Advertisement

1.5 ಕಿ.ಗ್ರಾಂ ಗಾಂಜಾ ಸಹಿತ ಓರ್ವನ ಬಂಧನ

11:50 AM Jul 29, 2019 | Team Udayavani |

ಬೆಳ್ತಂಗಡಿ: ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ಆರೋಪದಲ್ಲಿ ಕಳಿಯ ಗ್ರಾಮದ ಗೇರುಕಟ್ಟೆ ಕಜೆ ಮನೆ ನಿವಾಸಿ ಉಮ್ಮರ್‌ ಫಾರೂಕ್‌ (30) ಎಂಬಾತನನ್ನು ಬೆಳ್ತಂಗಡಿ ಪೊಲೀಸರು ರವಿವಾರ ಕುವೆಟ್ಟು ಗ್ರಾಮದ ಮದ್ದಡ್ಕ ಸಮೀಪದ ಕಿನ್ನಿಗೋಳಿ ರೇಷ್ಮೆ ರಸ್ತೆ ಜಂಕ್ಷನ್‌ನಲ್ಲಿ ಬಂಧಿಸಿದ್ದಾರೆ. ಆತನಿಂದ 15,000 ರೂ. ಮೌಲ್ಯದ 1.575 ಕಿ.ಗ್ರಾಂ. ಗಾಂಜಾ ವಶಪಡಿಸಿಕೊಳ್ಳಲಾಗಿದೆ.

Advertisement

ಈತ ಪ್ಲಾಸ್ಟಿಕ್‌ ಕ್ಯಾನ್‌ನಲ್ಲಿ ತಲಾ 45 ಗ್ರಾಂ. ತೂಕದ ತಲಾ 35 ಪ್ಲಾಸ್ಟಿಕ್‌ ಪ್ಯಾಕೆಟ್‌ಗಳಲ್ಲಿ ಗಾಂಜಾವನ್ನು ಬೀದರ್‌ ಮೂಲದ ವ್ಯಕ್ತಿಯಿಂದ 10,000 ರೂ.ಗೆ ಖರೀದಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬೆಳ್ತಂ ಗಡಿ ಎಸ್‌ಐ ರವಿ ಬಿ.ಎಸ್‌. ನೇತೃತ್ವದಲ್ಲಿ ಸಿಬಂದಿ ಅಶೋಕ್‌ ಕುಮಾರ್‌ ಕಾರ್ಯಾಚರಣೆ ನಡೆಸಿದ್ದಾರೆ.

ಹಲವು ಪ್ರಕರಣಗಳಲ್ಲಿ ಆರೋಪಿ
ಬಂಧಿತನ ಮೇಲೆ ಬೆಳ್ತಂಗಡಿ ಸಹಿತ ವಿವಿಧ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ. ಆತನ ವಿರುದ್ಧ ಇದು ಮೂರನೇ ಗಾಂಜಾ ಪ್ರಕರಣ. ಎರಡು ಪ್ರಕರಣಗಳು ಬೆಳ್ತಂಗಡಿಯಲ್ಲಿ ಹಾಗೂ ಒಂದು ಪುಂಜಾಲಕಟ್ಟೆಯಲ್ಲಿ ದಾಖಲಾಗಿದೆ. ಪೊಲೀಸರ ಮೇಲೆ ಹಲ್ಲೆ ಹಾಗೂ ಕೌಟುಂಬಿಕ ವಿವಾದ ಸಂಬಂಧಿ ದೂರುಗಳು ಕೂಡ ಈತನ ಮೇಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next