Advertisement
ಕಾರ್ಯಕ್ರಮವು ಉತ್ಸಾಹದಿಂದ ಹಾಗೂ ರಾಷ್ಟ್ರಭಕ್ತಿಯಿಂದ ತುಂಬಿ ತುಳುಕುತ್ತಿತ್ತು. ಶಾಲೆಯ ಆವರಣವನ್ನು ರಾಷ್ಟ್ರ ಭಕ್ತರ ಚಿತ್ರಪಟಗಳಿಂದ, ವಿವಿಧ ಬಣ್ಣದ ಪುಷ್ಪಗಳಿಂದ ಹಾಗೂ ವರ್ಣ ರಂಜಿತ ಬಲೂನುಗಳಿಂದ ಅಲಂಕೃತಗೊಳಿಸಲಾಗಿತ್ತು. ಶಾಲೆಯಲ್ಲಿ ಪ್ರಪ್ರಥಮ ಬಾರಿಗೆ ಇಂತಹ ಉನ್ನತ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
Related Articles
Advertisement
ತಮ್ಮ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಾ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅಥವಾ ಅದನ್ನು ಮೀರಿ ಕಾರ್ಯಶೀಲರಾಗಬೇಕೆಂದು ಪ್ರೇರೇಪಿಸಿದರು. ಇತರ ಗಣ್ಯರು ಗಣರಾಜ್ಯೋತ್ಸವದ ಅಂಗವಾಗಿ ತಮ್ಮ ಅನುಭವಗಳನ್ನು ಹಾಗೂ ಭಾವನೆಯನ್ನು ವ್ಯಕ್ತಪಡಿಸಿದರು.
ಶಾಲೆಯ ಪ್ರಾಂಶುಪಾಲರು ಪ್ರೋತ್ಸಾಹದಾಯಕ ಭಾಷಣವನ್ನು ಮಾಡಿ ಗಣರಾಜ್ಯೋತ್ಸವದ ಪ್ರಾಮುಖ್ಯವನ್ನು ವಿಶ್ಲೇಷಿಸಿದರು. ಮುಗ್ಧ ಮನಸ್ಸುಗಳಿಗೆ ವಿಜಯಪತಾಕೆಯ ಮಹತ್ವ ಹಾಗೂ ಗೆಲುವಿನ ಮನೋಭಾವ ಬೆಳೆಸಿಕೊಳ್ಳಲು ಹಾಗೂ ಉಜ್ವಲ ಭವಿಷ್ಯಕ್ಕೆ ಉತ್ತಮ ವಿಚಾರಗಳನ್ನು ಮೈಗೂಡಿಸಿಕೊಳ್ಳಲು ತಿಳಿಸಿದರು.
ಧ್ವಜಾರೋಹಣದ ಅನಂತರ ವಿದ್ಯಾರ್ಥಿಗಳು ದೇಶಭಕ್ತಿಯನ್ನು ಪ್ರತಿಬಿಂಬಿಸುವ ಪ್ರಹಸನ, ನೃತ್ಯರೂಪಕ, ಗಾಯನ ಹಾಗೂ ಭಾಷಣಗಳನ್ನು ಮಾಡಿ ಮನಮೋಹಕ ಪ್ರದರ್ಶನವನ್ನು ನೀಡಿದರು. ವಿದ್ಯಾರ್ಥಿಗಳು ಭಾರತೀಯ ನಾಯಕರ ವೇಷಭೂಷಣಗಳಿಂದ ಸ್ವಾತಂತ್ರ್ಯ ಸಂಗ್ರಾಮದ ತ್ಯಾಗ ಹಾಗೂ ಬಲಿದಾನವನ್ನು ನೆನೆಸಿಕೊಂಡರು. ಕೆಲವರು ಮಹಾತ್ಮ ಗಾಂಧಿ ಅವರ ವೇಷಭೂಷಣವನ್ನು ಮಾಡಿಕೊಂಡಿದ್ದರೆ ಇನ್ನೂ ಕೆಲವರು ಜವಾಹರಲಾಲ್ ನೆಹರೂ ಉಡುಗೆಯನ್ನು ತೊಟ್ಟಿದ್ದರು.
ಶಾಲೆಯ ಗಾಯನ ತಂಡವು ದೇಶಭಕ್ತಿ ಗೀತೆಯನ್ನು ಹಾಡಿದರು. ಸಿಹಿ ತಿಂಡಿಯ ವಿತರಣೆಯೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು. 2024ನೇ ಸಾಲಿನ ಗಣರಾಜ್ಯೋತ್ಸವವನ್ನು ಅತೀ ವಿಜೃಂಭಣೆಯಿಂದ ಹಾಗೂ ದೇಶಭಕ್ತಿಯಿಂದ ಆಚರಿಸಲು ಎಲ್ಲರಿಗೂ ಹೆಮ್ಮೆಯಾಯಿತು. ಈ ಕಾರ್ಯಕ್ರಮಕ್ಕೆ ಕಾರಣಕರ್ತರಾದ ಸಮಸ್ತ ಸಿಬಂದಿ ವರ್ಗದವರು ಸಮಾರಂಭವನ್ನು ಅವಿಸ್ಮರಣೀಯಗೊಳಿಸುವಲ್ಲಿ ಯಶಸ್ವಿಯಾದರು.