Advertisement

ಪತನಗೊಂಡ ಮಿಗ್‌ ಅವಶೇಷ ಪತ್ತೆ: ಪೈಲಟ್ ಸುಳಿವು ಇನ್ನೂ ಸಿಕ್ಕಿಲ್ಲ

07:38 AM Nov 30, 2020 | keerthan |

ಹೊಸದಿಲ್ಲಿ: ಅರಬಿ ಸಮುದ್ರದಲ್ಲಿ ಗುರುವಾರ ಪತನಗೊಂಡಿದ್ದ ಭಾರತೀಯ ವಾಯುಸೇನೆಯ ಮಿಗ್‌-29 ಕೆ ಯುದ್ಧವಿಮಾನದ ಕೆಲವು ಭಾಗಗಳು ಪತ್ತೆಯಾಗಿವೆ. ಆದರೆ ನಾಪತ್ತೆಯಾಗಿರುವ ಪೈಲಟ್‌ನ ಸುಳಿವು ಸಿಕ್ಕಿಲ್ಲ.

Advertisement

ಗುರುವಾರ ಸಂಜೆ ಐಎನ್‌ಎಸ್‌ ವಿಕ್ರಮಾದಿತ್ಯ ಸಮರ ನೌಕೆಯಿಂದ ಹಾರಾಟ ನಡೆಸುವ ವೇಳೆ ಈ ಮಿಗ್‌ ವಿಮಾನ ಪತನಗೊಂಡಿತ್ತು. ರವಿವಾರ ಅದರ ಟರ್ಬೋ ಚಾರ್ಜರ್‌, ಇಂಧನ ಟ್ಯಾಂಕ್‌ ಮತ್ತು ಕೆಲವು ಭಾಗಗಳನ್ನು ನೌಕಾಪಡೆಯ ಶೋಧ ತಂಡ ಪತ್ತೆ ಹಚ್ಚಿದೆ.

ಇಬ್ಬರು ಪೈಲಟ್‌ಗಳ ಪೈಕಿ ಓರ್ವರನ್ನು ಗುರುವಾರವೇ ರಕ್ಷಿಸಲಾಗಿತ್ತು. ನಾಪತ್ತೆಯಾಗಿರುವ ಇನ್ನೋರ್ವ ಪೈಲಟ್‌ ಕ| ನಿಶಾಂತ್‌ ಸಿಂಗ್‌ ಅವರಿಗಾಗಿ ಶೋಧ ಮುಂದುವರಿಸಲಾಗಿದೆ.  ಕಳೆದ ಒಂದು ವರ್ಷದಲ್ಲಿ ಮಿಗ್‌ ಯುದ್ಧ ವಿಮಾನ ಪತನಗೊಂಡ ಮೂರನೇ ಪ್ರಕರಣ ಇದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next