Advertisement

ದೇಸಿ ಕಲೆ-ಸಾಹಿತ್ಯ ಉಳಿಸಿ ಬೆಳೆಸಬೇಕಿದೆ

06:26 PM Nov 16, 2021 | Team Udayavani |

ಸಂಕೇಶ್ವರ: ಭಾರತೀಯರ ಜೀವನದ ಪರಂಪರೆಯಲ್ಲಿ ಕಲೆಯು ಹಾಸು ಹೊಕ್ಕಾಗಿದ್ದು ಅದನ್ನು ಉಳಿಸಿ-ಬೆಳೆಸುವ ಹೊಣೆಗಾರಿಕೆ ಎಲ್ಲರ ಮೇಲೆ ಇದೆ ಎಂದು ಸಾಹಿತಿ ಆಶಾ ಯಮಕನಮರಡಿ ಹೇಳಿದರು. ಅವರು ಸಂಕೇಶ್ವರದಲ್ಲಿ ಇಲ್ಲಿನ ಅಕ್ಕಮಹಾದೇವಿ ಕಲಾ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಗಡಿನಾಡು ಸಾಂಸ್ಕೃತಿಕ ಸಂಭ್ರಮ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಇಂದಿನ ಆಧುನಿಕ ಯುಗದಲ್ಲಿ ಯುವ ಜನತೆ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ ದೇಸಿಯ ಪರಂಪರೆ ಮರೆಯುತ್ತಿದ್ದಾರೆ. ದೇಸಿಯ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ, ಪಸರಿಸುವ ಕಾರ್ಯವನ್ನು ಇಂದಿನ ಯುವ ಪೀಳಿಗೆ ಮಾಡಬೇಕಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕವಿ ಅಕಬರ ಸನದಿ ಮಾತನಾಡಿ, ಕಲೆ, ಸಾಹಿತ್ಯವನ್ನು ಉಳಿಸುವ ಜವಾಬ್ದಾರಿಯು ಮಹಿಳೆಯರ ಮೇಲೆ ಹೆಚ್ಚಿದೆ.

ತಮ್ಮ ಮಕ್ಕಳಿಗೆ ಈ ನಾಡಿನ ಕಲೆ, ಸಂಸ್ಕೃತಿಯನ್ನು ಚಿಕ್ಕಂದಿನಲ್ಲೇ ತಿಳಿ ಹೇಳಬೇಕು. ಇದರಿಂದ ಅವರು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗುವಲ್ಲಿ ಸಹಾಯವಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕಿ ಹಮೀದಾಬೇಗಂ ದೇಸಾಯಿ ಮಾತನಾಡಿ, ಗಡಿ ಭಾಗದಲ್ಲಿ ಕಳೆದ 13 ವರ್ಷಗಳಿಂದ ಸಂಕೇಶ್ವರದ ಅಕ್ಕಮಹಾದೇವಿ ಕಲಾ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘವು ನಿರಂತರವಾಗಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಮೂಲಕಈಭಾಗದನೂರಾರುಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಅವರಲ್ಲಿ ಹುದುಗಿದ್ದ ಸುಪ್ತ ಪ್ರತಿಭೆಯು ಹೊರ ಬರಲು ಕಾರಣವಾಗಿದೆ ಎಂದರು.

ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಮನ ರಂಜಿಸಿದವು. ಸಮಾರೋಪ ಸಮಾರಂಭದಲ್ಲಿ ಡಾ. ಶ್ರೀಶೈಲ ಮಠಪತಿ ಮಾತನಾಡಿ, ಗಡಿ ಭಾಗವಾದ ಸಂಕೇಶ್ವರದಲ್ಲಿ ಇಂಥ ಕಾರ್ಯಕ್ರಮಗಳು ಜರುಗುತ್ತಿರುವುದು ಸಂತಸದ ಸಂಗತಿ ಎಂದರು. ಸಮಾರಂಭದಲ್ಲಿ ಅಕ್ಕಮಹಾದೇವಿ ಕಲಾ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಸುಜಾತಾ ಮಂಜರಗಿ, ಮಾಧವಿ ಗುರವ, ತನುಜಾ ಗುರವ, ಕನ್ನಡಪರ ಹೋರಾಟಗಾರ ಕಿರಣ ನೇಸರಿ ಮುಂತಾದವರು ಉಪಸ್ಥಿತರಿದ್ದರು. ಸಂಗೀತಾ ಕುಂಬಾರ ಸ್ವಾಗತಿಸಿದರು. ಲೀನಾ ಕೋಳಿ ವಂದಿಸಿದರು. ಪ್ರೊ.ಕುಮಾರ ತಳವಾರ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next