Advertisement

ಮಾದಕ ವ್ಯಸನದಿಂದ ವ್ಯಕ್ತಿತ್ವ ನಾಶ

03:12 PM Jun 29, 2020 | Suhan S |

ಬಂಕಾಪುರ: ಆರೋಗ್ಯವಂತ ಸಮಾಜ ನಿರ್ಮಾಣದ ಹೊಣೆ ಪ್ರತಿಯೊಬ್ಬರದಾಗಿದ್ದು, ದುಷcಟಗಳಿಂದ ದೂರಾಗುವ ಮೂಲಕ ಉತ್ತಮ ಹವ್ಯಾಸ, ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಹೇಳಿದರು.

Advertisement

ಪಟ್ಟಣದ ಪುರಸಭೆ ಆವರಣದಲ್ಲಿ ಪೊಲೀಸ್‌ ಇಲಾಖೆ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಾದಕ ದ್ರವ್ಯಗಳ ಸೇವನೆ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ ಜಾಥಾಕ್ಕೆ ಜಾಲನೆ ನೀಡಿ ಮಾತನಾಡಿದ ಅವರು, ಮಾದಕ ದ್ರವ್ಯಗಳ ಸೇವನೆಯಿಂದ ವ್ಯಕ್ತಿಯ ವ್ಯಕ್ತಿತ್ವ ಹಾಳಾಗುವುದರ ಜೋತೆಗೆ ಇಡೀ ಕುಟುಂಬ ಬೀದಿಗೆ ಬರುತ್ತದೆ. ಚಟಕ್ಕೆ ಬಲಿಯಾದ ವ್ಯಕ್ತಿ ಆಸ್ತಿ, ಅಂತಸ್ತುಗಳನ್ನು ಕಳೆದುಕೊಂಡು ಸಮಾಜದಲ್ಲಿ ಗೌರವ ಕಳೆದುಕೊಂಡು ಹೀನಾಯವಾಗಿ ಬದುಕುಬೇಕಾಗುತ್ತದೆ. ಆದ್ದರಿಂದ ಮನುಷ್ಯ ದುಶ್ಚಟಗಳ ದಾಸರಾಗದೇ ಸಮಾಜದಲ್ಲಿ ಒಳ್ಳೆಯ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಗೌರವದಿಂದ ಬದುಕು ಸಾಗಿಸುವಂತೆ ಜನತೆಗೆ ಕರೆ ನೀಡಿದರು.

ಪಟ್ಟಣದ ಪೊಲೀಸ್‌ ಠಾಣೆ ಎಎಸ್‌ಐ ಶಿವಾನಂದ ವನಹಳ್ಳಿ ಮಾತನಾಡಿದರು. ಪುರಸಭೆ ಸಿಂಬಂದಿ ಬಿ.ಎಸ್‌.ಗಿಡ್ಡಣ್ಣವರ, ಮಲ್ಲಮ್ಮ ಹರವಿ, ನಿಂಗಪ್ಪ ಹೊಸಮನಿ, ಎಸ್‌.ಎನ್‌.ಸುಣಗಾರ, ವೀರಣ್ಣ ಬಾರಕೇರ, ರೂಪಾ ನಾಯಕ, ಬಸವರಾಜ ಕಟ್ಟಿಮನಿ, ಮಂಜುನಾಥ ಲಮಾಣಿ ಪುಟ್ಟಣವರ ಸೇರಿದಂತೆ ಪುರಸಭೆ, ಠಾಣೆ ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next