Advertisement

Desi Swara: ದುಬೈ-ರಘುಪತಿ ಭಟ್‌ ಅವರಿಗೆ ಸಮ್ಮಾನ

01:07 PM Sep 30, 2023 | Team Udayavani |

ದುಬೈ: ಇಲ್ಲಿನ ಯುಎಇ ಬ್ರಾಹ್ಮಣ ಸಮಾಜದ ವತಿಯಿಂದ ಕನ್ನಡದ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಕರ್ನಾಟಕದ ಮಾಜಿ ಶಾಸಕ ರಘುಪತಿ ಭಟ್‌ ಅವರನ್ನು ಇತ್ತೀಚೆಗೆ ಸಮ್ಮಾನಿಸಲಾಯಿತು.

Advertisement

ಕರ್ನಾಟಕ ಅನಿವಾಸಿ ಭಾರತೀಯ ವೇದಿಕೆಯ (KNRI)ನ ಅಧ್ಯಕ್ಷರಾದಂತಹ ಪ್ರವೀಣ್‌ ಕುಮಾರ್‌ ಶೆಟ್ಟಿ , ವೀನಸ್‌ ಗ್ರೂಪ್‌ ಹೊಟೇಲ್ಸ್‌ ನ ಮಾಲಕರಾದ ಪುತ್ತಿಗೆ ವಾಸುದೇವ ಭಟ್‌, ಭೀಮ ಜ್ಯೂವೆಲ್ಲರ್ಸ್‌ನ ಮಾಲಕರಾದ ನಾಗರಾಜ ರಾವ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಪೂರ್ವ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಘದ ಸಂಚಾಲಕರಾದ ಸುಧಾಕರ ಪೇಜಾವರ ಅವರು ಎಲ್ಲರನ್ನು ಸ್ವಾಗತಿಸಿ, ಯುಎಇ ಬ್ರಾಹ್ಮಣ ಸಮಾಜವು
20 ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಸಮಾಜದ ಸಾಧನೆ, ಉದ್ದೇಶ ಹಾಗೂ ಕಾರ್ಯ ವೈಖರಿಯ ಬಗ್ಗೆ ವಿವರಿಸಿದರು.

ಪ್ರವೀಣ್‌ ಶೆಟ್ಟಿಯವರು ಮಾತನಾಡುತ್ತ ರಘುಪತಿ ಭಟ್‌ ಅವರ ವೃತ್ತಿಪರತೆ , ನಿಷ್ಠೆ ಮತ್ತು ಸಕಾಲಿಕ ಸಹಾಯವನ್ನು ನೆನೆದರು. ಬ್ರಾಹ್ಮಣ ಸಮಾಜದ ವಿಂಶತಿ ಉತ್ಸವದ ಗೌರವ ಅಧ್ಯಕ್ಷರಾದ ಪುತ್ತಿಗೆ ವಾಸುದೇವ ಭಟ್‌ ಅವರು ರಘುಪತಿ ಭಟ್‌ ಅವರಿಗೆ ಇನ್ನಷ್ಟು ಸಮಾಜ ಸೇವೆ ಮಾಡುವ ಶಕ್ತಿ , ಕ್ಷಮತೆ ಮತ್ತು ಅಧಿಕಾರವನ್ನು ಭಗವಂತ ಕರುಣಿಸಲಿಯೆಂದು ಹಾರೈಸಿದರು.
ಭೀಮ ಜ್ಯೂವೆಲ್ಲರ್ಸ್‌ನ ನಾಗರಾಜ ರಾವ್‌ ಅವರು ಕೂಡ ಭಟ್‌ ಅವರನ್ನು ಅಭಿನಂದಿಸಿ ಶುಭ ಹಾರೈಸಿದರು. ಮಟ್ಟಾರು ರತ್ನಾಕರ ಹೆಗ್ಡೆ ಅವರು ಮಾತನಾಡುತ್ತ ರಘುಪತಿ ಭಟ್‌ ಉಡುಪಿ ಜಿಲ್ಲೆಯಾದ್ಯಂತ ಮಾಡಿರುವಂತಹ ಅಭಿವೃದ್ಧಿ ಕಾರ್ಯಗಳು, ಸಮಾಜದ ಏಳಿಗೆಗಾಗಿ ಕೈಗೊಂಡಂತಹ ಕಾರ್ಯಗಳು ಅವರ ಶೈಕ್ಷಣಿಕ ಸೇವೆ , ಸಾರಿಗೆ ಮತ್ತು ಇತರ ಕ್ಷೇತ್ರಗಳಲ್ಲಿ ಅವರು ಪಡೆದ ಯಶಸ್ಸುಗಳ ಬಗ್ಗೆ ಮಾತನಾಡಿದರು.

ಸಮ್ಮಾನ ಸ್ವೀಕರಿಸಿ ಮಾತನಾಡಿದ ರಘುಪತಿ ಭಟ್‌, ವಿವಿಧ ಕ್ಷೇತ್ರದಲ್ಲಿ ಅನಿವಾಸಿಗಳು ಸಾಧನೆ ಮಾಡುತ್ತಿರುವುದನ್ನು ಶ್ಲಾ ಸಿದರು. ಅವರ ರಾಜಕೀಯ ಗುರುಗಳಾದ ದಿ| ವಿ .ಎಸ್‌ .ಆಚಾರ್ಯ ಅವರ ಮಾತು, ಧಾರ್ಮಿಕ ಗುರುಗಳಾದ ಪೇಜಾವರದ ಹಿಂದಿನ ಸ್ವಾಮಿಗಳು ಹಾಕಿಕೊಟ್ಟ ಸನ್ಮಾರ್ಗಲ್ಲಿ ನಡೆದು ಬಂದಿದಕ್ಕೆ ಇಷ್ಟೊಂದು ಜನರ ಪ್ರೀತಿ ಮತ್ತು ಹುದ್ದೆಗಳು ದೊರಕಿರುವುದೆಂದು ತಿಳಿಸಿದರು.

ಕರ್ನಾಟಕ ಸಂಘ ದುಬೈಯ ಅಧ್ಯಕ್ಷರಾದ ಶಶಿಧರ್‌ ನಾಗರಾಜಪ್ಪ ಮತ್ತು ಕನ್ನಡ ಪಾಠ ಶಾಲೆಯ ನಾಗರಾಜ ರಾವ್‌, ಶ್ರೀನಿವಾಸ್‌ ಆಚಾರ್‌, ವೀರಶೈವ ಲಿಂಗಾಯಿತ ಸಮಾಜದ ಅಧ್ಯಕ್ಷರಾದಂತಹ ಮಲ್ಲಿಕಾರ್ಜುನ ಗೌಡ ಅವರು ರಘುಪತಿ ಭಟ್‌ ಅವರನ್ನು ಅಭಿನಂದಿಸಿದರು. ಆರತಿ ಅಡಿಗ ನಿರೂಪಿಸಿ, ಕೃಷ್ಣ ಪ್ರಸಾದ್‌ ರಾವ್‌ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next