ಬೆಂಗಳೂರು: 8 ತಿಂಗಳ ಹಿಂದೆ ಆಸ್ತಿ ವಿಚಾರವಾಗಿ ಮಹಿಳೆಯೊಬ್ಬರ ಕೊಲೆಗೈದಿದ್ದ ಇಬ್ಬರು ಆರೋಪಿ ಗಳನ್ನು ಸುಬ್ರಹ್ಮಣ್ಯನಗರ ಪೊಲೀಸರು ಬಂಧಿಸಿದ್ದಾರೆ.
ಮಂತ್ರಾಲಯ ಮೂಲದ ನೂರ್ ಅಹಮ್ಮದ್ (43), ಸತ್ಯ (48) ಬಂಧಿತರು. ಆರೋಪಿಗಳು ತಮ್ಮ ಸಹಚರರ ಜತೆ ಸೇರಿ ರಾಜಾಜಿನಗರ ನಿವಾಸಿ ಸೀತಾ ಎಂಬಾಕೆಯನ್ನು 8 ತಿಂಗಳ ಹಿಂದೆ ಕೊಲೆಗೈ ದಿದ್ದರು. ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿ ಕುಮಾರ್ ಮತ್ತು ಮೆಂಟಲ್ ರಘು ಎಂಬವರು ಈಗಾಗಲೇ ಮೃತಪಟ್ಟಿದ್ದಾರೆ. ವಿ
ಧವೆ ಸೀತಾ ತನ್ನ ಸಹೋದರ ಸಂಬಂಧಿ ಮನೆ ಯಲ್ಲಿ ವಾಸವಿದ್ದರು. ಮಾ.25 ರಂದು ಹೊರಗೆ ಹೋಗಿ ಬರುವುದಾಗಿ ಹೇಳಿದ್ದ ಸೀತಾ ನಿಗೂಢ ವಾಗಿ ನಾಪತ್ತೆಯಾಗಿದ್ದರು. ಮಂತ್ರಾಲಯ ಮೂಲದ ಸಹೋದರ ವೆಂಕಟೇಶ್ ಆಚಾರ್ ಸುಬ್ರಹ್ಮಣ್ಯನಗರ ಠಾಣೆಯಲ್ಲಿ ದೂರು ದಾಖಲಿಸಿ ದ್ದರು. ಪೊಲೀಸರು ಸಿಡಿಆರ್ ಪರಿಶೀಲಿಸಿದಾಗ ಕೊನೆಯದಾಗಿ ಸೀತಾ ಅವರ ಮೊಬೈಲ್‌ಗೆ ಆರೋಪಿಗಳಾದ ನೂರ್ ಅಹಮ್ಮದ್, ಸತ್ಯ, ಕುಮಾರ್, ಮೆಂಟಲ್ ರಘು ಕರೆ ಮಾಹಿತಿ ಸಿಕ್ಕಿತ್ತು. ಆ ಹಿನ್ನೆಲೆಯಲ್ಲಿ ಸೀತಾ ಅವರ ಸಹೋದರ ವೆಂಕಟೇಶ್ ಅವರನ್ನು ವಿಚಾರಿಸಿದಾಗ ಆರೋಪಿಗಳು ಹಾಗೂ ಅವರ ಸ್ನೇಹಿತರು, ತನಗೆ ಪ್ರಾಣ ಬೆದರಿಕೆ ಹಾಕಿ ಮಂತ್ರಾಲಯದಲ್ಲಿರುವ ಜಮೀನನ್ನು ಅವರ ಹೆಸರಿಗೆ ಬರೆಸಿಕೊಂಡಿದ್ದರು ಎಂದರು. ಮಂತ್ರಾಲಯಕ್ಕೆ ತೆರಳಿ ನೂರ್ ಅಹಮ್ಮದ್‌ನ್ನು ವಶಕ್ಕೆ ಪಡೆದು ವಿಚಾರಿಸಿದ್ದರು.
“ವೆಂಕಟೇಶ್ ಆಚಾರ್‌ಗೆ ಸೇರಿದ ಆಸ್ತಿಯಲ್ಲಿ 2 ಎಕರೆ ಜಮೀನನ್ನು 53 ಲಕ್ಷ ರೂ.ಗೆ ತಾನೂ, ಉದಯ್ ಕುಮಾರ್ ರೆಡ್ಡಿ, ಅಮೀನ್ ಬಾಷಾ ಖರೀದಿಸಿ ಮಾ.8ರಂದು ಸೀತಾಗೆ ಗೊತ್ತಿಲ್ಲದಂತೆ ರಿಜಿಸ್ಟ್ರಾರ್ ಮಾಡಿಸಿಕೊಂಡಿದ್ದೆವು. ಜಮೀನನ್ನು ಸೂಗೂರಿನ ಆನಂದ್‌ಗೆ 80 ಲಕ್ಷ ರೂ.ಗೆ ಮಾರಲು ಒಪ್ಪಂದ ವಾಗಿತ್ತು. ಆದರೆ, ಜಮೀನನ್ನು ರಿಜಿಸ್ಟ್ರರ್ ವೇಳೆ ಸೀತಾ ಸಹಿ ಬೇಕೆಂದಾಗ, ಸಹಿ ಪಡೆಯುವ ಕುಮಾರ್‌ಗೆ ಒಪ್ಪಿಸಿದ್ದೆವು ಎಂದು ತಿಳಿಸಿದ್ದಾರೆ.
ಸೈನೆಡ್ ಕೊಟ್ಟು ಕೊಲೆ : ಮಾ.25ರಂದು ಆರೋಪಿಗಳು ಚಿನ್ನಾಭರಣ ಖರೀದಿಸುವ ನೆಪದಲ್ಲಿ ಸೀತಾ ಅವರನ್ನು ಕರೆ ದೊಯ್ದು, ಮಾರ್ಗ ಮಧ್ಯೆ ಆಸ್ತಿ ವಿಚಾರ ಕೇಳಿದಾಗ ಆಕೆ ಸಹಿ ಹಾಕಲು ನಿರಾಕರಿಸಿದ್ದರು. ಹೀಗಾಗಿ ಆಕೆಯನ್ನು ಕೊಲೆಗೈಯಲು ನಿರ್ಧರಿಸಲಾಗಿತ್ತು. ನಂತರ ಕುಣಿಗಲ್ ಮಾರ್ಗದಿಂದ ಹಾಸನಕ್ಕೆ ಕರೆ ದೊಯ್ದು, ಅಲ್ಲಿಂದ ಹೊಸಪೇಟೆಗೆ ಹೋಗುವ ಮಾರ್ಗಮಧ್ಯೆ ತಲೆ ನೋವಿನ ಮಾತ್ರೆ ಎಂದು ಸೈನೆಡ್ ಕೊಟ್ಟು ಹತ್ಯೆಗೈದಿದ್ದರು. ನಂತರ ಹುಲಿಗೆಮ್ಮ ದೇವಿ ನೀರಿನ ಕಾಲುವಿಗೆ ಮೃತದೇಹ ಎಸೆದು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.