Advertisement

Desi Swara: ದುಬೈ, ಅಬುಧಾಬಿ- ಸೆ. 30, ಅ. 1ರಂದು ಯಕ್ಷಸಂಭ್ರಮ

01:12 PM Sep 30, 2023 | Team Udayavani |

ದುಬೈ: ಯಕ್ಷಗಾನ ಜೋಡಿ ಪ್ರದರ್ಶನ “ಯಕ್ಷ ಸಂಭ್ರಮ’ ದುಬೈ ಮತ್ತು ಅಬುಧಾಬಿಯಲ್ಲಿ ಸೆ.30 ಮತ್ತು ಅ. 1ರಂದು ನೆರವೇರಲಿದೆ.

Advertisement

ಬಡಗುತಿಟ್ಟಿನ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರಿ ಅವರ ಗಾನ ಸಾರಥ್ಯದಲ್ಲಿ ದಿಗ್ಗಜ ಕಲಾವಿದರು ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಚಿತ್ರಾಕ್ಷಿ ಕಲ್ಯಾಣ (ರಾಜ ರುದ್ರ ಕೋಪ) ಎಂಬ ಪ್ರಸಂಗವನ್ನು ಜೇಮ್ಸ್‌ ನವ ಮಿಲೇನಿಯಂ ಸ್ಕೂಲ್‌ ಅಲ್‌ -ಖೈಲ್‌ ದುಬೈಯಲ್ಲಿ ಸೆ. 30ರ ಸಂಜೆ 5ರಿಂದ ಹಾಗೂ ಅಬುಧಾಬಿಯಲ್ಲಿ ಚಂದ್ರಹಾಸ ಚರಿತ್ರೆ (ದುಷ್ಟಬುದ್ಧಿ ) ಎಂಬ ಪ್ರಸಂಗವನ್ನು ಜೇಮ್ಸ್‌ ವರ್ಲ್ಡ್‌ ಅಕ್ಯಾಡೆಮಿ ಅಲ ರೀಮ್‌ ಐಲ್ಯಾಂಡ್‌ ಅಬುಧಾಬಿಯಲ್ಲಿ ಅ. 1ರ ಸಂಜೆ 3 ಗಂಟೆಯಿಂದ ಹಮ್ಮಿಕೊಳ್ಳಲಾಗಿದೆ.

ಮುಮ್ಮೇಳದಲ್ಲಿ ಕಲಾವಿದರಾದ ಸುಬ್ರಹ್ಮಣ್ಯ ಚಿಟ್ಟಾಣಿ, ಕಾರ್ತಿಕ್‌ ಚಿಟ್ಟಾಣಿ, ಸುಧೀರ್‌ ಉಪ್ಪೂರ್‌, ಅಶೋಕ್‌ ಭಟ್‌ ಸಿದ್ದಾಪುರ, ಎಂ.ಜಿ .ಹೆಗಡೆ, ರವೀಂದ್ರ ದೇವಾಡಿಗ ಹಿಮ್ಮೇಳದಲ್ಲಿ ಜನ್ಸಾಲೆ ರಾಘವೇಂದ್ರ ಆಚಾರಿ, ಸುನಿಲ್‌ ಭಂಡಾರಿ ಮತ್ತು ಪ್ರಸನ್ನ ಹೆಗ್ಗಾರ್‌ ಅವರು ಭಾಗವಹಿಸಲಿದ್ದಾರೆ. ಅವರ ಜತೆ ಸ್ಥಳೀಯ ಕಲಾವಿದರಾದ ವಿನಾಯಕ ಹೆಗೆಡೆ, ವಿಶ್ವೇಶ್ವರ ಅಡಿಗ, ಕಿಶೋರ್‌ ಗಟ್ಟಿ ಮತ್ತು ಅನನ್ಯಾ ವೇದವ್ಯಾಸ ಅವರು ವೇದಿಕೆ ಹಂಚಿಕೊಳ್ಳಲಿದ್ದಾರೆ.

ದುಬೈ ಕಾರ್ಯಕ್ರಮದಲ್ಲಿ ಕೆಎನ್‌ಆರ್‌ಐ ಅಧ್ಯಕ್ಷ ಪ್ರವೀಣ್‌ ಶೆಟ್ಟಿ, ಉದ್ಯಮಿ ಶ್ಯಾಮ್‌ ಭಟ್‌ ಅವರು ಮುಖ್ಯ ಅತಿಥಿಗಳಾಗಿ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಪಾಲ್ಗೊಳ್ಳುವರು. ಪ್ರದರ್ಶನಗಳಿಗೆ ಉಚಿತ ಪ್ರವೇಶವಿದ್ದು ಯಕ್ಷಗಾನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಗಣಪತಿ ಭಟ್‌ ಹಾಗೂ ಪ್ರಶಾಂತ್‌ ಭಟ್‌ ವಿನಂತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next