Advertisement

ಕೈ ಸುಟ್ಟಾಗಲೇ ರೊಟ್ಟಿ ರುಚಿಯಾಗುವುದು..

09:31 PM Jul 04, 2021 | Team Udayavani |

ಮಲೆನಾಡ ಸೌಂದರ್ಯವೇ ಹಾಗೆ. ಮನದಣಿಯೇ ಆನಂದಿಸಬೇಕು. ಮಲೆನಾಡಿನ ಮಳೆಗಾಲ ಇನ್ನೂ ಅಂದ, ಒಮ್ಮೊಮ್ಮೆ ಜಿಟಿಜಿಟಿ, ಇನ್ನೊಮ್ಮೆ ಭೋರ್ಗರೆವ ಮಳೆಯಾದರೆ, ಮಳೆ ನಿಂತ ಮೇಲೆ ಗಿಡ ಮರಗಳಿಂದ ತೊಟ್ಟಿಕ್ಕುವ ಹನಿಗಳ ನಿನಾದ. ಗೋದಳಿಗೆ ಮನೆಗೆ ಮರಳುವ ದನ ಕರುಗಳ ನೋಡುತ್ತ, ಅವುಗಳ ಕುತ್ತಿಗೆಗೆ ಕಟ್ಟಿದ ಚಿಕ್ಕ ಗಂಟೆಗಳ ಸದ್ದು  ಈ ವೇಳೆಗೆ ಬಿಸಿ ಬಿಸಿ ಕಾಫಿ, ಕುರುಕಲು ತಿಂಡಿ ಸವಿಯುವ ಮಜವೇ ಬೇರೆ.

Advertisement

ಸದ್ದಿರದ ಪಸುರೊಡೆಯ ಮಲೆನಾಡ ಬನಗಳಲಿ ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ…ಎಂದು ಸಾಗುವ ಕವಿತೆ, ಅಲ್ಲಿ ಸಿರಿಗನ್ನಡದ ಹಬ್ಬಗಳ ಕಬ್ಬಗಳು ದಿನದಿನವು ಸವಿಯೂಟ ವಿಕ್ಕುತಿರಲೆನೆಗೆ… ಎಂಬ ಸಾಲನ್ನೂ ಒಳಗೊಂಡು, ಕಣ್ಣೆದುರು ಬಂದು ನಿಲ್ಲುವಂತೆ ಅದೆಷ್ಟು ಅಂದವಾಗಿ ಕುವೆಂಪು ಅವರು  ತಮ್ಮ ಈ ಕವನದಲ್ಲಿ ಬಣ್ಣಿಸಿ¨ªಾರೆ.

ಮಲೆನಾಡ ಸೌಂದರ್ಯವೇ ಹಾಗೆ. ಮನದಣಿಯೇ ಆನಂದಿಸಬೇಕು. ಮಲೆನಾಡಿನ ಮಳೆಗಾಲ ಇನ್ನೂ ಅಂದ, ಒಮ್ಮೊಮ್ಮೆ ಜಿಟಿಜಿಟಿ, ಇನ್ನೊಮ್ಮೆ ಭೋರ್ಗರೆವ ಮಳೆಯಾದರೆ, ಮಳೆ ನಿಂತ ಮೇಲೆ ಗಿಡ ಮರಗಳಿಂದ ತೊಟ್ಟಿಕ್ಕುವ ಹನಿಗಳ ನಿನಾದ. ಗೋದಳಿಗೆ ಮನೆಗೆ ಮರಳುವ ದನ ಕರುಗಳ ನೋಡುತ್ತ, ಅವುಗಳ ಕುತ್ತಿಗೆಗೆ ಕಟ್ಟಿದ ಚಿಕ್ಕ ಗಂಟೆಗಳ ಸದ್ದು  ಈ ವೇಳೆಗೆ ಬಿಸಿ ಬಿಸಿ ಕಾಫಿ, ಕುರುಕಲು ತಿಂಡಿ ಸವಿಯುವ ಮಜವೇ ಬೇರೆ.

ಮದುವೆಯ ಅನಂತರ ನನಗೆ ಧಾರವಾಡದ ನೆಲದ ಬಾಂಧವ್ಯ ದೊರಕಿತು. ಬಯಲು ಸೀಮೆಯ ಧಾರವಾಡಕ್ಕೂ ಮಲೆನಾಡಿಗೂ ಬಹಳ ಸಾಮ್ಯವಿದೆ. ಹಸುರಿನ ಬೀಡು, ತಂಪಾದ ವಾತಾವರಣ, ಸಾಹಿತ್ಯದ ಕೇಂದ್ರ, ವಿದ್ಯಾರ್ಜನೆಯ ಮುಖ್ಯಬಿಂದು ಹೀಗೆ ಸಾಗುತ್ತವೆ ಧಾರವಾಡದ ಹೆಗ್ಗಳಿಕೆ.

ಪತಿಯವರಿಗೆ  ಪೋಸ್ಟ್‌ ಗ್ರ್ಯಾಜುವೇಶನ್‌ಗೆ

Advertisement

ಸೀಟು ಸಿಕ್ಕಿದ್ದರಿಂದ ಧಾರವಾಡದ ನಮ್ಮ ಮನೆಯಲ್ಲಿ ನೆಲೆಸಬೇಕಾಯಿತು. ನಾನೂ ಓದುತ್ತಿದ್ದರೂ ಮಧ್ಯೆ ಧಾರವಾಡಕ್ಕೆ ಹೋಗುತ್ತಿದ್ದಾರೆ. ಧಾರವಾಡದ ಮಳೆಯೂ ಚೆಂದವೇ. ಮಲೆನಾಡಿನ ತಿನಿಸುಗಳಂತೆ ಇಲ್ಲಿನ ತಿನಿಸುಗಳೂ ತುಂಬಾ ರುಚಿಕರ. ಧೋ ಎಂದು ಮಳೆ ಸುರಿಯುವಾಗ ಇನ್ನು ಚಳಿಗಾಲದಲ್ಲಿಯೂ ಬಿಸಿಯಾದ ಜೋಳದ ರೊಟ್ಟಿ, ಎಣಗಾಯಿ, ಸೊಪ್ಪಿನ ಪಲ್ಯ, ಗುರೆಳ್ಳು ಚಟ್ನಿ ಆಹಾ ! ಇದು ಶಬ್ದಕ್ಕೆ ನಿಲುಕದ ಮಾತು. ಸವಿದು ಅನುಭವಿಸಬೇಕು.

ಮನೆಗೆ ನಿಂಗವ್ವ ರೊಟ್ಟಿ ಬಡಿಯಲು ಬರುತ್ತಿದ್ದರು. ಬಿಸಿಬಿಸಿ ರೊಟ್ಟಿಯನ್ನು ತಟ್ಟೆಗೆ ತಂದು ಬಡಿಸುತ್ತಿದ್ದರು. ನಿಂಗವ್ವ  ಸರಿಸುಮಾರು 45 ವರ್ಷದ ಪ್ರಬುದ್ಧ ಮಹಿಳೆ.

ನಾನು ಮೊದಲು ಎರಡು ದಿನ ಅವರ ಪಕ್ಕ ನಿಂತು ರೊಟ್ಟಿ ಬಡಿಯುವುದನ್ನು ಗಮನಿಸಿದೆ. ನನಗೆ ರೊಟ್ಟಿಯ ಬಗ್ಗೆ ಕುತೂಹಲ ಇಮ್ಮಡಿಯಾಗಿ ಬಡಿಯುವುದನ್ನು ಕಲಿಯಬೇಕು ಎನಿಸಿತು. ನಿಂಗವ್ವ ನನಗೂ ಕಲಿಸಿರಿ ಎಂದೆ. ಅಕ್ಕಾರ ನೀವಿನ್ನು ಚಿಕ್ಕವರದೀರಿ, ಆಮ್ಯಾಕ ಕಲಿಸ್ತೀನಿ ನಿಲ್ಲರಿ ಎಂದರು. ಆಗ ನಾನು ಇನ್ನೂ ಓದುತ್ತಿದ್ದರಿಂದ ನನ್ನನ್ನು ಎಲ್ಲರೂ ಚಿಕ್ಕವಳೆಂದು ಎಣಿಸುವುದು, ಬಹಳ ಸಾರಿ ನೀನಿನ್ನೂ ಚಿಕ್ಕವಳು ಸುಮ್ಮನಿರು ಎನ್ನುವ ಮಾತು ಅಭ್ಯಾಸವಾಗಿಬಿಟ್ಟಿತ್ತು.

ಸರಿ ಎಂದು ಮತ್ತೆ ಎರಡು ದಿನಗಳ ಅನಂತರ ನಿಂಗವ್ವ ಈಗ ನೀವು ಇದೀರಿ, ನಮಗೆ ರೊಟ್ಟಿ ಮಾಡಿ ಕೊಡುತ್ತೀರಿ, ನಾವು ಬೇರೆ ಊರಿಗೆ ಹೋದ ಅನಂತರ ತಾವು ಬರಲ್ಲ, ನನಗೆ ರೊಟ್ಟಿ ಬಡಿಯಲು ಬರಲ್ಲ. ನಾವು ಹೋಗುವ ಊರಲ್ಲಿ ರೊಟ್ಟಿ ಬಡಿಯುವ ನಿಮ್ಮಂತವರು ಸಿಗದಿದ್ದರೆ ಏನು ಮಾಡಲಿ? ಎಂದು ಕೇಳಿದೆ ಮೇಲೆ ಅವರು ಕಲಿಸಲು ಮುಂದಾದರು.

ಮೊದಲ ದಿನ ರೊಟ್ಟಿ ಪುರಿಯಷ್ಟು ದೊಡ್ಡದಾಯಿತು. ನನಗೆ ಬರಲಿಲ್ಲ. ಪ್ರಯತ್ನ ಮುಂದುವರಿಸಿದೆ. ಮತ್ತಷ್ಟು ಪ್ರಯತ್ನದ ಅನಂತರ ಹಪ್ಪಳದಷ್ಟು ದೊಡ್ಡದಾಗಿ ರೂಪುಗೊಂಡಿತು. ಅಂತೂ ಇಂತೂ ಒಂದು ವಾರದ ಅನಂತರ ರೊಟ್ಟಿಯ ರೂಪ ತಯಾರಿಸಿ ಇನ್ನೇನು ಹಂಚಿನ ಮೇಲಿಡುವ ಪ್ರಯತ್ನ ಮಾಡಿದಾಗ ರೊಟ್ಟಿ  ಚೂರಾಗಿ ಮುರಿದು ಬಿತ್ತು. ಅಂದು ನಿಜವಾಗಿ ದುಃಖವಾಯಿತು. ನಿಂಗವ್ವ ಅದೆಷ್ಟು ಸರಳವಾಗಿ ರೊಟ್ಟಿ ಮಾಡುತ್ತಾರೆ. ಸ್ವಲ್ಪ ಬಿಸಿ ನೀರಿನಲ್ಲಿ ಹದವಾಗಿ ಹಿಟ್ಟು ಮೆದ್ದುಕೊಂಡು, ರೊಟ್ಟಿ ಮಣೆಯ ಅವಶ್ಯಕತೆಯೂ ಇರಲಿಲ್ಲ. ಅಡುಗೆ ಮನೆಯ ಕಟ್ಟೆಯ ಮೇಲೆ ನಿರಾಳವಾಗಿ ರೊಟ್ಟಿ ತಯಾರಿಸುತ್ತಿದ್ದರು. ಕೊನೆಗೂ ನಾನು ಎನ್ನುವುದಕ್ಕಿಂತ ನಿಂಗಮ್ಮನವರ ಸಹಕಾರ, ತಾಳ್ಮೆಯಿಂದ ರೊಟ್ಟಿ ಮಾಡುವುದು ಕಲಿತೆ.

ಕೇಳುವವರಿಗೆ ಅನಿಸಬಹುದು ರೊಟ್ಟಿಯಲ್ಲಿ ಏನಿದೆ? ಇದೂ ಒಂದು ಕಲಿಯುವ ಕೆಲಸವಾ? ಒಮ್ಮೊಮ್ಮೆ ಜೀವನದಲ್ಲಿ ಚಿಕ್ಕ ವಿಷಯಗಳೇ ಕಷ್ಟವೆನಿಸಿ ಬಿಡುತ್ತದೆ. ಕ್ಲಿಷ್ಟದ ವಿಷಯವನ್ನು ಸರಳವಾಗಿ ಕಲಿತುಬಿಡಬಹುದು. ಮನುಷ್ಯನ ಸೈಕಲಾಜಿಯಲ್ಲಿ ಹೀಗೂ ಇರುತ್ತದೆ.

ತಾಳ್ಮೆ, ಇನ್ನೊಬ್ಬರಿಂದ ಏನನ್ನೂ ಬಯಸದೆ ತಮ್ಮ ವೇಳೆ ನೀಡಿ, ಸಾಧನೆ ಪ್ರಶಸ್ತಿಗಳೇ ಶ್ರೇಷ್ಟವೆನ್ನುವ ಈ ಜಗದಲ್ಲಿ ನಿಂಗವ್ವನಂಥವರು ತಮ್ಮ ಸರಳ ಜೀವನದ ಮೆರಗು ರೂಪಿಸಿಕೊಂಡಿ¨ªಾರೆ. ಇಂತಹ ಹಲವು ಉದಾಹರಣೆಗಳು ನಮ್ಮ ದೇಶದಲ್ಲಿ ಕಾಣಸಿಗುತ್ತವೆ. ನಿಂಗವ್ವ ತಮ್ಮ ಮನೆಯ ಆಧಾರಸ್ತಂಭವಾಗಿದ್ದರು. ಜೀವನದಲ್ಲಿ ಕೆಲವು ಚಿಕ್ಕಚಿಕ್ಕ ವಿಷಯಗಳೂ ಸಂತಸ ನೀಡುತ್ತವೆ. ಕೆಲವರಿಗೆ ಅದು ಜೀವನಾಧಾರವೂ ಹೌದು.

ಈಗ ನಾನು ವಾಸಿಸುವ ಊರಿನಲ್ಲಿ ರೊಟ್ಟಿ ಬಡಿಯಲು ಯಾರಿದ್ದಾರೆ? ನಾನೇ ವಾರದಲ್ಲಿ ಒಂದು ದಿನ ರೊಟ್ಟಿ ತಯಾರಿಸಿ ಸವಿಯಬೇಕು. ನಾನು ತಯಾರಿಸದೇ ಇದ್ದರೆ ಮಕ್ಕಳಿಗೆ ರೊಟ್ಟಿಯ ಸ್ವಾದದ ಅರಿವೂ ಇರಲಾರದು. ಹೀಗಾಗಿ ಜೀವನದಲ್ಲಿ ಇಂತಹ ಚಿಕ್ಕಪುಟ್ಟ ಕೆಲಸ ಕಲಿಸಿದ ಶ್ರೇಯಸ್ಸು ಕಲಿಸಿದವರಿಗೆ ಸಲ್ಲಬೇಕು.

ಇನ್ನು ಕೆಲವು ವಿದ್ಯಾವಂತರು ಜೀವನದಲ್ಲಿ ನನ್ನ ಯಶಸ್ಸಿಗೆ ನಾನೇ ಕಾರಣ, ನಾನೇ ಎಲ್ಲವನ್ನೂ ಸಾಧಿಸಿರುವೆ ಅಂದುಕೊಂಡರೆ ಅದು ಅಸತ್ಯ. ಕೈ ಸುಟ್ಟಾಗಲೇ ರೊಟ್ಟಿ ರುಚಿಯಾಗುವುದು ಎನ್ನುವ ಮಾತೂ ಇದೆ. ನಮ್ಮ ಪ್ರತಿದಿನದ ಏಳಿಗೆ, ಸಾರ್ಥಕತೆಗೆ ಹಲವು ಜನರ ಸಹಾಯ, ಆಶೀರ್ವಾದ, ಶ್ರಮದ ಫ‌ಲ ಸೇರ್ಪಡೆಯಾಗಿರುತ್ತದೆ.

ನಮ್ಮ ಏಳಿಗೆಗೆ ಪರೋಕ್ಷವಾಗಿ, ಅಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರ ಬಗ್ಗೆಯೂ ಒಂದಷ್ಟು ಕೃತಜ್ಞತೆ ಭಾವವಿದ್ದರೆ ಜೀವನದಲ್ಲಿ ಸಾರ್ಥಕತೆ ದೊರಕುವುದು.

 

ವಾಣಿ ಸಂದೀಪ

ಸೌದಿ ಅರೇಬಿಯಾ

Advertisement

Udayavani is now on Telegram. Click here to join our channel and stay updated with the latest news.

Next