Advertisement

Desi Swara@100: ಯುಎಇ-ನಾಡು ನುಡಿಯ ಏಳಿಗೆಗೆ ಒಂದಾಗೋಣ

03:53 PM Nov 27, 2023 | Team Udayavani |

ರಾಕ್‌ ಕರ್ನಾಟಕ ಸಂಘ ರಾಸ್‌ ಅಲ್‌ ಖೈಮಾ, ಯುಎಇ ಇದರ ವತಿಯಿಂದ ಹಾಗೂ ಯುಎಇ ಅನಿವಾಸಿ ಕನ್ನಡಿಗರ ಒಟ್ಟುಗೂಡುವಿಕೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಸಮಾರಂಭವು ಇಂಡಿಯನ್‌ ಅಸೋಸಿಯೇಶನ್‌ ಹಾಲ್‌ನಲ್ಲಿ ನಡೆಯಿತು.

Advertisement

ಕಾರ್ಯಕ್ರಮದಲ್ಲಿ ಕರ್ನಾಟಕ ಎನ್‌ಆರ್‌ಐ ಫೋರಂ ಅಧ್ಯಕ್ಷರು, ಫಾರ್ಚೂನ್‌ ಗ್ರೂಪ್‌ ಆಫ್‌ ಹೊಟೇಲ್‌ ಇದರ ಆಡಳಿತ ನಿರ್ದೇಶಕರಾದ ಪ್ರವೀಣ್‌ ಕುಮಾರ್‌ ಶೆಟ್ಟಿ ವಕ್ವಾಡಿ, ಕರ್ನಾಟಕ ಸಂಘ ದುಬೈ ಇದರ ಅಧ್ಯಕ್ಷರಾದ ಶಶಿಧರ್‌ ನಾಗರಾಜಪ್ಪ ಮತ್ತು ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ಸತೀಶ್‌ ಪೂಜಾರಿ ಮೊದಲಾದ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಕಡ್ತಲ ಸಂತೋಷ್‌ ಹೆಗ್ಡೆ ಇವರು ಮಾತನಾಡುತ್ತ, ನಮ್ಮವರು ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ನಮ್ಮ ನಾಡು, ಭಾಷೆಯ ಬಗ್ಗೆ ಅಭಿಮಾನ ಬೆಳೆಸಿ ಒಗ್ಗಟ್ಟಾಗುವ ಮೂಲಕ ನಾಡು ನುಡಿಯ ಏಳಿಗೆಗೆ ಎಲ್ಲರೂ ಒಂದಾಗಬೇಕೆಂದು ಕರೆ ನೀಡಿದರು.

ಗಮನ ಸೆಳೆದ ಯಕ್ಷಗಾನ:
ರಾಸ್‌ ಅಲ್‌ ಖೈಮಾದಲ್ಲಿ ಇದೇ ಮೊದಲ ಬಾರಿಗೆ ಯಕ್ಷಗಾನವನ್ನು ಆಯೋಜಿಸಿದ್ದು, ಯಕ್ಷಗಾನ ಅಭ್ಯಾಸ ತರಗತಿ ಕೇಂದ್ರ ದುಬೈ ಇದರ ಪ್ರಬುದ್ಧ ಕಲಾವಿದರು, ಕೇಂದ್ರದ ಸಂಚಾಲಕರಾದ ದಿನೇಶ್‌ ಶೆಟ್ಟಿ ಕೊಟ್ಟಿಂಜ ಹಾಗೂ ಶೇಖರ್‌ ಡಿ. ಶೆಟ್ಟಿಗಾರ್‌ ಇವರ ದಕ್ಷ ನಿರ್ದೇಶನದಲ್ಲಿ ಇಂದ್ರಜಿತು ಕಾಳಗ ಎಂಬ ಪೌರಾಣಿಕ ಪ್ರಸಂಗವನ್ನು ಪ್ರದರ್ಶಿಸಲಾಯಿತು. ಸಾಂಸðತಿಕ ಕಾರ್ಯಕ್ರಮದಂಗವಾಗಿ ಸಂಗೀತ, ನೃತ್ಯ ವಿವಿಧ ವಿನೋದಾವಳಿಗಳು ಜರಗಿತು.

ಈ ಸಂದರ್ಭ ಉಪಾಧ್ಯಕ್ಷರಾದ ರಮೇಶ್‌ ರಂಗಪ್ಪ, ಡಾ| ಲೇಖಾ, ಕಾರ್ಯದರ್ಶಿ ಜಾನ್‌ ಇಮಾನ್ಯುಯೆಲ್‌, ಖಜಾಂಚಿ ದೀಪಾ ಶೆಟ್ಟಿ ಮತ್ತು ಸಂಘದ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next