Advertisement
ತಾಯ್ನಾಡಿಗೆ ಮರಳಲು 12 ವರ್ಷದ ಬಾಲಕನೊಂದಿಗೆ ತಂದೆತಾಯಿ ಏರ್‌ಪೋರ್ಟ್‌ಗೆ ಬಂದಿದ್ದರು. ನಿಂತಲ್ಲಿ ನಿಲ್ಲದೆ ಅತ್ತಿತ್ತ ಓಡಾಡುತ್ತಿದ್ದ ಬಾಲಕನನ್ನು ಎಲ್ಲರೂ ಗಮನಿಸತೊಡಗಿದರು. ಜತೆಗೆ ನಮ್ಮನ್ನು ದುರುಗುಟ್ಟಿ ನೋಡತೊಡಗಿದರು. ಇನ್ನು ದುಬೈ ಏರ್‌ಪೋರ್ಟ್ ತಲುಪಿದಾಗ ಇವನನ್ನು ಹಿಡಿಯುವುದೇ ಕಷ್ಟವಾಯಿತು. ಅಕ್ಕಪಕ್ಕದವರು ಕಂಪ್ಲೇಂಟ್ ಮಾಡಿದರು. ಒಂದಿಬ್ಬರು ಮಗನ ವಯಸ್ಸು ಕೇಳಿ, ಹುಡುಗನಿಗೆ ಬೆಳೆಯುವ ವಯಸ್ಸು, ಮ್ಯಾನರ್ಸ್ ಕಲಿಸಬೇಕು ಎಂದು ಪ್ರವಚನ ನೀಡಿದರು. ನಮ್ಮನ್ನು ಅನಕ್ಷರಸ್ಥರಂತೆ, ತಪ್ಪಿತಸ್ಥರಂತೆ ನೋಡತೊಡಗಿದರು. ಆಗ ಕೆಲವರಿಗಾದರೂ ಕಾರಣ ಹೇಳಬೇಕಿತ್ತು ಎಂದರೆ ಯಾಕೋ ದುಃಖ ಒತ್ತರಿಸಿ ಬರುತ್ತಲಿತ್ತು. ಶಬ್ದ ಹೊರಡಲಿಲ್ಲ. ಕೊನೆಯಲ್ಲಿ ಪಕ್ಕದಲ್ಲಿ ಕುಳಿತ ಹೆಂಗಸು ಎದ್ದು ನಡೆದಾಗ ಹೇಳಬೇಕೆನಿಸಿದ್ದನ್ನು ಹೇಳಿದೆ. ಆದರೂ ಬೇಸರವೆನಿಸಿತು. ಬಹುಶ ನಾನೂ ಅವರ ಜಾಗದಲ್ಲಿದ್ದರೆ ಹೀಗೆನಿಸುವುದು ಸಹಜ ಎಂದುಕೊಂಡೆ ಎಂದು ತಾಯಿಯೊಬ್ಬಳು ನನ್ನ ಬಳಿ ಅಳಲು ತೋಡಿಕೊಂಡಳು.
Related Articles
Advertisement
ಇನ್ನೊಬ್ಬರಿಗೆ ನೋವು ಮಾಡುವ ನಿರ್ಧಾರಾತ್ಮಕ ಮನಸ್ಥಿತಿ ಹಲವರ ಖನ್ನತೆಗೂ ಕಾರಣವಾಗುತ್ತದೆ. ನಾವೆಲ್ಲ ಯಾಕೆ ಈ ಮನಸ್ಥಿತಿ ಹೊಂದಿದ್ದೇವೆ ಎನ್ನುವುದಕ್ಕೆ ಮನಃಶಾಸ್ತ್ರದಲ್ಲೂ ಹಲವು ಕಾರಣಗಳಿವೆ.
ನಕಾರಾತ್ಮಕ ಮನಸ್ಥಿತಿ- ಕೆಲವರು ಋಣಾತ್ಮಕ ಚಿಂತನೆಯನ್ನೇ ಬಹಳ ಮಾಡುತ್ತಾರೆ. ಹೀಗಾಗಿ ಅವರು ತಮ್ಮ ಹೊರತಾಗಿ ಯಾವುದೇ ಸಂದರ್ಭದಲ್ಲಿ ಇತರರ ವಿಷಯಕ್ಕೆ ಧನಾತ್ಮಕವಾಗಿ ಸ್ಪಂದಿಸಲು ಸಶಕ್ತರಲ್ಲ.
ಅಭದ್ರತೆ- ಜೀವನದಲ್ಲಿ ಯಾವುದೋ ಅಭದ್ರತೆ ಕಾಡುತ್ತಿದ್ದರೆ ಇನ್ನೊಬ್ಬರ ವಿಷಯದಲ್ಲೂ ನಿರ್ಧಾರಾತ್ಮಕವಾಗಿ ಮಾತನಾಡುವ ಹವ್ಯಾಸವನ್ನು ಕೆಲವರು ಹೊಂದಿರುತ್ತಾರೆ.
ನಾವೇ ಬುದ್ಧಿವಂತರು- ಕೆಲವರಲ್ಲಿ ಪ್ರತಿ ವಿಷಯದಲ್ಲಿ ತಾವು ಇತರರಿಗಿಂತ ಬುದ್ಧಿವಂತರೆಂದು ತೋರಿಸಿಕೊಳ್ಳುವ ವಿಚಿತ್ರ ರೂಪದ ಹವ್ಯಾಸವಿರುತ್ತದೆ. ಹೀಗಾಗಿ ಇಂಥವರು ಇನ್ನೊಬ್ಬರನ್ನು ಕೆಳಮಟ್ಟದಲ್ಲಿ ಚಿತ್ರಿಸಲು ವಿಮರ್ಶನಾತ್ಮಕ ಹೇಳಿಕೆ ಕೊಡುತ್ತಲೇ ಇರುತ್ತಾರೆ.
ಈರ್ಷೆ- ಇನ್ನೊಬ್ಬರ ಬಗ್ಗೆ ಈರ್ಷೆ ಹೊಂದುವುದು ಈ ನಿರ್ಧಾರಾತ್ಮಕ ಮನಸ್ಥಿತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ನಾವೇ ಶಕ್ತಿಶಾಲಿ- ಯಾವುದೋ ಕೆಲಸದಲ್ಲಿ ತಾವು ಅಸಮರ್ಥರಾದಾಗ ಅನಿವಾರ್ಯವಾಗಿ ಇನ್ನೊಬ್ಬರಿಗೆ ತಾವು ಶಕ್ತಿಶಾಲಿಯೆಂದು ತೋರಿಸಿಕೊಳ್ಳಲು ವಿನಾಕಾರಣ ನೋವುಂಟು ಮಾಡುವುದನ್ನು ರೂಢಿಸಿಕೊಂಡಿರುತ್ತಾರೆ.
ನಿರ್ಧಾರಾತ್ಮಕ ಮನಸ್ಥಿತಿಗೆ ಇದು ಕೆಲವು ಸಾಮಾನ್ಯ ಕಾರಣಗಳು. ಪ್ರಯತ್ನ ಪಟ್ಟರೆ ಇದರಿಂದ ಹೊರಬರಲು ಸಾಧ್ಯವಿದೆ.
ಜಾಗೃತಿ- ಇನ್ನೊಬ್ಬರ ವಿಚಾರದಲ್ಲಿ ವಿಮರ್ಶನಾತ್ಮಕವಾಗಿ, ಅರಿವಿಲ್ಲದೆ ತೀರ್ಮಾನ ನೀಡಬಾರದೆಂಬ ಜಾಗೃತಿ ನಮ್ಮಲ್ಲಿ ಮೂಡಿದಾಗ ಇದರಿಂದ ಹೊರಬರಲು ಸಾಧ್ಯವಾಗುವುದು.
ಸ್ವೀಕೃತ ಮನೋಭಾವ- ಇನ್ನೊಬ್ಬರ ವಿಚಾರದಲ್ಲಿ ನಾನು ವಿಮರ್ಶನಾತ್ಮಕ ತೀರ್ಮಾನ ನೀಡುತ್ತಿರುವೆ. ಇದು ಸರಿಯಲ್ಲ ಎನ್ನುವ ಸ್ವೀಕೃತ ಮನೋಭಾವ ಮೂಡಿದರೆ ಸರಿಪಡಿಸಿಕೊಳ್ಳಲು ಸಾಧ್ಯ. ನಾನೇ ಸರಿ ಎನ್ನುವ ಮನಸ್ಥಿತಿ ಹಾನಿಕಾರಕ.
ಇನ್ನೊಬ್ಬರ ಜಾಗದಲ್ಲಿ ನಮ್ಮನ್ನು ಕಲ್ಪಿಸಿಕೊಳ್ಳಿ- ನಮ್ಮ ಮನಸ್ಸಿಗೆ ನಾವೇ ಪ್ರಶ್ನಿಸಿಕೊಂಡರೆ ಇನ್ನೊಬ್ಬರ ಮನಸ್ಸನ್ನು ನೋಯಿಸಲಾರೆವು. ಯಾವಾಗ ನಾವು ನಿರ್ಧಾರಾತ್ಮಕ ಮನಸ್ಥಿತಿಗೆ ಹೋಗುತ್ತೇವೆಯೋ ಆಗ ನಮಗೆ ಅವರ ಪರಿಚಯವಿದೆಯೇ, ಅವರ ಬಗ್ಗೆ ಸಂಪೂರ್ಣ ಮಾಹಿತಿ ಇದೆಯೇ? ಇಲ್ಲವೆಂದಾದರೆ ಅವರ ಬಗ್ಗೆ ಮಾತನಾಡುವ ಅಧಿಕಾರ ನಮಗೆ ಇಲ್ಲವೆಂದು ಸುಮ್ಮನಾಗುವ ಮನೋಭಾವ ಬೆಳೆಸಿಕೊಳ್ಳಿ.
ನಮ್ಮಿಂದಾಗಿ ಇನ್ನೊಬ್ಬರಿಗೆ ನೋವಾಗ ಬಾರದು– ಇತರರಿಗೆ ಆಹ್ಲಾದ ಮನೋಭಾವ ಮೂಡಿಸುವಂತೆ ನಮ್ಮ ವರ್ತನೆಯಿರಬೇಕೆಂಬ ಜಾಗೃತಿ ಮೂಡಿದಾಗ ಈ ಸ್ಥಿತಿಯಿಂದ ನಾವು ದೂರವಿರಲು ಸಾಧ್ಯ.
ಜಗತ್ತಿನ ಪ್ರತಿ ಜೀವಿಯೂ ವಿಮರ್ಶೆಗೆ ಒಳಗಾಗುತ್ತದೆ. ಮನುಷ್ಯ ಮಾತ್ರ ಇನ್ನೊಬ್ಬರನ್ನು ವಿಶ್ಲೇಷಿಸಿ ತೀರ್ಮಾನ ನೀಡುವುದು ಸಹಜ ಗುಣವೆಂದು ಸ್ವೀಕರಿಸಿ ಜೀವನದ ಅವಿಭಾಜ್ಯ ಅಂಗವೆಂದು ಇದರ ಜತೆಯÇÉೇ ಸಾಗುತ್ತಿರುತ್ತಾನೆ. ಒಂದಷ್ಟು ಜಾಗೃತಿ, ಸ್ವೀಕೃತ ಮನೋಭಾವ, ಜತೆಗೆ ಸತತ ಪ್ರಯತ್ನ ಈ ವಿಚಿತ್ರ ಮನಸ್ಥಿತಿಯಿಂದ ಹೊರಬರಲು ಸಹಾಯ ಮಾಡುತ್ತವೆ. ಇನ್ನೊಬ್ಬರ ನೋವಿಗೆ ಕಾರಣೀಭೂತರಾಗುವುದನ್ನೂ ತಪ್ಪಿಸುತ್ತದೆ.
ವಾಣಿಸಂದೀಪ, ಸೌದಿ ಅರೇಬಿಯಾ