Advertisement

Desi Swara: ಕತಾರ್‌ನಲ್ಲಿ ವಿಜೃಂಭಿಸಿದ ತುಳು ಚಿತ್ರ “ತುಡರ್‌’

11:53 AM Jun 01, 2024 | Team Udayavani |

ಕತಾರ್‌: “ತುಡರ್‌’ ಚಿತ್ರದ ಮಹಾಪ್ರೇಕ್ಷಣೆ ಮೊದಲ ಬಾರಿಗೆ ಕತಾರಿನ ಏಷ್ಯನ್‌ ಟೌನ್‌ನಲ್ಲಿ ಪ್ರದರ್ಶನಗೊಂಡಿತು. ಈ ಚಿತ್ರದಲ್ಲಿ ಹಾಸ್ಯ, ರಹಸ್ಯ, ಆ್ಯಕ್ಷನ್‌ ಹಾಗೂ ರೊಮಾನ್ಸ್‌ ಈ ಪ್ರತಿಯೊಂದು ಅಂಶವನ್ನು ಸಮರಸವಾಗಿ ಹೊಂದಿದೆ ಎಂಬುದರಿಂದ ವೀಕ್ಷಕರು ವಿಶೇಷವಾಗಿ ಸಂತೋಷಗೊಂಡರು.

Advertisement

ವೀಕ್ಷಕರು ಚಿತ್ರದ ಕಥೆಯನ್ನು, ನಟನೆಯನ್ನು ಹಾಗೂ ನಿರ್ದೇಶನವನ್ನು ಮೆಚ್ಚಿ ಪ್ರಶಂಶಿಸಿದರು. “ತುಡರ್‌’ ಚಿತ್ರವನ್ನು 2024ರ ಜೂ.14ರಂದು ವಿಶ್ವದಾದ್ಯಂತ ಬಿಡುಗಡೆಗೊಳಿಸುವ ಘೋಷಣೆಯು ಪ್ರೇಕ್ಷಕರಲ್ಲಿ ಉತ್ಸಾಹವನ್ನು ತಂದಿತು.

ಈ ಕಾರ್ಯಕ್ರಮದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು, ಕರ್ನಾಟಕ ಸಂಘ ಕತಾರ್‌ನ ಅಧ್ಯಕ್ಷ ರವಿ ಶೆಟ್ಟಿ, ಕರ್ನಾಟಕ ಸಂಘ ಕತಾರ್‌ನ ಮಾಜಿ ಅಧ್ಯಕ್ಷ ಮಹೇಶ್‌ ಗೌಡ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಮಾಜಿ ಅಧ್ಯಕ್ಷರಾದ ಮಿಲನ್‌ ಅರುಣ್‌ ಮತ್ತು ಡಿಪಿಎಸ್‌ ಶಾಲೆಯ ಮುಖ್ಯ ಅಧ್ಯಾಪಕ ಸುಜಿತ್‌ ಕುಮಾರ್‌ ಅವರು ಹಾಗೂ ವಿವಿಧ ಕರ್ನಾಟಕದ ಸಂಘಗಳ ಅಧ್ಯಕ್ಷರು ಉಪಸ್ಥಿತರಿದ್ದರು. ಜತೆಗೆ ತುಡರ್‌ ಚಿತ್ರದ ನಾಯಕ ನಟ ಸಿದ್ಧಾರ್ಥ್ ಶೆಟ್ಟಿಯ ಉಪಸ್ಥಿತಿಯು ಕಾರ್ಯಕ್ರಮದ ಗರಿಮೆಯನ್ನು ಹೆಚ್ಚಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next