Advertisement

Desi; ಕೇವಲ 100 ದಿನಗಳಲ್ಲೇ ಉಗ್ರಂ ರೈಫ‌ಲ್‌ ಸಿದ್ಧ!

04:57 PM Jan 10, 2024 | Team Udayavani |

ಹೊಸದಿಲ್ಲಿ: ಕೇವಲ 100 ದಿನಗಳ ಅವಧಿಯಲ್ಲಿ ದೇಶಿಯವಾಗಿ ಅಭಿವೃದ್ಧಿಪಡಿ ಸಿರುವ “ಉಗ್ರಂ’ ಹೆಸರಿನ ವಿಶಿಷ್ಟ ರೈಫ‌ಲ್‌ ಅನ್ನು ಭಾರತೀಯ ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಅನಾವರಣಗೊಳಿಸಿದೆ.

Advertisement

ಡಿಆರ್‌ಡಿಒ ವಿಭಾಗವಾದ ಆರ್ಮ ಮೆಂಟ್‌ ರಿಸರ್ಚ್‌ ಆ್ಯಂಡ್‌ ಡೆವಲಪ್‌ಮೆಂ ಟ್‌ ಹಾಗೂ ಹೈದರಾಬಾದ್‌ನ ಖಾಸಗಿ ಸಂಸ್ಥೆ ದ್ವಿಪಾ ಆರ್ಮರ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಸಹಭಾಗಿತ್ವದಲ್ಲಿ ಈ ಉಗ್ರಂ ರೈಫ‌ಲ್‌ ಅನ್ನು ಅಭಿವೃದ್ಧಿ ಪಡಿಸಲಾಗಿದೆ.  ಭಾರತೀಯ ಸೇನೆ ಮತ್ತು ಅರೆಕಾಲಿಕ ಸೇನಾ ಪಡೆಗಳು ಹೆಚ್ಚಾಗಿ ಬಳಸುವಂಥ ಐಎನ್‌ಎಸ್‌ಎಸ್‌ ರೈಫ‌ಲ್‌ಗ‌ಳಿಗಿಂತಲೂ ಹೆಚ್ಚು ತೀಕ್ಷ್ಣವಾಗಿ ಉಗ್ರಂ ಕಾರ್ಯ ನಿರ್ವಹಿಸಲಿದೆ. ಹಿಂದಿ ನ ರೈಫ‌ಲ್‌ಗ‌ಳಲ್ಲಿನ  5.62 ಎಂಎಂ ರೌಂಡ್‌ ಬದಲಾಗಿ ಉಗ್ರಂನಲ್ಲಿ 7.62 ಕ್ಯಾಲಿಬರ್‌ ವಿನ್ಯಾಸಗೊಳಿಸಲಾಗಿದೆ.

ಸೇನೆಯ ಜನರಲ್‌ ಸ್ಟಾಫ್ ಕ್ವಾಲಿಟೇ ಟಿವ್‌ ರಿಕ್ವೆ„ರ್‌ವೆುಂಟ್ಸ್‌ (ಜಿಎಸ್‌ಕ್ಯೂ ಆರ್‌) ಅನ್ವಯ ಭದ್ರತಾ ಪಡೆಗಳ ಕಾರ್ಯಾಚರಣೆಗಳನ್ನು ಗಮನದಲ್ಲಿಟ್ಟು ಕೊಂಡು, ಅವರ ಅಗತ್ಯಗಳನ್ನು ಪರಿಗಣಿ ಸಿ ಉಗ್ರಂ ಅನ್ನು ಅಭಿವೃದ್ಧಿ ಪಡಿಸಲಾಗಿದೆ. 4 ಕೆ.ಜಿ. ತೂಕವಿರುವ ರೈಫ‌ಲ್‌ 500 ಮೀ.ವರೆಗಿನ ದೂರದ ಗುರಿ (ಅಂದರೆ 5 ಫ‌ುಟ್ಬಾಲ್‌ ಮೈದಾನ)ಹೊಡೆದುರುಳಿಸಲು ಸಮರ್ಥವಾಗಿದೆ ಎಂದು ರಕ್ಷಣ ಮೂಲಗಳು ಮಾಹಿತಿ ನೀಡಿವೆ.

Advertisement

Udayavani is now on Telegram. Click here to join our channel and stay updated with the latest news.

Next