Advertisement
ಸಂಗೀತ ಒಂದು ಧ್ಯಾನ. ಸ್ವರಗಳ ಸಂಭಾಷಣೆಯನ್ನು ಅರಿತು, ಅದನ್ನು ತನ್ನ ಧ್ವನಿಯಲ್ಲಿ ಅಥವಾ ಒಂದು ವಾದ್ಯದಿಂದ ಹೊರತರುವ ಪ್ರಕ್ರಿಯೆ ಒಂದು ಸುಂದರ ಅನುಭವ. ಇದನ್ನು ಅನುಭವಿಸಲಿಕ್ಕೆ ಸ್ವರಗಳನ್ನು ವರ್ಷಗಟ್ಟಲೆ ಅರಿತು, ಕಲಿತು ಹೊರತರುವುದು ಮುಖ್ಯವಾದರೆ, ಸುಮ್ಮನೆ ಹಾಡುಗಳನ್ನು ಸಮಚಿತ್ತವಾಗಿ ಕೇಳಿಸಿಕೊಂಡರೂ ಸಾಕು ಅದು ಅನುಭವಕ್ಕೆ ಸಿಗುತ್ತದೆ. ಹೀಗೆ ಕೇಳುವಾಗ ಅದು ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರಿ, ಮನಸ್ಸು ನೆಮ್ಮದಿಯಿಂದಿರುತ್ತದೆ ಹಾಗೂ ಪ್ರತಿಕ್ಷಣವನ್ನೂ ಅನುಭವಿಸಲು ಸಿದ್ಧವಾಗುತ್ತದೆ.
Related Articles
Advertisement
ರಾಗಿಯೇ ಉಳಿದುಬಿಡುತ್ತಾರೆ. ಇಲ್ಲಿ ಇವರಿಗೆ ವಯಸ್ಸಾದಾಗ ಆರಾಮವಾಗಿ ಇರಲೆಂದೇ ಸರಕಾರ ಬಹಳಷ್ಟು “ಏಜ್x ಕೇರ್’ಗಳನ್ನು ನಿರ್ಮಿಸಿದೆ. ಇದು ಯಶಸ್ವಿಯಾಗಿದೆ ಕೂಡ. ನಾನು ಮೊದಲನೇ ದಿನ ನಮ್ಮ ಮ್ಯೂಸಿಕ್ ಥೆರಪಿಸ್ಟಿನ ಜತೆ ಒಂದು ಏಜ್x ಕೇರ್‌ಗೆ ಹೋಗಿದ್ದು ಅದೊಂದು ಮರೆಯಲಾರದ ಅನುಭವ.
ಅಲ್ಲಿ ನೂರಾರು ಕೊಠಡಿಗಳು. ಪ್ರತೀ ಹತ್ತು ಕೊಠಡಿಗಳನ್ನು ಒಂದೊಂದು ಸಾಲಲ್ಲಿ ಕಾಣಬಹುದು. ಈ ಕೊಠಡಿಗಳಿಗೆ ಹತ್ತಿರದ ಊರಿನ ಹೆಸರುಗಳನ್ನು ಇಡಲಾಗಿದೆ. ಅಲ್ಲಲ್ಲಿ ಪುಟ್ಟ ಪುಟ್ಟ ಸಭಾಂಗಣಗಳು. ಎಲ್ಲ ಮೂಲೆಯಲ್ಲಿಯೂ ಒಬ್ಬೊಬ್ಬ ವಯಸ್ಸಾದವರು ಕುಳಿತಿದ್ದಾರೆ. ಅವರದ್ದೇ ಲೋಕದಲ್ಲಿದ್ದಾರೆ. ಕೆಲವರಿಗೆ ಕಣ್ಣು ಕಾಣದು, ಹಲವರಿಗೆ ಕಿವಿ ಕೇಳದು, ಇನ್ನು ಕೆಲವರು ನಡೆಯಲು ಕಷ್ಟ ಪಡುತಿಹರು, ಕೆಲವರಿಗೆ ಎಲ್ಲದರಲ್ಲೂ ಅನಾಸಕ್ತಿ. ಹೀಗೆ ವಿಶ್ವರೂಪದರ್ಶನವಾಗಿತ್ತು.
ಇನ್ನು ಎಲ್ಲ ಕೊಠಡಿಯ ಬಾಗಿಲ ಮೇಲೆ ಅಲ್ಲಿಯ ನಿವಾಸಿಯ ಭಾವಚಿತ್ರ ಅಂಟಿಸಿದ್ದರು. ಜತೆಗೊಂದು ಪುಟ್ಟ ಪರಿಚಯ ಪತ್ರ. ಅದು ಅವರವರ ಧ್ವನಿಯಲ್ಲಿತ್ತು. ಒಟ್ಟಾರೆಯಾಗಿ ಅವರ ಪರಿಚಯ, ಅವರ ಇಷ್ಟ-ಕಷ್ಟ, ಹವ್ಯಾಸಗಳು, ಇಷ್ಟದ ಹಾಡುಗಳು ಎಲ್ಲವು ಇದ್ದವು. ಹಾಗಾಗಿ ಯಾರೇ ಹೊಸಬರು ಬಂದರೂ ಅವರಲ್ಲಿ ಹೊಸದಾಗಿ ಪರಿಚಯ ಕೇಳುವ ಪ್ರಮೇಯ ಬರುವುದಿಲ್ಲ. ಇನ್ನು ಕೊಠಡಿಯ ಒಳ ಹೋದರೆ, ಪ್ರತಿಯೊಬ್ಬರ ಜೀವನದ ಚಿತ್ರ ಅಲ್ಲಿ ದಾಖಲಾಗಿರುತ್ತದೆ. ಅಂದರೆ, ಅವರ ಕುಟುಂಬದವರ ಚಿತ್ರ, ಮೊಮ್ಮಕ್ಕಳು ಅಜ್ಜ ಅಜ್ಜಿಗೆ ಪ್ರೀತಿಯಿಂದ ಬರೆದು ಕಳಿಸಿದ ಚಿತ್ರಗಳು, ಗೊಂಬೆಗಳು, ಹೀಗೆ ಕೊಠಡಿ ತುಂಬೆಲ್ಲ ಇಲ್ಲಿ ಯಾರು ವಾಸಿಸುತ್ತಿದ್ದಾರೆ ಅವರ ಜೀವನವನ್ನು ಜಗತ್ತಿಗೆ ಹೇಳ್ಳೋ ಚಿತ್ರಗಳು. ಇನ್ನು ಇಲ್ಲಿಯ ನಿವಾಸಿ ಕೊಠಡಿಯ ಮೂಲೆಯಲ್ಲೆಲ್ಲೋ ಮಲಗಿರುತ್ತಾರೆ, ಕುಳಿತು ಕನಸು ಕಾಣುತ್ತಿರುತ್ತಾರೆ ಅಥವಾ ಯಾರಧ್ದೋ ನಿರೀಕ್ಷೆಯಲ್ಲಿ ಚಡಪಡಿಸುತ್ತಿರುತ್ತಾರೆ.
ಅಂದು “ಜೋಯನ’ (ಹೆಸರು ಬದಲಿಸಿದೆ) ಎಂಬವರನ್ನು ನೋಡಲು ಹೋಗಿದ್ದೆವು. ಅವರಿಗೆ 87 ವರ್ಷ. ನಮ್ಮನ್ನು ನೋಡಿದ ತತ್‌ಕ್ಷಣ ಬಂದು “ನನಗೊಂದು ಸಹಾಯ ಮಾಡುತ್ತೀರ? ನಿಮ್ಮ ಬಳಿ ಇರುವ ಫೋನ್ ಕೊಡಿ, ನನ್ನ ಮೊಮ್ಮಗಳೊಡನೆ ಮಾತನಾಡಬೇಕು. ದಿನಾ ಇಷ್ಟೇ ಹೊತ್ತಿಗೆ ಫೋನ್ ಮಾಡುತ್ತಿದ್ದಳು. ಇಂದು ಮಾಡಿಲ್ಲ ಎಂದು ಚಡಪಡಿಸುತ್ತಿದ್ದರು. ನಾವು ಥೆರಪಿಗೆ ಹೋಗಿದ್ದ ಕಾರಣ, ಜೋಯಾನ ಅವರನ್ನು ಸಮಾಧಾನ ಪಡಿಸಿ, ಅವರಿಗಿಷ್ಟವಾದ ಹಾಡುಗಳನ್ನು ನುಡಿಸಿ ಹಾಡಲಾರಂಭಿಸಿದೆವು. ಯಾವುದೋ ಲೋಕದಲ್ಲಿರುವ ಹಾಗೆ ಅವರು ಐದು ನಿಮಿಷದಲ್ಲಿ ಚಡಪಡಿಕೆ ಎಲ್ಲವನ್ನು ಮರೆತು ಮಗುವಿನಂತೆ ಮುಗ್ಧತೆಯನ್ನು ತೋರುತ್ತ ನಮ್ಮೆದುರಿಗೆ ಕುಳಿತರು. ಹಾಡಿದ ಹಾಡು ಅವರನ್ನು ಅವರ ಹಳೆಯ ಜೀವನಕ್ಕೆ ಕರೆದುಕೊಂಡು ಹೋಗಿತ್ತು. ಕೆಲವು ಹಾಡುಗಳನ್ನು ಕೇಳಿ ನಕ್ಕರು. ಇನ್ನು ಕೆಲವಕ್ಕೆ ಜೋರಾಗಿ ಅತ್ತರು. ಇಷ್ಟಾಗುವಷ್ಟರಲ್ಲಿ ಅವರು ಮೆಲ್ಲನೆ ನಿದ್ದೆಗೆ ಜಾರಿದ್ದರು. ಮಗುವಿನಂತೆ ನಿದ್ದೆಯಲ್ಲಿ ನಗುತ್ತಿದ್ದರು. ನಿದ್ದೆಯಲ್ಲಿ ತನ್ನ ಕನಸನ್ನು ಬಾಯಿಬಿಟ್ಟು ಹೇಳತೊಡಗಿದ್ದರು. ಇನ್ನೇನು ಹೊರಡಬೇಕು ಎಂದುಕೊಂಡಿದ್ದ ನಾವು ಅವರ ಕಥೆ ಕೇಳ್ಳೋಣ ಎಂದು ನಿಂತೆವು. ಅವರು ಹಾಡಿನ ಕೆಲವು ಸಾಲುಗಳನ್ನು ಹೇಳಿದರು, ತನ್ನ ಇನಿಯನ ನೆನಪು ಕೂಡ ಮಾಡಿಕೊಂಡರು. ಸಂಗೀತದ ಮಾಯೆ ಎಂದರೆ ಏನು? ಬದುಕಬೇಕೆಂಬ ಆತುರದಲ್ಲಿ ಎಲ್ಲೋ ಕಳೆದು ಹೋಗಿದ್ದ, ನಮ್ಮಲ್ಲೇ ಅಡಗಿಕೊಂಡ ಬಾಲ್ಯವನ್ನು, ಬಾಲಿಶತನವನ್ನು ಎಚ್ಚರಿಸುವುದೇ…?
ಸ್ಫೂರ್ತಿ, ತಸ್ಮೇನಿಯಾ