Advertisement

ಸ್ಥಳಾಂತರಗೊಂಡು ದಶಕಗಳು ಕಳೆದರೂ ಹಾಡಿಗೆ ರಸ್ತೆಯೇ ಇಲ್ಲ

04:17 PM Aug 14, 2021 | Team Udayavani |

ಎಚ್‌.ಡಿ.ಕೋಟೆ: ಕಬಿನಿ ಜಲಾಶಯ ನಿರ್ಮಾಣದ ಸಂದರ್ಭದಲ್ಲಿ ತಾವು ವಾಸವಾಗಿದ್ದ ನೆಲೆ ಕಳೆದುಕೊಂಡು ಸ್ಥಳಾಂತರವಾಗಿದ್ದ ಆದಿವಾಸಿಗರ
ಹಾಡಿಯೊಂದಕ್ಕೆ ರಸ್ತೆಯೇ ಇಲ್ಲದೆ ಇಂದಿಗೂ ಕಾಲ್ನಡಿಗೆಯಲ್ಲೇ ಸಂಚರಿಸುವ ಪರಿಸ್ಥಿತಿ ಇದೆ.

Advertisement

ಪಟ್ಟಣದಿಂದ 7-8 ಕಿ.ಮೀ. ಅಂತರದಲ್ಲಿರುವ ರಾಮೇನಹಳ್ಳಿ ಹಾಡಿಯಲ್ಲಿ 40 ಆದಿವಾಸಿ ಬಡ ಕುಟುಂಬಗಳಿವೆ. ಆದರೆ, ಈ ಹಾಡಿಗೆ ಬಂದವರು
ದಾರಿ ಯಾವುದಯ್ಯ ಈ ಹಾಡಿಗೆ ಎಂದು ಕೇಳುವಂತಾಗಿದೆ.

70 ವರ್ಷಗಳ ಹಿಂದೆ ತಾಲೂಕಿನ ಕಬಿನಿ ಜಲಾ ಶಯ ನಿರ್ಮಾಣದ ಸಂದರ್ಭದಲ್ಲಿ ಮುಳುಗಡೆ ಯಾದಾಗ ರಾಮೇನಹಳ್ಳಿ ಹಾಡಿಯಲ್ಲಿದ್ದ ಮಂದಿ ನಿರಾಶ್ರಿತರಾಗಿ ಅಲ್ಲಿಂದ ದಮ್ಮನಕಟ್ಟೆ ಹಾಡಿಗೆ ಸ್ಥಳಾಂತರಗೊಂಡರು. ಕೆಲ ವರ್ಷಗಳ ಬಳಿಕ, ಹೊಸಳ್ಳಿ, ಅಲ್ಲಿಂದ ತಾಲೂಕು ಅಧಿಕಾರಿಗಳ ಮಾರ್ಗದರ್ಶನದಲ್ಲಿ ರಾಮೇನಹಳ್ಳಿ ಹಾಡಿಗೆ ಸ್ಥಳಾಂತರಗೊಂಡರು.

ರಾಮೇನಹಳ್ಳಿ ಹಾಡಿಯ ಜನರಿಗೆ ಸರ್ಕಾರ ಶೀಟ್‌ ಮನೆಗಳು, ಹಾಡಿಯೊಳಗೆ ರಸ್ತೆ, ಕುಡಿಯುವ ನೀರು, ಚರಂಡಿ, ವಿದ್ಯುತ್‌ ಸೌಲಭ್ಯ
ಕಲ್ಪಿಸಿದೆ. ಆದರೆ, ಹಾಡಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯೇ ಇಲ್ಲ. ಮೂರ್‍ನಾಲ್ಕು ದಶಗಳಿಂದ ಹಾಡಿಯ ಮಂದಿ ಭೂಮಾಲಿಕರೊಬ್ಬರ ಜಮೀನಿನಿಂದ ಕಾಲುದಾರಿಯಲ್ಲೇ ನಡೆದು ಹಾಡಿ ಸೇರುತ್ತಿದ್ದಾರೆ. ಭೂ ಮಾಲಿಕರು ಆಕ್ಷೇಪ ವ್ಯಕ್ತಪಡಿಸಿದರೆ ಹಾಡಿ ಜನರಿಗೆ ಸಂಪರ್ಕ ರಸ್ತೆಯೇ ಬಂದ್‌ ಆಗುತ್ತದೆ.

ಇದನ್ನೂ ಓದಿ:ಸರ್ಕಾರ ಹೆಚ್ಚು ದಿನ ಬಾಳುವುದಿಲ್ಲ, ಯಾವುದೇ ಸಂದರ್ಭದಲ್ಲಿ ಪತನವಾಗಬಹುದು: ಸಿದ್ದರಾಮಯ್ಯ

Advertisement

ಹಾಡಿಯಿಂದ ಕೇರಳ ಮುಖ್ಯರಸ್ತೆ ಮಾರ್ಗ ದಲ್ಲಿರುವ ನೂರಲಕುಪ್ಪೆ ಗ್ರಾಮಕ್ಕೆ ಅಗಮಿಸಲು ರಸ್ತೆ ಇಲ್ಲ. ಹಾಡಿ ಇಂದಿಗೂ ಬಸ್‌ ಸೇವೆಯಿಂದ ವಂಚಿತರಾಗಿದ್ದು, ಬಸ್‌ ಏರಲು 4 ಕಿ.ಮೀ. ಕೆರೆ ಏರಿಗಳ ಮೇಲಿಂದ ನಡೆದೇ ಬರಬೇಕಾಗಿದೆ. ಹಾಡಿಯಿಂದ ಸುಮಾರು200 ಮೀಟರ್‌ ತನಕ
ರಸ್ತೆ ಇದೆಯಾದರೂ ಬಳಿಕ ಸಂಪರ್ಕ ರಸ್ತೆಯೇ ಇಲ್ಲ, ಸಾವುನೋವು ಸಂಭವಿಸಿದಾಗ ಅಡ್ಡೆ ಕಟ್ಟಿ ಹೊತ್ತು ತರಬೇಕಾಗಿದೆ. ಇನ್ನು ಮಳೆ ಗಾಲದಲ್ಲಿ ಪ್ರಯಾಸ ಪಟ್ಟು ಕಾಲುದಾರಿಯಲ್ಲಿ ತೆರಳಬೇಕಿದೆ. ಇದ್ದ ನೆಲೆ ಕಳೆದುಕೊಂಡು ಸ್ಥಳಾಂತರಗೊಂಡರೂ ಹಾಡಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ
ನಿರ್ಮಿಸಬೇಕು. ಈ ಬಗ್ಗೆ ಶಾಸಕರು ಹಾಗೂ ಅಧಿಕಾರಿಗಳು ಗಮನ ಹರಿಸಿ ಸಮಸ್ಯೆ ಪರಿಹರಿಸಬೇಕು ಎಂದು ಹಾಡಿಗಳ ಜನರು ಆಗ್ರಹಿಸಿದ್ದಾರೆ.

ಕಬಿನಿ ಡ್ಯಾಂಗಾಗಿ ನೆಲೆ ಕಳೆದುಕೊಂಡ ಆದಿವಾಸಿಗರಿಗೆ 70 ವರ್ಷಗಳಿಂದ ಹಾಡಿಗೆ ರಸ್ತೆಯೇ ಇಲ್ಲ. ಹಾಡಿಯ ಮಕ್ಕಳು ಶಾಲಾ ಕಾಲೇಜುಗಳಿಗೆ
ನಡೆದೇಬರಬೇಕಾದ ಸ್ಥಿತಿಇದೆ. ತಾಲೂಕುಆಡಳಿತ ಮಧ್ಯ ಪ್ರವೇಶಿಸಿ ರಸ್ತೆಗೆ ಅಗತ್ಯ ಅನಿಸುವ ಭೂಮಿ ಸ್ವಾಧೀನ ಪಡಿಸಿಕೊಂಡು ಹಾಡಿಯ ಜನರಿಗೆ ಸಂಪರ್ಕ ಕಲ್ಪಿಸಬೇಕಾಗಿದೆ ಎಂದು ನೂರಲಕುಪ್ಪೆ ಡಾ.ಬಿ.ಉಮೇಶ್‌ ಆಗ್ರಹಿಸಿದ್ದಾರೆ.

ರಾಮೇನಹಳ್ಳಿ ಹಾಡಿಯ ಜನರ ಸಂಕಷ್ಟ ಅರಿತು ಹಲವಾರು ಬಾರಿ ತಹಶೀಲ್ದಾರ್‌ ಸೇರಿದಂತೆ ತಾಲೂಕಿನ ಶಾಸಕರಿಗೂ ವಸ್ತುಸ್ಥಿತಿ ಕುರಿತು ಮಾಹಿತಿ ನೀಡಿದ್ದೇನೆ. ಭೂ ಮಾಲಿಕರೊಡನೆ ತಹಶೀಲ್ದಾರ್‌ ಚರ್ಚಿಸಿದ್ದು, ಭೂಮಾಲಿಕರು ಒಮ್ಮೆ ರಸ್ತೆ ಜಾಗ ನೀಡಲು ಒಪ್ಪಿಗೆ ನೀಡುತ್ತಾರೆ.
ಮತ್ತೂಮ್ಮೆ ನಿರಾಕರಿಸುತ್ತಾರೆ.ತಹಶೀಲ್ದಾರ್‌ ಮತ್ತು ಶಾಸಕರಿಂದಲೇ ಸಮಸ್ಯೆ ಇತ್ಯರ್ಥವಾಗಬೇಕಿದೆ.
– ಚಂದ್ರಪ್ಪ, ತಾಲೂಕು ಗಿರಿಜನ
ಅಭಿವೃದ್ಧಿ ಅಧಿಕಾರಿ

-ಎಚ್‌.ಬಿ.ಬಸವರಾಜು

Advertisement

Udayavani is now on Telegram. Click here to join our channel and stay updated with the latest news.

Next