Advertisement

Desi Swara: “ಒಲಂಪಿಯನ್‌ ಎಂ. ಕೆಂಪಯ್ಯ’ ಬಿಡುಗಡೆಗೆ ಸಿದ್ಧತೆ

02:33 PM Jan 13, 2024 | Team Udayavani |

ಡಬಲ್‌ ಒಲಂಪಿಯನ್‌, ಭಾರತೀಯ ಫ‌ುಟ್‌ಬಾಲ್‌ನ ಲೆಜೆಂಡರಿ ಮಿಡಲ್‌ ಫೀಲ್ಡ್‌ರ್‌ ಎಂ.ಕೆಂಪಯ್ಯ ಅವರ ಜೀವನ ಚರಿತ್ರೆ ” ಒಲಂಪಿಯನ್‌ ಎಂ. ಕೆಂಪಯ್ಯ ‘ ಪುಸ್ತಕವು ಬಿಡುಗಡೆಗೆ ಸಿದ್ಧವಾಗಿದೆ.

Advertisement

1956ರ ಮೇಲ್ಬೋರ್ನ್ ಒಲಂಪಿಕ್ಸ್‌, 1960ರ ರೋಮ್‌ ಒಲಂಪಿಕ್ಸ್‌ ಮತ್ತು 1958ರ ಏಷ್ಯನ್‌ ಗೇಮ್ಸ್‌ ಹಾಗೂ ಹಲವು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಕೀರ್ತಿ ಕೆಂಪಯ್ಯ ಅವರದ್ದು. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 72ನೇ ಮಠಾಧೀಶರಾದ ಜಗದ್ಗುರು ಶ್ರೀ ಶ್ರೀ ಡಾ| ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರಿಗೆ ದಿ| ಎಂ. ಕೆಂಪಯ್ಯ ಅವರ ಪುತ್ರಿಯರಾದ ಮಂಜುಳಾ ಚಂದ್ರಶೇಖರ್‌ ಮತ್ತು ಸುಮಾ ಮಹೇಶ್‌ ಗೌಡ ಅವರು ಪುಸ್ತಕದ ಮೊದಲ ಪ್ರತಿಯನ್ನು ಹಸ್ತಾಂತರಿಸಿ ಅವರ ಆಶೀರ್ವಾದ ಪಡೆದರು.

ಕೊಲ್ಲಿ ರಾಷ್ಟ್ರ ಕತಾರ್‌ ನಲ್ಲಿ ನೆಡೆಯುವ ಅಂತಾರಾಷ್ಟ್ರೀಯ ಏಷ್ಯನ್‌ ಫ‌ುಟ್‌ಬಾಲ್‌ ಕಪ್‌ ಸಮಯದಲ್ಲಿ ಪುಸ್ತಕವನ್ನು ಲೋಕಾರ್ಪಣೆ ಮಾಡುವ ಸಿದ್ಧತೆ ನಡೆಯುತ್ತಿದೆ. ಅಂತಾರಾಷ್ಟ್ರೀಯ ಕ್ರೀಡಾ ಪಟುವಿನ ಜೀವನದ ಸಾಧನೆಗಳ ಮೇಲಿನ ಪುಸ್ತಕ ರಚನೆಯ ಪ್ರಯತ್ನಕ್ಕೆ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಸಂಘ ಕತಾರ್‌ನ ಅಧ್ಯಕ್ಷರು ಮಹೇಶ್‌ ಗೌಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next