪಿದ್ದ. ಈ ಕುರಿತು ನಿಂಗಪ್ಪನ ಸಹೋದರ ಲಕ್ಕಪ್ಪ ವಾಲೀಕಾರ ಗ್ರಾಮದ ವ್ಯಾಪ್ತಿ ಹೊಂದಿರುವ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ.
ಪ್ರಕರಣದ ತನಿಖೆ ಕುರಿತು ಎಸ್ಪಿ ಅನುಪಮ್ ಅಗರವಾಲ, ಹೆಚ್ಚುವರಿ ಎಸ್ಪಿ ಡಾ| ರಾಮ ಅರಸಿದ್ದಿ ಅವರ ಮಾರ್ಗದರ್ಶನದಲ್ಲಿ ಬಸವನಬಾಗೇವಾಡಿ ಡಿವೈಎಸ್ಪಿ ಅರುಣಕುಮಾರ ಕೋಳೂರ ಅವರು ಇಲ್ಲಿನ ಸಿಪಿಐ ಆನಂದ ವಾಘೊ¾àಡೆ, ತಾಳಿಕೋಟೆ ಪಿಎಸೈ ವಿನೋದ ದೊಡಮನಿ, ಸಿಎಚ್‌ಸಿಗಳಾದ ಎಂ.ಕೆ. ಡೋಣೂರ, ಎಂ.ಎಲ್. ಪಟ್ಟೇದ, ಸಿಪಿಸಿ ಎಸ್.ಎಂ. ಚಲವಾದಿ ಅವರನ್ನೊಳಗೊಂಡ ತನಿಖಾ ತಂಡ ರಚಿಸಿದ್ದರು. ಈ ತಂಡವು ಆರೋಪಿಯನ್ನು ಜು.2ರಂದು ಅಡವಿಸೋಮನಾಳ ಗ್ರಾಮದಲ್ಲಿ ಬಂ ಧಿಸಿ, ಅಪರಾಧಕ್ಕೆ ಬಳಸಿದ್ದ ವಸ್ತುಗಳನ್ನು ವಶಪಡಿಸಿಕೊಂಡು ಜೈಲಿಗೆ ಕಳಿಸಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.