Advertisement

Desi Swara: ನ್ಯೂಜೆರ್ಸಿಯಲ್ಲಿ ಮೋದಕ ಪ್ರಿಯನ ಆರಾಧನೆ

05:36 PM Oct 07, 2023 | Team Udayavani |

ನ್ಯೂಜೆರ್ಸಿ: ಅಮೆರಿಕ ನ್ಯೂಜೆರ್ಸಿಯಲ್ಲಿ ಇತ್ತೀಚೆಗೆ ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಶಾಪಿಂಗ್‌ ಮಾಲ್‌ ಒಂದರ ಹತ್ತಿರದ ಖಾಲಿ ಸ್ಥಳದಲ್ಲಿ ವಿಶಾಲವಾದ ಪೆಂಡಾಲ್‌ ನಿರ್ಮಿಸಿ ಅದರಲ್ಲಿ ಏರ್ಪಡಿಸಲಾಗಿತ್ತು. ಸಪ್ತಾಶ್ವಗಳ ಮೇಲೆ ವಿರಾಜಮಾನನಾದ ಬೃಹತ್‌ ಗಾತ್ರದ ಗಣಪತಿಯ ಮೂರ್ತಿ, ಪಕ್ಕದಲ್ಲಿ 1500ಪೌಂಡ್‌ (680ಕಿ.ಲೋ.) ತೂಕದ ಮೋದಕ ಆಕರ್ಷಕವಾಗಿತ್ತು. ಪಕ್ಕದಲ್ಲಿ ಬೃಹದಾಕಾರದ ಕಾಣಿಕೆ ಹುಂಡಿಯನ್ನು ಮೂಷಿಕದ ರೂಪದಲ್ಲಿ ಇರಿಸಲಾಗಿತ್ತು.

Advertisement

ಇಲ್ಲಿರುವ ಗಣಪತಿಗೆ ಎಲ್ಲ ಏಳು ದಿನಗಳ ಕಾಲ ತ್ರಿಕಾಲ ಪೂಜೆ ನಡೆಯುತ್ತಿತ್ತು. ಪ್ರತೀ ದಿನವೂ ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಗಣಪತಿಯನ್ನು ಇರಿಸಿದ್ದ ಮಂಟಪದ ಹೊರಭಾಗದಲ್ಲಿ ಮಳಿಗೆಗಳು, ವೇದಿಕೆಯಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಾಕರ್ಷಣೆಯ ಕೇಂದ್ರವಾಗಿತ್ತು. ಕಾರ್ಯಕ್ರಮದ ಪ್ರಾಯೋಜಕರೂ ಸೇರಿದಂತೆ ಉದ್ಯಮಿಗಳು ವಿವಿಧ ಬಗೆಯ ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ಈ ಸ್ಪರ್ಧೆ ಶುಲ್ಕ ರಹಿತವಾಗಿದ್ದು, ಹೆಚ್ಚಿನವರು ಭಾಗವಹಿಸಿ ಬಹುಮಾನ ಪಡೆದುಕೊಳ್ಳುತ್ತಿದ್ದರು.

ವಿಶೇಷವೆಂದರೆ ಕೆಲವು ಮಳಿಗೆಗಳನ್ನು ಇನ್‌ಸ್ಟಾ ಗ್ರಾಂನ್ನಲ್ಲಿ ಹಿಂಬಾಲಿಸಿದರೆ ಅದಕ್ಕೂ ಬಹುಮಾನ ನೀಡುವ ಕೊಡುಗೆಗಳಿದ್ದವು. ಅಲ್ಲಿದ್ದ ಇನ್ನೊಂದು ಆಕರ್ಷಣೆ ಮೋದಿ ಟಾಯ್ಸ್‌ . ಈ ಮಳಿಗೆಯಲ್ಲಿ ವಿಶಿಷ್ಟ ರೀತಿಯ ಮ್ಕಳ ಆಟದ ಸಾಮಗ್ರಿಗಳಿದ್ದವು. ಗಣಪತಿ, ಹನುಮಂತ, ಸರಸ್ವತಿ, ಲಕ್ಷ್ಮೀ ಮುಂತಾದ ಗೊಂಬೆಗಳನ್ನು ಒತ್ತಿದಾಗ ಆಯಾ ದೇವರನ್ನು ಸ್ತುತಿಸುವ ಹಾಡು ಮೂಡಿಬರುತ್ತಿದ್ದು ಮಕ್ಕಳಿಗೆ ಇದೊಂದು ರೀತಿಯಲ್ಲಿ ವಿಶಿಷ್ಟ ಆಕರ್ಷಣೆಯಾಗಿತ್ತು ಎನ್ನಬಹುದು. ಪ್ರತೀ ದಿನ ಪೂಜೆಯ ವೇಳೆ ಪ್ರಸಿದ್ಧ ನಾಸಿಕ್‌ ಬ್ಯಾಂಡ್‌ ಇದ್ದುದು ಇನ್ನೊಂದು ವೈಶಿಷ್ಟ್ಯವಾಗಿತ್ತು.

ವರದಿ: ವಂದಿತಾ ಗೌತಮ್‌ ಕಿಣಿ, ನ್ಯೂಜೆರ್ಸಿ

Advertisement

Udayavani is now on Telegram. Click here to join our channel and stay updated with the latest news.

Next