Advertisement
ಈ ಮಹಾ ಸಭೆ ನೃತ್ಯದ ಎಲ್ಲ ಪ್ರಕಾರಗಳು, ಎಲ್ಲ ವಿಧಾನಗಳು (ಸಂಶೋಧನೆ, ಪ್ರದರ್ಶನ, ಬೋಧನೆ, ಚಿಕಿತ್ಸೆ, ಮನರಂಜನೆ ಇತ್ಯಾದಿ) ಇಲ್ಲಿ ಪ್ರಸ್ತುತ ಪಡಿಸಲಾಗುತ್ತದೆ. 5 ಖಂಡಗಳ 40 ದೇಶಗಳಿಂದ ಸುಮಾರು 300 ವೃತ್ತಿಪರರು ಪ್ರತೀ ಕಾಂಗ್ರೆಸ್‌ಗೆ ಹಾಜರಾಗುತ್ತಾರೆ; ವೈಜ್ಞಾನಿಕ ಸಮಿತಿಯಲ್ಲಿ 9 ದೇಶಗಳ 12 ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಿದ್ದು ಇದು ಅತೀ ದೊಡ್ಡ ಹಾಗೂ ಹಳೆಯ ಸಮ್ಮೇಳನ ಎಂದರೆ ತಪ್ಪಾಗಲಾರದು.
Related Articles
Advertisement
ಸರಸ್ವತಿ ದೇವಿಯ ಆಶೀರ್ವಾದ ಹಾಗೂ ನನ್ನ ಅದೃಷ್ಟ ಈಗ ಮತ್ತೆ ನನ್ನ ಹವ್ಯಾಸವನ್ನು ಮುಂದುವರೆಸಲು ಸಾಧ್ಯವಾಗಿದೆ. ಸುಮಾರಿ 15 ವರ್ಷಗಳ ಅಲ್ಪವಿರಾಮದ ಅನಂತರ ಕೋವಿಡ್ ಸಮಯದಲ್ಲಿ ನಾನು ನೃತ್ಯವನ್ನು ಮುಂದುವರಿಸಲು ಪ್ರಾರಂಭಿಸಿದಾಗ ನಾನು ಈ ಗೌರವಾನ್ವಿತ ಸಮಾರಂಭದಲ್ಲಿ ಪ್ರದರ್ಶನ ನೀಡುತ್ತೇನೆ ಎಂದು ಊಹಿಸಿರಲಿಲ್ಲ ಅಥವಾ ಕನಸು ಕಂಡಿರಲಿಲ್ಲ. ದೇವರ ಹಾಗೂ ಗುರು ಹಿರಯರ ಆಶೀರ್ವಾದಕ್ಕಾಗಿ ಧನ್ಯವಾದ ಹೇಳುತ್ತೇನೆ. ಈ ಎರಡನೇ ಅವಕಾಶವು ನನಗೆ ಕೊಡುಗೆಯಾಗಿದೆ, ಕಲೆಯನ್ನು ಮುಂದು ಒರೆಸಲು ಹಾಗೂ ಅಳಿಲು ಸೇವೆಯನ್ನು ಮಾಡಲು ನನಗೆ ಶಕ್ತಿಯನ್ನು ಕೊಡಲೆಂದು ಪ್ರಾರ್ಥಿಸುತ್ತೇನೆ.
ಪ್ರಪಂಚದಾದ್ಯಂತದಿಂದ ಬಂದ ಶ್ರೇಷ್ಠ ಕಲಾವಿದರೊಂದಿಗೆ ಪ್ರತಿಷ್ಠಿತ ವೇದಿಕೆ ಹಂಚಿಕೊಳ್ಳುವ ಅವಕಾಶಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ಇಂತಹ ಅನುಭವವು ಬಹಳ ಶ್ರೀಮಂತ ಮತ್ತು ಲಾಭದಾಯಕವಾಗಿದೆ. ಪ್ರಪಂಚದ ಎಲ್ಲ ಭಾಗಗಳ ಸಹ ನೃತ್ಯಗಾರರನ್ನು ಭೇಟಿಯಾಗುವುದು, ವಿಭಿನ್ನ ನೃತ್ಯ ಸಂಸ್ಕೃತಿಗಳನ್ನು ನೋಡಿ ತಿಳಿಯುವುದು ಮತ್ತು ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು ಒಟ್ಟಾರೆ ಅನುಭವವು ಅವಿಸ್ಮರಣೀಯ.
*ರಶ್ಮಿ ಜೋಶಿ, ಜರ್ಮನಿ