ಮಂಡ್ಯ: ಅಭಿವೃದ್ಧಿ ಹೆಸರಿನಲ್ಲಿ ಎಗ್ಗಿಲ್ಲದೆ ಅರಣ್ಯನಾಶವಾಗುತ್ತಿದೆ. ನಾಗವನ, ದೇವರ ಕಾಡು ಹಾಗೂ ಸಂರಕ್ಷಿತ ಅರಣ್ಯವೆಲ್ಲವೂ ನಿಧಾನವಾಗಿ ಕಣ್ಮರೆಯಾಗುತ್ತಿವೆ ಎಂದು ಜಿಪಂ ಸಿಇಒ ಕೆ.ಯಾಲಕ್ಕೀಗೌಡ ವಿಷಾದಿಸಿದರು. ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗ ಹಾಗೂ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಡೆದ ಪರಿಸರ ದಿನಾ ಚರಣೆಯಲ್ಲಿ ಮಾತನಾಡಿದರು.
ಅರಣ್ಯ ನಾಶದಿಂದ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿವೆ. ಇದರಿಂದ ಸಮಸ್ಯೆ ಹೆಚ್ಚಾಗಿದೆ. ಅರಣ್ಯ ನಾಶ ಮತ್ತು ವಿವಿಧ ಕಾರಣಗಳಿಂ ದ ದೇಶದಲ್ಲಿ ಸುಮಾರು 758 ಹುಲಿಗಳು 8 ವರ್ಷಗಳಿಂದೀಚೆಗೆ ಮೃತಪಟ್ಟಿವೆ. ಪರಿಸರದ ಮೇಲಿನ ದಾಳಿ ನಿಂತಾಗ ಮಾತ್ರ ಮಾನವ ಹಾಗೂ ಜೀವಸಂಕುಲ ಉಳಿಯಲು ಸಾಧ್ಯ ಎಂದರು. ಪರಿಸರದಲ್ಲಿರುವ ಜೀವ ವೈವಿಧ್ಯತೆಯನ್ನು ಸಮ ರ್ಪಕವಾಗಿ ನಿರ್ವಹಣೆ ಮಾಡಬೇಕು.
ಆಹಾರ ಕೊಂಡಿ ಕಳಚದಂತೆ ಎಚ್ಚರಿಕೆ ವಹಿಸುವ ಅವಶ್ಯವಿದೆ. ಕೊರೊನಾ ವೇಳೆ ಶೇ.17ರಷ್ಟು ಕಾರ್ಬನ್ ಕಡಿಮೆಯಾಗಿದ್ದು, ಓಝೋನ್ ಗಟ್ಟಿಯಾಗಿದೆ. ಗಂಗಾನದಿಯ ನೀರು ಕುಡಿಯುವಷ್ಟರ ಮಟ್ಟಿಗೆ ಸುಧಾರಣೆ ಕಂಡಿದೆ ಎಂದು ವಿವರಿಸಿದರು. ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಮಾತನಾಡಿ, ಕೊರೊನಾದಿಂದ ಜನತೆ ಸಂಕಷ್ಟ ಅನುಭವಿಸು ತ್ತಿದ್ದಾರೆ.
ಅಂತಹವರಿಗೆ ನೆರವಾಗುವ ನಿಟ್ಟಿನಲ್ಲಿ ಪ್ರತಿ ಯೊಬ್ಬರೂ ಕೈಜೋಡಿಸಬೇಕು. ಪರಿಸರ ಸಂರಕ್ಷಣೆ ಮಾಡುವುದರಿಂದ ಅನೇಕ ರೋಗ, ರುಜಿನ ಗಳನ್ನು ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು ಎಂದರು. ಪಿಇಟಿ ಕಾರ್ಯದರ್ಶಿ ಡಾ.ಎಸ್.ಎಲ್.ಶಿವ ಪ್ರಸಾದ್, ಡಾ.ರಾಮಲಿಂಗಯ್ಯ ಅವರನ್ನು ಅಭಿನಂದಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ವಿ. ರವೀಂದ್ರ, ಪರಿಸರ ಅಧಿಕಾರಿ ಕೆ.ಎಲ್.ಸವಿತ, ಉಪ ಪರಿಸರ ಅಧಿಕಾರಿ ಅಶ್ವಿನಿ, ಡಾ.ಆರ್.ಎಂ.ಮಹಲಿಂಗೇ ಗೌಡ, ಡಾ.ನಿಂಗರಾಜು ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.