Advertisement

ಪುಷ್ಕರಣಿಯಲ್ಲಿ ಖರೇಜ್‌ ಮಾದರಿ ಪತ್ತೆ

04:46 PM Apr 02, 2019 | pallavi |
ಬಸವಕಲ್ಯಾಣ: ಶಿವಪುರ ಗ್ರಾಮದ ಕೊಂಡಲೇಶ್ವರ (ಸಿದ್ದೇಶ್ವರ) ದೇವಸ್ಥಾನ ಎದುದಿನ ಪುಷ್ಕರಣಿಯ ಹೂಳೆತ್ತುವ ವೇಳೆ ಬೀದರ್‌ನ ಖರೇಜ್‌ ಮಾದರಿಯ ಖರೇಜ್‌ ಪತ್ತೆಯಾಗಿದ್ದು ಎಲ್ಲರಲ್ಲಿ ಕೂತುಹಲ ಹುಟ್ಟಿಸಿದೆ.
ಐತಿಹಾಸಿಹಕ ಹಿನ್ನೆಲೆ ಹೊಂದಿದ ಈ ಪುಷ್ಕರಣಿ ಒಂದು ಕಾಲದಲ್ಲಿ ಬಸವಕಲ್ಯಾಣ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ಸಭೆ-ಸಮಾರಂಭಗಳಿಗೆ ಕುಡಿಯಲು ಹಾಗೂ ಬಳಕೆಗೆ ಬೇಕಾಗುವಷ್ಟು ನೀರು ಪೂರೈಸುವ ಕೇಂದ್ರವಾಗಿತ್ತು. ಆದರೆ
ಕೆಲವು ವರ್ಷಗಳಿಂದ ನಿರ್ವಹಣೆ ಕೊರತೆ ಮತ್ತು ಜನಪ್ರತಿನಿಧಿ ಗಳ ನಿರ್ಲಕ್ಷéದಿಂದ ಪುಷ್ಕರಣಿ ತ್ಯಾಜ್ಯ ಹಾಕುವ ತೊಟ್ಟಿಯಾಗಿ ಮಾರ್ಪಟ್ಟಿತ್ತು. ಸಂಬಂಧ ಪಟ್ಟವರ ಗಮನಕ್ಕೆ ತಂದರೂ ಸಂರಕ್ಷಣೆಗೆ ಮುಂದಾಗಲಿಲ್ಲ. ಹೀಗಾಗಿ ಗ್ರಾಮಸ್ಥರು ಮತ್ತು ಭಕ್ತರು ಸ್ವತಃ ಹಣ ಖರ್ಚು ಮಾಡಿ ಕ್ರೇನ್‌ ಮೂಲಕ ಹೂಳೆತ್ತುವ ಕಾಮಗಾರಿ ಮಾಡುವಾಗ ಖರೇಜ್‌ ಮಾದರಿ ಪತ್ತೆಯಾಗಿದೆ.
ಮೇಲಿಂದ ನೋಡಿದರೆ ಬಾವಿ ಆಕಾರದಂತೆ ಕಾಣುತ್ತದೆ. ಒಳಗಡೆ ಇಳಿದು ನೋಡಿದಾಗ ಯಾವುದೋ ಕೆರೆ ಅಥವಾ ನೀರಿನ ಮೂಲಕ್ಕೆ ಸಂಪರ್ಕ ಕಲ್ಪಿಸಿರಬಹುದು ಎಂಬಂತೆ ಕಾಣುತ್ತಿದೆ ಎಂದು ಕಾರ್ಮಿಕರು ಮಾಹಿತಿ ನೀಡಿದ್ದಾರೆ.
ಪುಷ್ಕರಣಿ ಒಳಭಾಗದ ವರೆಗೆ ಮೆಟ್ಟಿಲು ನಿರ್ಮಾಣ ಮಾಡಿರುವುದನ್ನು ನೋಡಿದರೆ, ಖರೇಜ್‌ನಿಂದ ಬಂದ ಶುದ್ಧ ಕುಡಿಯುವ ನೀರು ತುಂಬಿಕೊಂಡು ಹೋಗುತ್ತಿರಬಹುದು ಎಂದು ಸ್ಥಳದಲ್ಲಿದ್ದ ಗ್ರಾಮಸ್ಥರು ಮತ್ತು ಸಂಶೋಧಕರ ಅಭಿಪ್ರಾಯವಾಗಿದೆ.
ಖರೇಜ್‌ ಭಾಗದಲ್ಲಿ ಅಗೆದಷ್ಟು ತೋಟದಲ್ಲಿರುವ ಫಲವತ್ತಾದ ಮಣ್ಣು ಮತ್ತು ಮರಳು ಬರುತ್ತಿದೆ. ಈಗಾಗಲೇ ಪುಷ್ಕರಣಿಯಲ್ಲಿ ನೀರು ಚಿಮ್ಮುತ್ತಿದೆ. ಅದನ್ನು ಸಂಪೂರ್ಣವಾಗಿ ಅಗೆದರೆ ಶಾಶ್ವತ ನೀರಿನ ಮೂಲಗಳು ಸಿಗಬಹುದು.
ಏಕೆಂದರೆ ದಿ| ಅನುರಾಗ ತಿವಾರಿ ಅವರು ಬೀದರ್‌ನ ಜಿಲ್ಲಾ ಧಿಕಾರಿಯಾಗಿದ್ದ ಸಂದರ್ಭದಲ್ಲಿ ವಿಶೇಷ ಕಾಳಜಿ ವಹಿಸಿ ಕೋಟ್ಯಂತ ರೂ. ಖರ್ಚು ಮಾಡಿ ಅವುಗಳಿಗೆ ಮರು ಜೀವ ನೀಡಿ ನೀರಿನ ಮೂಲಗಳನ್ನು ಹೆಚ್ಚಿಸಿರುವುದನ್ನು ನಾವು
ಇಲ್ಲಿ ಸ್ಮರಿಸಬಹುದು.
ಐತಿಹಾಸಿಕ ಹಿನ್ನೆಲೆ ಹೊಂದಿದ ಪುಷ್ಕರಣಿ ಒಳಗೆ ಖರೇಜ್‌ ಮಾದರಿಯಲ್ಲಿ ಕಾಣುತ್ತಿದ್ದು, ಇದರ ಸಂಪೂರ್ಣ ಹೂಳೆತ್ತುವ ಕೆಲಸವಾಗಬೇಕು ಎಂಬುದು ಗ್ರಾಮಸ್ಥರ ಮತ್ತು ಭಕ್ತರ ಅಭಿಪ್ರಾಯವಾಗಿದೆ.
ವೀರಾರೆಡ್ಡಿ.ಆರ್‌.ಎಸ್‌.
Advertisement

Udayavani is now on Telegram. Click here to join our channel and stay updated with the latest news.

Next