Advertisement
ಇತ್ತೀಚಿಗೆ ಕೋಲಾರ ಜಿಲ್ಲೆಗೆ ಕೆ.ಸಿ.ವ್ಯಾಲಿ ನೀರು ಹರಿದು ಕೆರೆ ತುಂಬುತ್ತಿದ್ದರಿಂದ ರೈತರು ಕೃಷಿ, ತೋಟಗಾರಿಕೆ ಬೆಳೆ ಉತ್ಪಾದನೆ ಚುರುಕು ಗೊಳಿಸಿದ್ದರು. ಆದರಲ್ಲೂ ಕಳೆದ ವರ್ಷ ಭರ್ಜರಿ ಮಳೆ ಸುರಿದಿದ್ದರಿಂದ ಅಂತರ್ಜಲ ಮಟ್ಟ ಹೆಚ್ಚಳ ಕಂಡು ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗಿತ್ತು. ಇದರಿಂದ ಉತ್ತೇಜಿತರಾಗಿದ್ದ ರೈತರು, ಕೊಂಚ ಉತ್ಸಾಹ ದಿಂದಲೇ ಕೃಷಿ ಮತ್ತು ತೋಟಗಾರಿಕೆಯಲ್ಲಿ ತೊಡಗಿದ್ದರು. ಆದರೆ, ಫಸಲು ಕೈಕೊಡುವ ಸಂದರ್ಭದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿ ರುವುದರಿಂದ ಉಂಟಾದ ಪ್ರವಾಹ ಪರಿಸ್ಥಿತಿ ಯಲ್ಲಿ ಹೊಲ, ಗದ್ದೆ, ತೋಟಗಳು ಜಲಾವೃತ ಗೊಂಡು, ಬೆಳೆ ನಷ್ಟ ಆಗಿದೆ.
Related Articles
Advertisement
ಕೋಲಾರ ಜಿಲ್ಲೆಯ ಮಳೆ ಪ್ರಮಾಣ : ಕೋಲಾರ ಜಿಲ್ಲೆಯಲ್ಲಿ ಕಳೆದ ಜ.1ರಿಂದ ಆ.6ರವರೆಗೂ ಸರಾಸರಿ 246 ಮಿ.ಮೀ. ಮಳೆ ಸುರಿಯಬೇಕಾಗಿತ್ತು. ಆದರೆ, 646 ಮಿ.ಮೀ. ಮಳೆ ಸುರಿದು ಬಹುತೇಕ ಕೆರೆ, ಕುಂಟೆ, ಕಲ್ಯಾಣಿ ಜಲ ಮೂಲಗಳು ತುಂಬಿಕೊಳ್ಳುವಂತಾಗಿದೆ. ಜೂನ್‌ನಲ್ಲಿ 66 ಮಿ.ಮೀ.ಗೆ 168 ಮಿ.ಮೀ., ಜುಲೈನಲ್ಲಿ 78.7 ಮಿ.ಮೀ.ಗೆ 109.9 ಮಿ.ಮೀ. ಮಳೆ ಸುರಿದಿದೆ. ಕಳೆದ ಏಳು ದಿನಗಳಲ್ಲಿ 19.2 ಮಿ.ಮೀ ಮಳೆಗೆ 144.9 ಮಿ.ಮೀ. ಬಿದ್ದಿದೆ. ಆಗಸ್ಟ್ ನಲ್ಲಿ 15.4 ಮಿ.ಮೀ. ಸರಾಸರಿ ಮೀರಿ 118.7 ಮಿ.ಮೀ. ಮಳೆ ಸುರಿದಿದೆ.
-ಕೆ.ಎಸ್.ಗಣೇಶ್