Advertisement

“ಉಸಿರಾಗಲಿ ಕನ್ನಡ  ಉಸಿರಾಡಲಿ ಕರ್ನಾಟಕ’

11:53 PM Jun 30, 2021 | Team Udayavani |

ಟೊರೊಂಟೊ

Advertisement

ಸ್ವಭಾವ ಲಲಿತ ಕಲಾ ವೇದಿಕೆಯು ಕೆನಡಾ ಕನ್ನಡಿಗರ  ಸಹಯೋಗದಲ್ಲಿ ಕೆನಡದಾದ್ಯಂತ ನೆಲೆಸಿರುವ ಕಲಾವಿದರಿಂದ  “ಉಸಿರಾಡಲಿ ಕರ್ನಾಟಕ’ ಎಂಬ ಕನ್ನಡ ಸಂಗೀತ ಸಂಜೆ ಕಾರ್ಯಕ್ರಮವನ್ನು  ಜೂ. 12ರಂದು ವರ್ಚುವಲ್‌ನಲ್ಲಿ ಆಯೋಜಿಸಿತ್ತು.

ಅಕ್ಷತಾ ಶರಣ್‌ ಪ್ರಾರಂಭಿಸಿದ ಸಂಗೀತ ಸಂಜೆಯಲ್ಲಿ ಕೆನಡಾದ ಹಲವು ಗಾಯಕರು ಪಾಲ್ಗೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಂಟ್ರಿಯಲ್‌ ನಗರದ ಕನ್ನಡ ಕೂಟದ ಅಧ್ಯಕ್ಷರಾದ ಡಾ| ಹೊಸಳ್ಳಿ ರಾಮಸ್ವಾಮಿ ಅವರು ಕೊರೊನಾದಿಂದ ರಕ್ಷಿಸಿಕೊಳ್ಳಬೇಕಾದರೆ ನಾವು ಅನುಸರಿಸ ಬೇಕಾದ ಆಹಾರ ಮತ್ತು ಜೀವನ ಕ್ರಮದ ಕುರಿತು ವಿವರಿಸಿದರು.

ನಂದ ಕುಮಾರ್‌ ಚೌಡಪ್ಪ ಅವರು ಮಾತನಾಡಿ, ಕರ್ನಾಟಕದಲ್ಲಿ ಕೋವಿಡ್‌ ಎರಡನೇ ಅಲೆ ಆತಂಕ ಸೃಷ್ಟಿಸಿತ್ತು. ಹೀಗಾಗಿ ಇಲ್ಲಿಂದ ಸಹಾಯ ಮಾಡುವ ಸಲುವಾಗಿ “ಉಸಿರಾಡಲಿ ಕರ್ನಾಟಕ’ ಎಂಬ ಹೆಸರಿನಲ್ಲಿ ಚಟುವಟಿಕೆಗಳು ಆರಂಭವಾಗಿ ಸುಮಾರು ಒಂದು ತಿಂಗಳಾಗಿದೆ. ಕೆನಡಾದ ಎಲ್ಲ ಕನ್ನಡಿಗರು ಸೇರಿ ಮಾಡಿರುವ ಪ್ರಯತ್ನದ ಫ‌ಲವಾಗಿ ಸುಮಾರು  41 ಸಾವಿರ ಡಾಲರ್‌ ಸಂಗ್ರಹವಾಗಿದ್ದು, ಮೊದಲನೇ ಹಂತದಲ್ಲಿ 25 ಆಕ್ಸಿಜನ್‌ ಕಾನ್ಸಂಟ್ರೇಟರ್‌ಗಳನ್ನು ಕರ್ನಾಟಕದ ಎಡಿಜಿಪಿ ಸೀಮಂತ್‌ ಕುಮಾರ್‌ ಸಿಂಗ್‌ ಅವರ ನೇತೃತ್ವದಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಅವಶ್ಯಕತೆ ಇರುವಲ್ಲಿಗೆ ತಲು

Advertisement

ಪಿಸಲಾಯಿತು. ಉಳಿದ ಮೊತ್ತ 16 ಸಾವಿರ ಡಾಲರ್‌ಗಳಾಗಿದ್ದು 50 ಸಾವಿರ ಡಾಲರ್‌ ಸಂಗ್ರಹದ ಗುರಿ ಯನ್ನು ಹೊಂದಲಾಗಿದೆ. ಇದುವರೆಗೆ ಸಾಮಾಜಿಕ ಜಾಲ ತಾಣದ ಮೂಲಕ ದೇಣಿಗೆ ಸಂಗ್ರಹ ಕಾರ್ಯ ಮಾಡಲಾಗಿದ್ದು, ಚಾರಿಟೇಬಲ್‌ ಟ್ರÓr… ಸೇವಾ ಕೆನಡಾದ ಮೂಲಕ ಕರ್ನಾಟಕಕ್ಕೆ ಇದನ್ನು ತಲುಪಿಸಲಾಗುತ್ತಿದೆ. ಇದಕ್ಕಾಗಿ ಕೆನಡಾ ಕನ್ನಡಿಗರು ಎಂಬ ಸಮಿತಿಯೊಂದಿಗೆ ಹೆಲ್ಪ…ಲೈನ್‌ ಸದಸ್ಯರೂ ಕೈ ಜೋಡಿಸಿದ್ದರಿಂದ ಬಹಳಷ್ಟು ಸಹಾಯವಾಯಿತು ಎಂದರು.

ಡಾ| ಅರುಣ್‌ ಪ್ರಕಾಶ್‌ ಅವರು ಮಾನಸಿಕ ಒತ್ತಡ ನಿಯಂತ್ರಿಸುವ ಕುರಿತು ಅತ್ಯಮೂಲ್ಯ ಮಾಹಿತಿಗಳನ್ನು ನೀಡಿದರು.

ವೆಂಕಟೇಶ್‌ ಮೈಸೂರು ಅವರು ರೋಟರಿ ಕ್ಲಬ್‌ ಸಹಯೋಗದೊಂದಿಗೆ ಆರೋಗ್ಯ ಅರಿವು, ತುಮಕೂರಿನಲ್ಲಿರುವ ಗುರುಕುಲಾ ಕಲಾ ಪ್ರತಿಷ್ಠಾನ, ಹೆಲ್ತ… ಹೀಲ್‌ ಸಂಸ್ಥೆಯ ಮೂಲಕ ಕೈ ಜೋಡಿಸಿ ನಡೆಸುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ಮುಖ್ಯ ಅತಿಥಿ ಕೆನಡಾದ ಸಂಸದ ಚಂದ್ರ ಆರ್ಯ ಮಾತನಾಡಿ, ಕೆನಡಾದಲ್ಲಿ ಕನ್ನಡಿಗರ ಸೇವಾ ಕಾರ್ಯಗಳಿಗೆ ಮೆಚ್ಚುಗೆ ಸೂಚಿಸಿದರು. ಬಳಿಕ ಉಸಿರಾಗಲಿ ಕನ್ನಡ ಹಾಡಿನ ಸಾಲುಗಳನ್ನು ಓದಿದರು.

ಮತ್ತೂಬ್ಬ ಅತಿಥಿ ಕರ್ನಾಟಕದ ಎಡಿಜಿಪಿ ಸೀಮಂತ್‌ ಕುಮಾರ್‌ ಸಿಂಗ್‌ ಅವರು ಮಾತನಾಡಿ, ಕೆನಡಾದಲ್ಲಿ ಕುಳಿತು ಇಲ್ಲಿನವರಿಗೆ ಸಹಾಯ ಮಾಡುವ ಯೋಚನೆ ಇಲ್ಲಿನ ಜನರಲ್ಲೂ ಸ್ಫೂರ್ತಿ ತುಂಬಿದೆ. ಅತ್ಯಂತ ಶಿಸ್ತುಬದ್ಧವಾಗಿ ಯೋಜನೆ ರೂಪಿಸಿದ್ದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ನಮಗೂ ಸ್ಫೂರ್ತಿಯಾಗುತ್ತದೆ, ಹೊಸ ಯೋಚನೆ, ಚಿಂತನೆಗೆ ಪ್ರೇರಣೆಯಾಗುತ್ತದೆ ಎಂದು ತಿಳಿಸಿದರು.

ಸೇವಾ ಕೆನಡಾದ ವಿನೋದ್‌ ವರಪ್ರವನ್‌ ಅವರು ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದೆ  ಸೀಮಂತ್‌ ಕುಮಾರ್‌ ಸಿಂಗ್‌ ಅವರು “ಉಸಿರಾಗಲಿ ಕನ್ನಡ’ ಎಂಬ ರಾಜ್ಯ ಭಕ್ತಿಸಾರವುಳ್ಳ ಹಾಡನ್ನು ಲೋಕಾರ್ಪಣೆಗೈದರು.  ಕಿರಣ್‌ ಭಾರ್ತೂರ್‌, ವಿನಾಯಕ್‌ ಹೆಗ್ಡೆ ಮುಖ್ಯ ಅತಿಥಿಗಳನ್ನು ಸ್ವಾಗತಿಸಿ, ಪರಿಚಯಿಸಿದರು.  ಪ್ರಶಾಂತ್‌ ಸುಬ್ಬಣ್ಣ, ಪ್ರಜ್ಞಾ ಜೈನ್‌ ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ಕುಮಾರ್‌ ಅವರು ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next