Advertisement

Desi Swara: ಕಾರ್ಕ್‌ಸಿಟಿ- ಸಾವಿರ ಮಂದಿಯಿಂದ ದುರ್ಗಾಪೂಜೆ ಸಂಭ್ರಮ

12:20 PM Oct 26, 2024 | Team Udayavani |

ಐರ್ಲೆಂಡ್‌:‌ ಐರ್ಲೆಂಡ್‌ನ‌ ವಿಶಿಷ್ಟ ಸ್ಥಳ ಕಾರ್ಕ್‌ ಸಿಟಿ ಹಾಲ್‌ನಲ್ಲಿ ನಡೆದ ದೇಶದ ಅತೀ ದೊಡ್ಡ ದುರ್ಗಾ ಪೂಜೆಗೆ 1,500 ಜನರು ಭಾಗವಹಿಸಿದರು. 2017ರಲ್ಲಿ ಸಣ್ಣ ಮಟ್ಟದಲ್ಲಿ ಪ್ರಾರಂಭವಾದ ದುರ್ಗಾಪೂಜೆ, ಈ ವರ್ಷ 1,500 ಜನರನ್ನು ಕಂಡಿತು. ಪೂಜಾ ವಿಧಾನಗಳಿಂದ ಪ್ರಾರಂಭವಾದ ಈ ಸಂಭ್ರಮವು, ಅನಂತರ ಅನೇಕ ಭಾರತೀಯ ಸಾಂಸ್ಕೃತಿಕ ಪ್ರದರ್ಶನಗಳಿಂದ ಎಲ್ಲರ ಹೃನ್ಮನಗಳನ್ನು ಸೆರೆಹಿಡಿಯಿತು.

Advertisement

ಸಂಗೀತ ಹಾಗೂ ನೃತ್ಯಗಳನ್ನು ಒಳಗೊಂಡ ಈ ಪ್ರದರ್ಶನಗಳಲ್ಲಿ, ವಿವಿಧ ಭಾರತೀಯ ಮೌಲ್ಯಗಳನ್ನು ಎಲ್ಲರಿಗೂ ಪರಿಚಯಿಸುವ ದೃಷ್ಟಿಯನ್ನು ಹೊಂದಿತ್ತು. ಮಹಾ ಭೋಜನದಿಂದ ಸಮಾಪ್ತಿಯಾದ ಈ ಕಾರ್ಯಕ್ರಮವು, ಐರ್ಲೆಂಡ್‌ ದೇಶ ಮೆಚ್ಚಿದ ಅಪರೂಪದ ಸಂಭ್ರಮಗಳಲ್ಲಿ ಜನಪ್ರಿಯವಾದ ಹೆಸರನ್ನು “ಕಾರ್ಕ್‌ ದುರ್ಗಾ ಪೂಜಾ’ ತಂಡವು ಗಳಿಸಿದೆ. ಕಾರ್ಕ್‌ನ ಲಾರ್ಡ್‌ ಮೇಯರ್‌ ಹಾಗೂ ಕಾರ್ಕ್‌ ಸಿಟಿ ಕೌನ್ಸಿಲರ್‌ಅವರ ಉಪಸ್ಥಿತಿ ಈ ಸಂಭ್ರಮಕ್ಕೆ ಮೆರಗು ನೀಡಿತು. ಸುಮಾರು 50 ಸ್ವಯಂಸೇವಕರ ಶ್ರಮ ಪ್ರತಿಫಲಿಸಿತು.

ವರದಿ: ಸಚಿನ್‌ ಎಸ್‌. ಕೋಲಾರ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next