Advertisement

ನಾನು ಮತ್ತು  ನಮ್ಮವರ ಸ್ವೀಟಿ

09:30 PM Jul 24, 2021 | Team Udayavani |

ಇಂಗ್ಲೆಂಡ್‌ನ‌ಲ್ಲಿ ನೆಲೆಯಾಗಿ ಮೂರು ವರ್ಷಗಳೇ ಉರುಳಿವೆ. ಆದರೆ ಮೊದಲ ಬಾರಿ ಇಲ್ಲಿಗೆ ಕಾಲಿಟ್ಟ ದಿನದ ನೆನಪು ಇನ್ನೂ ಹಚ್ಚ ಹಸುರಾಗಿದೆ. ತಿಳಿ ಹಸುರು ಬಣ್ಣದ ವಾಕ್ಸಾಲ್‌ ಆಸ್ಟ್ರಾ ನನ್ನನ್ನು ಎದುರುಗೊಳ್ಳಲು ಬಂದಿದ್ದಳು. ನನಗಾಗಿ ನನ್ನ ಹೆಸರÇÉೇ ಖರೀದಿಸಿ ತಂದಿದ್ದರು ಮೂರ್ತಿ. ಹೊಚ್ಚ ಹೊಸ ಕಾರು ಅಲ್ಲವಾದರೂ ಹಳೆಯದೇನೂ ಅಲ್ಲ. ಅಚ್ಚುಕಟ್ಟಾದ ಸುಂದರ ಮೈಮಾಟದ ಆಕರ್ಷಕವಾಗಿದ್ದರಿಂದ ನನಗೂ ಮೆಚ್ಚುಗೆಯಾಯಿತು. “ಮೂರ್ತಿ, ಇವಳಿಗೆ ಒಂದು ಒಳ್ಳೆಯ ಹೆಸರಿಡೋಣ’ ಎಂದೆ. ನನ್ನ ಉತ್ಸಾಹ ಕಂಡ ಮೂರ್ತಿ  ಯಾವ ಹೆಸರಿಡೋದು?’ಎಂದರು.

Advertisement

ತಕ್ಷಣ “ರೋಜಿ’ ಅಂದೆ.  ಇದರ ಬಣ್ಣ ಹಸುರು, ನೀನು ರೋಜಿ ಅಂತ ಇಡ್ತೀಯ? ಅದೂ ಅಲೆªà ಇಂಗ್ಲಿಷ್‌ನ ರೋಜಿ ಬರಬರುತ್ತ ರೋಸಿ ಆಗಿ  ಕಡೆಗೆ ಕಾರು ರೋಸಿ ನಮ್ಮಿಂದ ದೂರ ಹೋಗಿಬಿಟ್ಟರೆ? ಅಂದರು. “ನೀವ್ಹೇಳ್ಳೋದೂ ಸರಿ, ಹಾಗಾದ್ರೆ ನೀವೇ ಒಂದು ಹೆಸರು ಹೇಳಿ ಎಂದೆ. ಬಹಳ ಯೋಚಿಸಿ ಕೊನೆಗೆ “ಸ್ವೀಟಿ ಹೇಗೆ’? ಅಂದರು.  ಮುಂದಾಗಿದೆ, ಕರೆಯಲು ಹಿತವಾಗಿದೆ. ನನಗೂ ಇಷ್ಟವಾಯಿತು. ಆ ಹೆಸರೇ ಅಂತಿಮವಾಯಿತು. ಅಂದಿನಿಂದ ಸ್ವೀಟಿ ನಮ್ಮ ಮನೆಯ ಸದಸ್ಯಳಾದಳು.

ನಾನು ಸ್ವೀಟಿಯನ್ನು ಮೆಚ್ಚಿಕೊಂಡೆ ನಿಜ, ಆದರೆ ಸ್ವೀಟಿಗೆ ನಾನು ಮೆಚ್ಚುಗೆಯಾಗಬೇಕಲ್ಲ. ಮನೆಗೆ ಬಂದ ಮೂರೇ ತಿಂಗಳಲ್ಲಿ ಸ್ವೀಟಿ ತೊಂದರೆ ಕೊಡಲು ಪ್ರಾರಂಭಿಸಿದಳು. ತೊಂದರೆ ಎಂದರೆ ಮೊಂಡಾಟ. ಅವಳ ಬಗ್ಗೆ ಸ್ವಲ್ಪ ಅಪ್ರೀತಿಯಿಂದ ಮಾತನಾಡಿದರೂ ಸಾಕು, ಸಿಟ್ಟು ಬರುತ್ತಿತ್ತು. ಜಪ್ಪಯ್ಯ ಅಂದರೂ ಮುಂದೆ ಹೋಗುತ್ತಿರಲಿಲ್ಲ. ಕ್ಷಮಾಯಾಚನೆ ಮಾಡದೆ ಕದಲುತ್ತಿರಲಿಲ್ಲ. ಇನ್ನು ತೀರ ಕೋಪ ಬಂದರೆ ಯಾರಧ್ದೋ ಕೈಹಿಡಿದು ಸರಿ ರಾತ್ರಿಯಲ್ಲಿ ಪಲಾಯನ ಮಾಡಿ ಬಿಡುತ್ತಿದ್ದಳು.

ಮೊದಲ ಬಾರಿ ಈಕೆ ಪಲಾಯನ ಮಾಡಿದಾಗ ನಮಗೆ ಚಿಂತೆಯೇ ಆಗಿತ್ತು. ರಾತ್ರಿ ಮಲಗುವಾಗ ಮನೆಯ ಮುಂದೆ ನಿಂತಿದ್ದ “ಸ್ವೀಟಿ’ ಬೆಳಗ್ಗೆ ಇಲ್ಲ. ಮೂರ್ತಿಗಂತೂ ಯದ್ವಾತದ್ವ  ಬೇಸರ. ಪೊಲೀಸರಿಗೆ ವಿಷಯ ತಿಳಿಸಿಯಾಯಿತು. ಸಂಜೆಯಾದರೂ ಸುದ್ದಿಯಿಲ್ಲ. ನಮ್ಮ ಪಾಲಿಗೆ ಸ್ವೀಟಿ ಇನ್ನಿಲ್ಲ ಎಂದುಕೊಂಡು ಸ್ನಾನ ಮಾಡಿ ಸೂತಕ ಕಳೆದುಕೊಂಡೆವು. ಬೇರೆ ಕಾರು ಖರೀದಿಸುವ ಬಗ್ಗೆ ಯೋಚಿಸತೊಡಗಿದೆವು.  ಆದರೆ ಮರುದಿನ ಬೆಳಗಾಗುತ್ತಿದ್ದಂತೆಯೇ ಪೊಲೀಸರಿಂದ ಸ್ವೀಟಿ ಸಿಕ್ಕಿದ ಕರೆ ಬಂದಿತು. ಪ್ರಾಯಶಃ ನಾವು ಬೇರೆ ಕಾರು ಕೊಳ್ಳುವ ಆಲೋಚನೆ ಮಾಡಿದ್ದು ತಿಳಿದು ಆಕೆ ಮನೆಗೆ ಮರಳುವ ಯೋಚನೆ ಮಾಡಿರಬೇಕು. ಹೇಗಾದರಾಗಲಿ, ಸ್ವೀಟಿ ಹಿಂತಿರುಗುತ್ತಿರುವುದು ಒಂದು ರೀತಿಯಲ್ಲಿ  ನೆಮ್ಮದಿಯಾಯಿತು.

ಯಾರದೋ ಎರವಲು ಕಾರಿನಲ್ಲಿ ಹೋಗಿ ಮುನಿಸಿಕೊಂಡು ನಿಂತಿದ್ದ ಆಕೆಯನ್ನು ಎದುರು ಗೊಂಡಾಗ ನನ್ನನ್ನು ನೋಡಿದ ಕೂಡಲೇ ನಗದಿದ್ದರೂ ವ್ಯಂಗ್ಯವಾಡಿರಬಹುದೇ? ಎಂದೆನಿಸದೆ ಇರಲಿಲ್ಲ. ಉಸಿರೆತ್ತಿದರೆ ಮತ್ತೇನಾದರೂ ಅನಾಹುತವಾದೀತು ಎಂದು ಚಕಾರವೆತ್ತದೆ ಮನೆಗೆ ಕರೆತಂದಾಯಿತು.

Advertisement

ನೋವಿನಿಂದ ಒಂದೇ ಸಮನೆ ನರಳುತ್ತಿದ್ದಳು. ಬಾಯನ್ನು ಹರಿದು, ಕಿವಿಯನ್ನು ಕಿತ್ತು, ಇಡೀ ಮೈಯನ್ನು ಚಚ್ಚಿ ಕರೆದುಕೊಂಡು ಹೋದವರು ತಮ್ಮ ಪ್ರೀತಿಯನ್ನು ತೋರಿಸಿದ್ದರು. ಕೂಡಲೇ ವಿಮಾ ಕಂಪೆನಿಗೆ ಫೋನ್‌ ಮಾಡಿ ವಿಷಯ ತಿಳಿಸಿ ಸ್ವೀಟಿಯನ್ನು ನರ್ಸಿಂಗ್‌ ಹೋಂಗೆ ದಾಖಲಿಸಿದೆವು. ಯಾವ ತೊಂದರೆಯೂ ಇಲ್ಲದೆ ಚಿಕಿತ್ಸೆ ಮುಗಿದು ನವ ಯೌವ್ವನೆಯಾಗಿ ಮತ್ತೆ ಮನೆ ಸೇರಿದಳು.

ಹುಟ್ಟಿನಿಂದಲೇ ಸುಂದರಿ, ಈಗ ಇನ್ನೂ ಆಕರ್ಷಣಿಯವಾಗಿದ್ದಳು. ಅಂದಿನಿಂದ ನಾನೂ ಸ್ವೀಟಿಯ ಬಗ್ಗೆ ಮುತುವರ್ಜಿ ತೋರಿಸತೊಡಗಿದೆ. ಮೂರ್ತಿಯಂತೂ ಆಕೆಯ ಆರೈಕೆಯÇÉೇ ಹೆಚ್ಚು ಸಮಯ ಕಳೆಯುತ್ತಿದ್ದರು. ಸ್ವೀಟಿಯೂ ನಮ್ಮ ಒಳ್ಳೆಯತನಕ್ಕೆ ಮೆಚ್ಚಿಕೊಂಡಂತೆ ತೋರಿತು. ನಾಲ್ಕೈದು ವಾರಗಳು ಉರುಳಿದವು. ದಿನ ಬೆಳಗ್ಗೆ ಏಳುತ್ತಲೇ ಒಮ್ಮೆ ಕಿಟಕಿಯಿಂದ ಇಣುಕು ಹಾಕಿ ನನ್ನ ಸಂಗಾತಿ ಸ್ಥಿರವಾಗಿರುವುದನ್ನು ಖಾತ್ರಿ ಮಾಡಿಕೊಳ್ಳುತ್ತಿ¨ªೆ.

ಬಿಸಿಲು, ಮಳೆ ಎನ್ನದೆ ಯಾವಾಗಲೂ ರಸ್ತೆಯಲ್ಲಿರಬೇಕಾದ ಅವಳ ಪರಿಸ್ಥಿತಿಗಾಗಿ ನನಗೂ ದುಃಖವಾಗುತ್ತಿತ್ತು. ಆದರೇನು ಮಾಡುವುದು? ಮನೆ ಬದಲಾಯಿಸುವ ತನಕ ಈ ತೊಂದರೆ ಇದ್ದಿದ್ದೇ. ಮೂರ್ತಿಗೆ ಹೇಳಿ “ಈಗಿರುವ ಮನೆಯನ್ನು ಬಿಟ್ಟು ಬೇರೆ ಮನೆ ಕೊಂಡುಕೊಳ್ಳುವ ವಿಚಾರವನ್ನು ಗಟ್ಟಿ ಮಾಡಬೇಕು’ ಎಂಬೆಲ್ಲ ಆಲೋಚನೆಗಳೂ ಬಂದದ್ದುಂಟು. ಈ ನಡುವೆ ನಡೆದ ಘಟನೆ ಮರೆಯುತ್ತ ಬಂದ ಹಾಗೆ ಸ್ವೀಟಿ ನಮ್ಮ ಮೇಲಿನ ಸಿಟ್ಟನ್ನು ಬಿಟ್ಟಿದ್ದಾಳೆ ಎಂಬುದು ಮನವರಿಕೆಯಾಯಿತು. ಸ್ವೀಟಿಯ ಮನವೊಲಿಸಿಕೊಳ್ಳಲು ನಾನೂ ನಾನಾ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ.

ಬಂದವರೆದುರಿಗೆ ಆಕೆಯ ಸೌಂದರ್ಯ ವನ್ನು  ಹೊಗಳಿದ್ದೇ ಹೊಗಳಿದ್ದು!  ಆಕೆಯ ಬಣ್ಣ, ಮೂಗಿನ ನತ್ತುಗಳು ನೋಡಿ ಎಷ್ಟು ಚೆನ್ನಾಗಿ ಹೊಳೆಯುತ್ತಿವೆ. ಎರಡೂ ಕಡೆ ಮೂಗು ಚುಚ್ಚಿಕೊಂಡ ಆಕೆ ಥೇಟ್‌ ಮದರಾಸಿನ ಅಯ್ಯರ್‌ ಹೆಣ್ಮಗಳ ತರಹ ಕಾಣುವುದಿಲ್ಲವೇ? (ಹೆಡ್‌ಲೈಟ್‌ಗಳ ಮೇಲ್ಭಾಗದಲ್ಲಿ ಇರುವ ಸಣ್ಣ ಕೆಂಪು ದೀಪಾಕೃತಿಗಳು, ಕ್ಷಮಿಸಿ, ಅದೇ ಇಂಡಿಕೇಟರ್‌ಗಳು). ಸ್ವೀಟಿಯನ್ನು ಹೊಗಳುವುದರಲ್ಲಿ ಮೂರ್ತಿಯೂ ಹಿಂದೆ ಬೀಳಲಿಲ್ಲ. ಅವಳ ವೇಗ, ಪೆಟ್ರೋಲಿನ ಹಿತವಾದ ಬಳಕೆ ಒಂದೇ ಎರಡೇ ಅವಳನ್ನು ಹೊಗಳಿದ್ದೇ ಹೊಗಳಿದ್ದು! ಮೊದಲೇ ಸ್ವೀಟಿಯನ್ನು ಕಂಡರೆ ಬಹಳ ಮೆಚ್ಚುಗೆ.

ಇನ್ನು ಹೊಗಳುವ ಅವಕಾಶ ಸಿಕ್ಕಿದರೆ ಬಿಟ್ಟಾರೆಯೇ ?

ಹೊಗಳಿಕೆಯನ್ನು ಕೇಳಿದವರಿಗೆ ಬೇಸರವಾಯಿತೋ ಇಲ್ಲವೋ, ನಮ್ಮ ಸ್ವೀಟಿಗೆ ಮಾತ್ರ ಅಜೀರ್ಣವಾಯಿತು. ತನ್ನನ್ನು ಎಲ್ಲರೂ ಬಹಳ ಇಷ್ಟಪಡುತ್ತಾರೆ ಎಂದು ಆನಿಸಿದ್ದೇ ತಡ ಸ್ವಲ್ಪವೂ ತಡಮಾಡದೆ ಅಂದೇ ರಾತ್ರಿ ಯಾರದೋ ಜತೆಯಲ್ಲಿ  ಪ್ರಯಾಣ ಮಾಡಿಬಿಟ್ಟಳು. ಬೆಳಗ್ಗೆ ಎದ್ದು ಎಂದಿನಂತೆ ನೋಡುತ್ತೇನೆ ಸ್ವೀಟಿ ನಿಂತಿದ್ದ ಜಾಗ ಬಿಕೋ ಎನ್ನುತ್ತಿದೆ. ಕೂಡಲೇ ಮೂರ್ತಿಯನ್ನು ಕೂಗಿದೆ. ಶನಿವಾರದ ಬೆಳಗಿನ ಸವಿನಿ¨ªೆಯ ಗುಂಗಿನಲ್ಲಿದ್ದ ಅವರು ಏನೇ ನಿಂದು ಏಳುತ್ತಲೇ ರಾಮಾಯಣ? ಎಂದು ಆಕ್ಷೇಪಿಸಿದರು. ನಂದೇನ್ರೀ, ಎಲ್ಲ ನಿಮ್ಮ ಸ್ವೀಟಿದ್ದು, ಇವತ್ತಾಗ್ಲೆ ಎÇÉೋ ಪಾರಾರಿಯಾಗಿದ್ದಾಳೆ ಎಂದೆ ಅಸಹನೆಯಿಂದ. ಅವರ ನಿದ್ದೆಯೆಲ್ಲ ಹಾರಿಹೋಯ್ತು. ಇದೇನು ಗ್ರಹಚಾರ ಬಂತಪ್ಪ, ಹುಂ ಇನ್ನೇನು ಮಾಡೋದು? ಎನ್ನುತ್ತಿರುವಾಗಲೇ ಕೋಪದಿಂದಲೇ ಮೂರ್ತಿಯ ಕೈಗೆ ಫೋನ್‌ ಅನ್ನು ಸಾಗಿಸಿದೆ. ಮೂರ್ತಿ ಪೊಲೀಸರಿಗೆ ಫೋನ್‌ ಮಾಡಿದರು. ಆ ಪೊಲೀಸ್‌ ಮಹಾಶಯ ವಿವರವನ್ನೆಲ್ಲ ಕೇಳಿದ ಮೇಲೆ ಅಯ್ಯೋ ಸರ್‌, ನಿಮ್ಮ ವಾಕ್ಸಾಲ ತುಂಬ ಚಂಚಲೆ. ಆಕೆ ನಡತೆ ಸ್ವಲ್ಪವೂ ಚೆನ್ನಾಗಿಲ್ಲ, ಸಿಕ್ಕಿದವರ ಜತೆ ಓಡಿ ಹೋಗ್ತಾಳೆ ಅಂತೀನಿ! ಅವಳ ಹೆಸರಿನಲ್ಲಿ ಏನೋ ಗುಟ್ಟಿದೆ. ವಾಕÕ… ವಿತ್‌ ಅಲ್‌. ಆದ್ದರಿಂದಲೇ ವಾಕ್ಸಾಲ್‌ ಅಂತಿರಬಹುದೇ? ಅದಕ್ಕೇ ಇರಬೇಕು ಯಾರು ಬೇಕಾದ್ರು ಅವಳ ಬೀಗ ತೆಗೆಯೋ ಹಾಗಿರೋದು. ನನ್ನ ಹತ್ರನೂ ಇದುÉ  ಒಬ್ಬಳು.ಆರೇ ತಿಂಗ್ಳು ಅಂತೀನಿ. ನಾನೂ ನಿಮ್ಮ ತರಹ ರಸ್ತೇಲೆ ನಿಲ್ಲಿಸ್ತಿ¨ªೆ, ಬರೋ ಹೋಗೋರಿಗೆ ಯಾರಿಗೆ ಕಣ್ಣು ಹೊಡೆದಳ್ಳೋ ಏನ್‌ ಕಥೆಯೋ ಅಂತೂ ಒಂದು ದಿನ ಇದ್ದಕಿದ್ದ ಹಾಗೆ ಪಲಾಯನ ಮಾಡಿಬಿಟ್ಟಳು. ಮತ್ತೆ ಅವಳನ್ನು ನೋಡ್ಲೆà ಇಲ್ಲ. ಆದ್ರೆ ಇದು ಬರಿ ಅವಳ ತಪ್ಪಲ್ಲ. ನೋಡೋದಕ್ಕೆ ಲಕ್ಷಣವಾದ ಮೈಮಾಟ ಇದೆ ನೋಡಿ, ಯಾರನ್ನು ಬೇಕಾದ್ರೂ ಆಕರ್ಷಿಸಿಬಿಡ್ತಾಳೆ. ಬಹಳ ಎಚ್ಚರಿಕೆಯಿಂದ ಇರಬೇಕು, ಆಯ್ತು ನಮಗೇನಾದ್ರು ಸಿಕ್ಕಿದರೆ ತಕ್ಷಣ ತಿಳಿಸ್ತೀವಿ. ಅಂತ ದೊಡ್ಡ ಭಾಷಣವನ್ನೇ ಬಿಗಿದದ್ದು ಫೋನ್‌ನ ಸ್ಪೀಕರ್‌ ಆನ್‌ ಅಗಿದ್ದರಿಂದ ನನಗೂ ಕೇಳಿಸಿತ್ತು. ಮೊದಲೇ ಕಾರು ಕಳೆದುಕೊಂಡಿರುವ ಬೇಸರ, ಈ ಭಾಷಣ ಬೇರೆ.. ಎಂದು ಮೂರ್ತಿ ಫೋನ್‌ ಕುಕ್ಕಿದರು.

ಸ್ನಾನ ಮಾಡಿ ತಿಂಡಿ ತಿಂದು ಹತ್ತಿರದÇÉೇ ಇದ್ದ ಅಂಗಡಿಯಿಂದ ಮನೆಗೆ ಬೇಕಾದ ಕೆಲವು ಪದಾರ್ಥಗಳನ್ನು ತಂದಾಯಿತು. ಕಾರಿಲ್ಲದೆ ದೂರ ಹೋಗುವ ಮಾತೇ ಇಲ್ಲವಲ್ಲ! ಅÇÉಾ ಈ ಸ್ವೀಟಿ ಹೋಗೋದು ಹೋದುÉ, ಶನಿವಾರಾನೇ ಯಾಕೆ ಹೋದುÉ? ಇವಳ ದೆಸೆಯಿಂದ ನಾವು ಎಲ್ಲೂ ಹೋಗೋ ಹಾಗಿಲ್ಲ. ನಾನು ಗೊಣಗಿದೆ.

ಸದ್ಯ ಈ ಓಡಿ ಹೋಗುವ ಕಾರ್ಯಕ್ರಮವನ್ನು ಶನಿವಾರಕ್ಕೇ ಇಟ್ಟು ಕೊಳ್ಳುತ್ತಾಳಲ್ಲ, ಅದೇ ನಮ್ಮ ಪುಣ್ಯ. ಇಲ್ಲದಿದ್ದರೆ ಆಫೀಸ್‌ಗೆ ರಜೆ ಹಾಕಿ ಮನೆಯಲ್ಲಿ ಕುಳಿತಿರಬೇಕಾಗುತ್ತಿತ್ತು  ಎಂಬುದು ಮೂರ್ತಿಯ ನಿಟ್ಟುಸಿರಿನ ಮಾತು.

ಅಂತೂ ಮಧ್ಯಾಹ್ನ ಒಂದು ಗಂಟೆ ವೇಳೆಗೆ ಫೋನು ರಿಂಗಾಯಿತು. ರಿಸೀವರನ್ನೆತ್ತಿ “ಹಲೋ’ ಎಂದೆ. “ಕುಡ್‌ ಐ ಸ್ಪೀಕ್‌ ಟು ಮಿಸ್ಟರ್‌ ಮೂರ್ತಿ ಪ್ಲೀಸ್‌’ ಎಂದಿತು ಧ್ವನಿ. ತಕ್ಷಣ ಫೋನನ್ನು ಮೂರ್ತಿಗೆ ವರ್ಗಾಯಿಸಿದೆ. ಸಾರ್‌ ನಿಮ್ಮ ಗಾಡಿ ಸಿಕ್ಕಿದೆ, ಇÇÉೇ ನಿಮ್ಮ ಮನೆಗೆ ಹತ್ತಿರದ ರೈಲ್ವೇ ಸ್ಟೇಷನ್‌ ಬಳಿ ಇದೆ ಎಂದರು.

ಬಹಳ ದೂರ ಹೋಗಿಲ್ಲವಲ್ಲ ಎಂದುಕೊಂಡು ಕೂಡಲೇ ಕರೆತರಲು ಹೊರಟೆವು, ಹೋಗಿ ನೋಡಿದರೆ ಯಾವ ರೀತಿಯ ಏಟೂ ಇಲ್ಲ. ಆದರೆ ಮನೆಯಿಂದ ಹೊರಡುವಾಗಲೇ ಸ್ಟೇರಿಂಗ್‌ಗೆ ಹಾಕಿದ ಬೀಗವನ್ನು ತೆಗೆದು ಹಿಂದಿನ ಸೀಟಿನ ಮೇಲೆ ಇಟ್ಟದ್ದು ಈಗಲೂ ಅಲ್ಲಿಯೇ ಇತ್ತು. ಇದೊಂದು ಹೊಸ ರೀತಿಯ  ನಾಟಕ ಎನಿಸಿತು. ಅಲ್ಲ ಎಲ್ಲ ಬಿಟ್ಟು ರೈಲ್ವೇ ಸ್ಟೇಷನ್‌ ಬಳಿ ಬಂದದ್ದೇಕೆ, ಒಬ್ಬಳೇ ಬಂದಳ್ಳೋ ಯಾರದಾದರೂ ಜತೆಯಲ್ಲಿ ಬಂದಿದ್ದಳ್ಳೋ? ಇಂಗ್ಲೆಂಡ್‌ ದೇಶವನ್ನು ಬಿಟ್ಟು ಹೋಗುವ ಆಲೋಚನೆಯೋ ಅಥವಾ ನಮ್ಮಿಂದ ತಲೆಮರೆಸಿಕೊಂಡು ಹೋಗುವ ಪಲಾಯನ ವಾದವೋ? ಉತ್ತರಿಸುವವರು ಯಾರು?

ಅಂತೂ ಷೋಡಷೋಪಚಾರಗಳನ್ನು  ಮಾಡಿ ಮನ್ನಿಸಿ ಮನೆಗೆ ಕರೆತಂದಾಯಿತು. ಮೂರನೇ ಬಾರಿಗೆ ಮನೆಗೆ ಬಂದ ಮಹರಾಯಿತಿ ಮತ್ತೆ ಮುನಿಸಿಕೊಂಡು ಮನೆ ಬಿಟ್ಟು ಹೋಗದಿದ್ದರೆ ಸಾಕು ಎಂದು ನಾವು ಸ್ವೀಟಿಯ ಬಗ್ಗೆ ಬಹಳ ಎಚ್ಚರಿಕೆಯಿಂದ ವರ್ತಿಸತೊಡಗಿದೆವು.

ಮೂರ್ತಿ ಇನ್ನೂ ಹೆಚ್ಚು ಹೆಚ್ಚು ಆರೈಕೆ ಮಾಡತೊಡಗಿದರು. ಸ್ವೀಟಿಯ ಬಗ್ಗೆ ಮೂರ್ತಿ ತೋರಿಸುತಿದ್ದ ಪ್ರೀತಿಯನ್ನು ನೋಡಿದಾಗ ನನಗೆ ಒಮ್ಮೊಮ್ಮೆ ಅಸೂಯೆ ಆಗುತಿತ್ತು. ಒಳಗೊಳಗೇ ಸವತಿ ಮಾತ್ಸರ್ಯ ಕಾಡತೊಡಗಿತು. ನನ್ನ ಮನೆಯÇÉೇ ನಾನು ಪರಕೀಯಳಾಗುತ್ತಿದ್ದೇನೆ ಎನಿಸುತ್ತಿತ್ತು. ವಿಧಿಯಿಲ್ಲ ಸಹಿಸಿಕೊಳ್ಳಲೇಬೇಕು.

ದಿನಗಳು ಕಳೆಯುತ್ತಿದ್ದವು, ವಾರಗಳು ಉರುಳುತ್ತಿದ್ದವು. ಅದೇನು ಗ್ರಹಚಾರವೋ ನಮ್ಮೆಲ್ಲ ಆರೈಕೆ ಉಪಚಾರಗಳೂ  ಸ್ವೀಟಿಗೆ ಸಂತೋಷ ಕೊಡಲಿಲ್ಲ ಎನ್ನುವುದು ದೃಢವಾಯಿತು. ಯಾಕೆಂದರೆ ಶುಕ್ರವಾರ ರಾತ್ರಿ ಮನೆ ಮುಂದೆ ನಿಂತಿದ್ದ ಸ್ವೀಟಿ ಮತ್ತೆ ಶನಿವಾರ ಬೆಳಗ್ಗೆ ವೇಳೆಗೆ ಮಾಯವಾಗಿದ್ದಳು. ಈ ಬಾರಿ ಕರೆದುಕೊಂಡು ಹೋದವರಂತೂ ಆಕೆಯ ರೂಪವನ್ನೇ ವಿಕಾರ ಮಾಡಿ ಕಳುಹಿಸಿದ್ದರು. ಅದೆಷ್ಟು ಜನರ ಆಕ್ರಮಣ ನಡೆದಿತ್ತೋ ಬಲ್ಲವರಾರು? ಗುರುತೂ ಸಿಗಲಾರದಷ್ಟು ಬದಲಾಗಿದ್ದ ಸ್ವೀಟಿಯನ್ನು ಪೊಲೀಸರ ನೆರವಿನಿಂದ ನೇರವಾಗಿ ಆಸ್ಪತ್ರೆಗೆ ದಾಖಲಿಸಲಾಯಿತು.  ಈ ಬಾರಿ ಚೇತರಿಸಿಕೊಳ್ಳಲು ಆಕೆಗೆ ಸುಮಾರು ಒಂದು ವಾರವೇ ಹಿಡಿಯಿತು. ಅಂತೂ ಮತ್ತೆ ಮನೆಗೆ ಬಂದಳು.

ನನಗಂತೂ ಇವಳ ಈ ನಡವಳಿಕೆ ಬೇಸರವಾಗಿ ಮಾರಿಬಿಡೋಣವೇ ಮೂರ್ತಿ ಎಂದೆ. ಅವರಿಗೂ ನನ್ನ ಆಲೋಚನೆ ಸರಿ ಎನ್ನಿಸಿರಬೇಕು. ಮೌನದಿಂದಲೇ ಸಮ್ಮತಿಸಿದರು. ಹೇಗೂ ಮನೆಗೆ ಬಂದಿದ್ದಾಳೆ. ಕೆಲವು ವಾರಗಳಂತೂ ಖಂಡಿತ ಎಲ್ಲೂ ಹೋಗುವುದಿಲ್ಲ. ಆಮೇಲೆ ನೋಡೋಣ ಎಂದು ಸುಮ್ಮನಾದೆವು.

ಎಪ್ರಿಲ್‌ ತಿಂಗಳ 4ನೇ ತಾರೀಕು. ಕನ್ನಡ ಬಳಗದ ಕಾರ್ಯಕ್ರಮ, ಸ್ವೀಟಿಯೊಂದಿಗೆ ಹೋಗೋಣ ಎಂದರು ಮೂರ್ತಿ. ಆದರೆ ಬೆಳಗ್ಗೆ ಈ ಮು¨ªಾದ ಸ್ವೀಟಿ ಮಾಯವಾಗಿಬಿಟ್ಟರೇ ಎಂದು ನನ್ನ ಸಿಟ್ಟನ್ನು ತೋರಿಸಿಕೊಂಡೆ. ಆಗ ಮೂರ್ತಿ, ಸುಮ್ನಿರೇ, ನಿನ್ನ ಮಾತು ಆಕೆ ಕೇಳಿಸಿಕೊಂಡರೆ ಖಂಡಿತ ಅನಾಹುತವಾಗುತ್ತೆ ಎಂದು ನನ್ನನ್ನು ತಡೆದರು. ಏನಾದರೂ ಮಾಡಿಕೊಳ್ಳಲಿ ಎಂದು ನಾನೂ ವಿಷಯವನ್ನು  ಬೆಳೆಸದೆ ಸುಮ್ಮನಾದೆ.

ಮಾರನೇ ದಿನ ಬೆಳಗ್ಗೆ ಬೇಗನೆ ಎದ್ದು ಸ್ನಾನ ಪೂಜಾದಿಗಳನ್ನು ಮಾಡಿ ನಾನು ಸಿದ್ಧಳಾಗುತ್ತಿದ್ದೆ. ಅಷ್ಟರಲ್ಲಿ ರೂಮಿನ ತೆರೆದ ಕಿಟಕಿ ಮುಚ್ಚಲು ಹೋದ ಮೂರ್ತಿ, “ಲೇ ಸತ್ಯೂ ಎಂತಾ ಕೆಲ್ಸ ಮಾಡಿದೆ ! ಅದೇನು ಶಕುನ ನುಡಿದೆಯೋ? ಸ್ವೀಟಿ ಹೊರಟೊØàಗಿದಾಳೆ.. ಎಂದು ಒಂದೇ ಸಮನೆ ಕೋಪದಿಂದ ಕೂಗಾಡಿದರು. ಕ್ಷಮಿಸಿ ಮೂರ್ತಿ ಹೀಗೆ ಆಗುತ್ತದೆ ಎಂದು ತಿಳಿದಿದ್ದರೆ ಖಂಡಿತ ಹೇಳುತ್ತಿರಲಿಲ್ಲ  ಎಂದು ನೊಂದುಕೊಂಡೆ.

ಇನ್ನೇನು ಮಾಡುವುದು. ಎಲ್ಲ ನಮ್ಮ ಗ್ರಹಚಾರ. ಈಗ ಮೊದಲು ಪೊಲೀಸರಿಗೆ ಫೋನ್‌ ಮಾಡಿ  ವಿಷಯ ತಿಳಿಸಿ ಅನಂತರ ಎÇÉಾದರೂ ಕಾರಿನ ವ್ಯವಸ್ಥೆ ಮಾಡೋಣ ಎಂದು  ನನ್ನನ್ನೇ ಸಮಾಧಾನ ಮಾಡಿದರು.

ಕೊನೆಗೆ ಸ್ನೇಹಿತರೊಬ್ಬರ ಕಾರನ್ನು ಎರವಲು ಪಡೆದು ಕನ್ನಡ ಬಳಗದ ಕಾರ್ಯಕ್ರಮಕ್ಕೆ ತೆರಳಿದೆವು. ಅಂದೇ ರಾತ್ರಿ ಪೊಲೀಸರಿಂದ ಫೋನ್‌. ನಮ್ಮ ಕಾರನ್ನು ಈಗಾಗಲೇ ಹುಡುಕಿದ್ದರು. ಪುಣ್ಯಕ್ಕೆ ದೊಡ್ಡ ಗಾಯಗಳಾಗಿರಲಿಲ್ಲ.  ಹೀಗಾಗಿ ಮತ್ತೆ ಮನೆಗೆ ಮರಳಿದಳು ಸ್ವೀಟಿ. ಆದರೆ ಸುಶ್ರಾವ್ಯವಾಗಿ ಹಾಡುತ್ತಿದ್ದ ಅವಳ ಗಂಟಲಿಗೆ ಬೀಗ ಬಿದ್ದಿತ್ತು. ಈ ಬಾರಿ ನಾವೂ ಹಣ ಖರ್ಚು ಮಾಡುವ ಗೋಜಿಗೆ ಹೋಗಲಿಲ್ಲ. ಹೇಗಾದರೂ ಮಾಡಿ ಇವಳಿಂದ ಬಿಡುಗಡೆ ಹೊಂದಬೇಕು ಎಂಬ ಹಠ ಮೂಡಿತು. ಎÇÉೆಲ್ಲಿ ಕೊಟ್ಟು ಕೊಳ್ಳುವ ವ್ಯವಹಾರ ಮಾಡುತ್ತಾರೆ ಎಂದು ವಿಚಾರಿಸತೊಡಗಿದೆ. ಈ ನನ್ನ ಆಲೋಚನೆ ಮೂರ್ತಿಗೆ ಅಷ್ಟು ಸರಿ ಬರಲಿಲ್ಲ. ಆದರೆ ನನ್ನ ದೃಢ ನಿಶ್ಚಯಕ್ಕೆ ಅವರು ಎದುರಾಡಲಿಲ್ಲ.

ಮುಂದಿನ ಎರಡು ವಾರಗಳು ಉರುಳಿದ್ದೇ ಹೆಚ್ಚು. ಮನೆ ಮುಂದೆ ಸದಾ ಮಂಕಾಗಿ ನಿಂತಿರುತ್ತಿದ್ದ ಸ್ವೀಟಿ ಈಗ ಮತ್ತೆ ಮಾಯವಾಗಿದ್ದಳು. ದಿನ ಬೆಳಗಾದರೆ ಇವಳ ಗೋಳು ಇದ್ದದ್ದೇ. ನನಗಂತೂ ಕಂಪ್ಲೇಂಟ್‌ ಕೊಟ್ಟೂ ಕೊಟ್ಟೂ ಸಾಕಾಗಿದೆ ಎಂದು ಗೊಣಗುತ್ತಲೇ ಮೂರ್ತಿ ಕಂಪ್ಲೇಂಟ್‌ ಕೊಟ್ಟು ಸುಮ್ಮನಾದರು. ಇಂದಲ್ಲ ನಾಳೆ ಪೊಲೀಸರು ಅವಳ ಸುದ್ದಿ ತಂದಾರು ಎಂದು ಕಾದೆವು. ಆದರೆ ವಾರಗಳು ಒಂದರ ಮೇಲೊಂದು ಉರುಳಿದರೂ ಸ್ವೀಟಿಯ ಸುದ್ದಿ ಇಲ್ಲ. ಈಗ ನಮಗೆ ಸ್ವಲ್ಪ ಯೋಚನೆ ಹತ್ತಿತು. ಪೊಲೀಸರಲ್ಲಿ ವಿಚಾರಿಸಿದರೂ ಪ್ರಯೋಜನವಾಗಲಿಲ್ಲ. ಯಾಕೆ ಹೀಗಾಯ್ತು? ಎಂದು ಯೋಚಿಸುತ್ತ ಮಲಗಿದ್ದಾಗ ನಿ¨ªೆ ಯಾವಾಗ ಬಂತೋ ತಿಳಿಯದು. ಫೋನ್‌ನ ಗಂಟೆ ಒಂದೇ ಸಮನೆ ಕಿರುಚಿಕೊಳ್ಳತೊಡಗಿದಾಗ ಎಚ್ಚರವಾಯಿತು. ಮೂರ್ತಿ ಎದ್ದು ಫೋನ್‌ ಎತ್ತಿಕೊಂಡಾಗ, ಸಾರ್‌ ಪೊಲೀಸ್‌ ಸ್ಟೇಷನ್‌ನಿಂದ. ನಿಮಗೊಂದು ಬ್ಯಾಡ್‌ ನ್ಯೂಸ್‌. ಸ್ವೀಟಿಯ ಶವ ಸಿಕ್ಕಿದೆ. ಆಸ್ಪತ್ರೆಯಲ್ಲಿದೆ. ನಾಳೆ ಬಂದು ಕರೆದುಕೊಂಡು ಹೋಗಿ ಎಂದು ಬಿಟ್ಟರು.

ಆಗ ಮೂರ್ತಿ, ಏನ್ಸಾರ್‌  ಏನ್ಹೆàಳ್ತಾ ಇದೀರಿ? ಎಂದರೆ, “ಐ ಆ್ಯಮ್‌ ಸಾರಿ ಮಿಸ್ಟರ್‌ ಮೂರ್ತಿ, ನೀವು ಕೊಟ್ಟಿದ್ದ ಗುರುತುಗಳಿಂದ ಆಕೇನೆ ನಿಮ್ಮ ಸ್ವೀಟಿ ಅಂತ ಗೊತ್ತಾಯ್ತು. ಯಾರೋ ಖದೀಮರು ಜೀವ ತೆಗೆದದ್ದಷ್ಟೇ ಅಲ್ಲ ಅಗ್ನಿ ಸಂಸ್ಕಾರವನ್ನೂ ಮಾಡಿ¨ªಾರೆ. ನಾನೇ ಆಕೆಯನ್ನು ಎರಡು ಮೂರು ಬಾರಿ ಹುಡುಕಿದ್ದರಿಂದ ಅವಳ ಹೆಸರೂ ಗೊತ್ತಾಗಿದ್ದು ಕಂಡುಹಿಡಿಯೋದು ಸುಲಭವಾಯ್ತು ಎಂದು  ವರದಿ ಒಪ್ಪಿಸಿ ಫೋನ್‌ ಕೆಳಗಿಟ್ಟ. ಒಂದು ರೀತಿಯ ಶಾಕ್‌ಗೆ ಒಳಗಾದ ಮೂರ್ತಿಯನ್ನು ನೋಡಿ, ಏನಾಯ್ತು ಎಂದು ಕೇಳಿದೆ. ಅದಕ್ಕೆ ಅವರು, ಎಲ್ಲ ಮುಗೀತು ಕಣೆ ಸ್ವೀಟಿ ಇನ್ನಿಲ್ಲ. ಬೆಳಗ್ಗೆ ಎದ್ದು ಹೋಗಿ ಅವಳ ಮೃತದೇಹವನ್ನು ಗುರುತಿಸಿ ಬರಬೇಕು. ಅನಂತರ ಒಂದು ತರ್ಪಣ ಕೊಡಬೇಕು. ಕಡೆಗೂ ನಮ್ಮ ಮೇಲೆ ಸೇಡು ತೀರಿಸಿಕೊಂಡಳು ಎಂದು ಪೇಚಾಡಿಕೊಂಡರು.

ಹೋಗ್ಲಿ ಬಿಡಿ ಮೂರ್ತಿ ಅವಳಿಗಾಗಿ ಯಾಕೆ ದುಃಖೀಸುತ್ತೀರಿ? ಎಷ್ಟು ಮಾಡಿದರೂ ಅಷ್ಟೆ. ಅವಳ ಹಣೆಬರಹದಲ್ಲಿ ಇದ್ದದ್ದು ಆಯಿತು ಎಂದೆ. ನಿಜ ಹೇಳಬೇಕೆಂದರೆ ನನಗೆ ಸವತಿಯ ಕಾಟ ತಪ್ಪಿತೆಂದು ಸಂತೋಷ ವಾಗಿತ್ತು. ಇನ್ನು ಮೇಲೆ ಸ್ವೀಟಿಗಾಗಿ ನಾವು ಕಂಪ್ಲೇಂಟ್‌ ಕೊಡಬೇಕಾಗಿಲ್ಲವಲ್ಲ  ಎಂಬುದೇ ಮೂರ್ತಿಯವರಿಗೆ ಸಮಾಧಾನದ ವಿಷಯವಾಗಿತ್ತು.

 

ಡಾ| ಸತ್ಯವತಿ ಮೂರ್ತಿ, 

ಮ್ಯಾಂಚೆಸ್ಟರ್‌

Advertisement

Udayavani is now on Telegram. Click here to join our channel and stay updated with the latest news.

Next