Advertisement

6 ತಿಂಗಳ ಅಂದಾಜು ಬಾಳ್ವೆಯ ಮಂಗಳಾಯನಕ್ಕೆ 3 ವರ್ಷ ಪೂರ್ಣ

04:03 PM Sep 26, 2017 | Team Udayavani |

ಹೊಸದಿಲ್ಲಿ : ಮಂಗಳ ಗ್ರಹ ಅನ್ವೇಷಣೆಗಾಗಿ 2014ರ ಸೆ.24ರಂದು  ಉಡಾವಣೆಗೊಂಡಿದ್ದ ಮತ್ತು ಕೇವಲ ಆರು ತಿಂಗಳ ಜೀವಿತಾವಾಧಿಯನ್ನು ಅಂದಾಜಿಸಲಾಗಿದ್ದ, ಅತ್ಯಂತ ಕಡಿಮೆ ವೆಚ್ಚದ, ಮಂಗಳಾಯನ ಬಾಹ್ಯಾಕಾಶ ನೌಕೆಯು ಇದೀಗ ಪೂರ್ತಿ ಮೂರು ವರ್ಷಗಳನ್ನು ಪೂರೈಸಿದೆ.

Advertisement

ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ) ಹಾರಿಸಿದ್ದ ಮಾರ್ಸ್‌ ಆರ್ಬಿಟರ್‌ ಮಿಶನ್‌ (ಎಂಓಎಂ ಅಥವಾ ಮಾಮ್‌) ಅತ್ಯಂತ ಯಶಸ್ವೀ ಬಾಹ್ಯಾಕಾಶ ಅಭಿಯಾನವೆನಿಸಿದ್ದು ಈ ವರ್ಷ ಜೂನ್‌ ನಲ್ಲಿ ಇದು ಮಂಗಳ ಕಕ್ಷೆ ಪರಿಭ್ರಮಣದಲ್ಲಿ  1,000 ಭೂ-ದಿನಗಳ ಯಾನವನ್ನು ಪೂರೈಸಿತ್ತು. ಇದರ ಮೂಲ ಜೀವಿತಾವಧಿಯನ್ನು ಕೇವಲ 180 ದಿನಗಳೆಂದು ಅಂದಾಜಿಸಲಾಗಿತ್ತು.

ಮಂಗಳಯಾನ ಬಾಹ್ಯಾಕಾಶ ನೌಕೆಯ ಈಗಿನ ಶಕ್ತಿ, ಸಾಮಥ್ಯ ಮತ್ತು ದಕ್ಷತೆಯನ್ನು  ಪರಿಗಣಿಸಿದರೆ ಇನ್ನೂ ಐದು ವರ್ಷಗಳ ಕಾಲ ಇದು ಮಂಗಳ ಗ್ರಹ ಕಕ್ಷೆ ಪರಿಭ್ರಮಣೆಯನ್ನು ಅನೂಚಾನವಾಗಿ ನಡೆಸಲಿದೆ. ಈ ನೌಕೆಯಲ್ಲಿ ಇನ್ನೂ 15 ಕೆಜಿ ಇಂಧನ ಬಳಕೆಗಾಗಿ ಉಳಿದಿದೆ. 

ಅತ್ಯಂತ ಕಡಿಮೆ ವೆಚ್ಚದ ಮಂಗಳ ಕಕ್ಷೆ ಪರಿಭ್ರಮಣ ಅಭಿಯಾನವು ಮಂಗಳನ ಕಕ್ಷೆಯಲ್ಲಿ ಮೂರು ವರ್ಷಗಳ ಸುತ್ತಾಟವನ್ನು ಈಗಾಗಲೇ ಮುಗಿಸಿದ್ದು ಇನ್ನೂ ಐದು ವರ್ಷಗಳ ಕಾಲ ಅದು ತನ್ನ ಕೆಲಸವನ್ನು ಮುಂದುವರಿಸಲಿದೆ; ಈ ಉಪಗ್ರಹದ ಶಕ್ತಿ, ಸಾಮಥ್ಯ ಮತ್ತು ಸ್ವಾಸ್ಥ್ಯ ಎಲ್ಲವೂ ಚೆನ್ನಾಗಿದೆ ಎಂದು ಇಸ್ರೋ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next