Advertisement

ದೇಸಾಯಿ ಹಾಲಿವುಡ್‌ ಶೈಲಿಯ ನಿರ್ದೇಶಕ

12:30 AM Mar 22, 2019 | Team Udayavani |

ದೇಸಾಯಿ ಬಗೆಗಿನ ವಿವರ ನನ್ನ ಕುತೂಹಲಕ್ಕೆ ಕಾರಣವಾಯಿತು. ಆ ನಂತರ ಬಂದ ಕಥೆ ಹೇಳಿದರು. ಆಗಲೂ ನನಗೆ ಈ ಸಿನಿಮಾಕ್ಕೆ ನಾನೇ ಹೀರೋ ಎಂದು ನಂಬಲಾಗು ತ್ತಿರಲಿಲ್ಲ. ಹಾಗಾಗಿ, “ನನ್ನನ್ನು ಹೀರೋ ಮಾಡ್ತೀರಾ’ ಎಂದು ಕೇಳಿದೆ. ಕಥೆ ತುಂಬಾ ಇಂಟರೆಸ್ಟಿಂಗ್‌ ಆಗಿತ್ತು. ಜೊತೆಗೆ ದೇಸಾಯಿಯವರು ಲಕ್ಕಿ ಹ್ಯಾಂಡ್‌. ಹಾಗಾಗಿ, ಒಪ್ಪಿಕೊಂಡೆ’ ಎಂದು “ಉದ್ಘರ್ಷ’ ತಂಡ ಸೇರಿಕೊಂಡ ಬಗ್ಗೆ ಹೇಳುತ್ತಾರೆ ಅನೂಪ್‌.

Advertisement

“ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರವನ್ನು ದೇಸಾಯಿಯವರಿಗಿಂತ ಚೆನ್ನಾಗಿ ಇನ್ಯಾರು ತೆಗೀತಾರೆ ಹೇಳಿ…’

– ಹೀಗೆ ಹೇಳಿ ನಕ್ಕರು ಅನೂಪ್‌ ಸಿಂಗ್‌ ಠಾಕೂರ್‌. ಅನೂಪ್‌ ಸಿಂಗ್‌, ದೇಸಾಯಿಯವರ ಸಿನಿಮಾಗಳನ್ನು ನೋಡಿಲ್ಲ. ಆದರೆ, ಅವರ ಸಿನಿಮಾಗಳ ಬಗ್ಗೆ, ಸಾಮರ್ಥ್ಯದ ಬಗ್ಗೆ ಕೇಳಿದ್ದಾರೆ. ಗೂಗಲ್‌ನಲ್ಲಿ ಹುಡುಕಿದಾಗ, ದೇಸಾಯಿ ಇಷ್ಟೊಂದು ಥ್ರಿಲ್ಲರ್‌ಮಯನ ಎಂದು ಆಶ್ಚರ್ಯವಾಗಿದೆ. ಎಲ್ಲಾ ಓಕೆ, ಯಾರು ಈ ಅನೂಪ್‌ ಸಿಂಗ್‌ ಠಾಕೂರ್‌ ಎಂದು ನೀವು ಕೇಳಬಹುದು. ಇಂದು ತೆರೆಕಾಣುತ್ತಿರುವ ದೇಸಾಯಿ ನಿರ್ದೇಶನದ  “ಉದ್ಘರ್ಷ’ ಚಿತ್ರದ ನಾಯಕ ಅನೂಪ್‌ ಸಿಂಗ್‌ ಠಾಕೂರ್‌. ಇಲ್ಲಿವರೆಗೆ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಸ್ಟೈಲಿಶ್‌ ವಿಲನ್‌ ಆಗಿ ಕಾಣಿಸಿಕೊಂಡಿರುವ ಅನೂಪ್‌ಗೆ ಮೊದಲ ಬಾರಿಗೆ ದೇಸಾಯಿ ಹೀರೋ ಪಟ್ಟ ಕೊಟ್ಟಿದ್ದಾರೆ. ಈ ಚಿತ್ರ ಕನ್ನಡ ಹಾಗೂ ತೆಲುಗಿನಲ್ಲಿ ತೆರೆಕಾಣಿತ್ತಿದೆ. ದೇಸಾಯಿ ಬಗ್ಗೆ ಮಾತನಾಡುವ ಅನೂಪ್‌, “ನಾನು ಈ ಸಿನಿಮಾಕ್ಕೆ ಹೀರೋ ಆಗಿದ್ದು ಅಚಾನಕ್‌ ಆಗಿ. “ರೋಗ್‌’ ಸಿನಿಮಾದ ಪ್ರಮೋಶನ್‌ಗಾಗಿ ನಾನು ಬೆಂಗಳೂರಿಗೆ ಬಂದಿದ್ದೆ. ಆಗ ಆ ಕಾರ್ಯಕ್ರಮಕ್ಕೆ ಬಂದಿದ್ದ ದೇಸಾಯಿಯವರ ಕಣ್ಣಿಗೆ ನಾನು ಬಿದ್ದೆ. ನನ್ನ ಪರ್ಸನಾಲಿಟಿ, ಲುಕ್‌ ಅವರಿಗೆ ಇಷ್ಟವಾಗಿರಬೇಕು. ಕಟ್‌ ಮಾಡಿದರೆ, ಈ ತರಹದ ಒಂದು ಸಿನಿಮಾಕ್ಕೆ ಹೀರೋ ಆಗಬೇಕೆಂದು ಫೋನ್‌ ಬಂತು. 

ಆರಂಭದಲ್ಲಿ ನಾನು ತುಂಬಾ ಸೀರಿಯಸ್‌ ಆಗಿ ತಗೊಂಡಿರಲಿಲ್ಲ. ಆ ನಂತರ ದೇಸಾಯಿಯವರ ಹೆಸರನ್ನು ಗೂಗಲ್‌ನಲ್ಲಿ ಹುಡುಕಿದೆ. ಅವರ ಬಗೆಗಿನ ವಿವರ ನನ್ನ ಕುತೂಹಲಕ್ಕೆ ಕಾರಣವಾಯಿತು. ಆ ನಂತರ ಬಂದು ಕಥೆ ಹೇಳಿದರು. ಆಗಲೂ ನನಗೆ ಈ ಸಿನಿಮಾಕ್ಕೆ ನಾನೇ ಹೀರೋ ಎಂದು ನಂಬಲಾಗುತ್ತಿರಲಿಲ್ಲ. ಹಾಗಾಗಿ, “ನನ್ನನ್ನು ಹೀರೋ ಮಾಡ್ತೀರಾ’ ಎಂದು ಕೇಳಿದೆ. ಕಥೆ ತುಂಬಾ ಇಂಟರೆಸ್ಟಿಂಗ್‌ ಆಗಿತ್ತು. ಜೊತೆಗೆ ದೇಸಾಯಿಯವರು ಲಕ್ಕಿ ಹ್ಯಾಂಡ್‌. ಹಾಗಾಗಿ, ಒಪ್ಪಿಕೊಂಡೆ’ ಎಂದು “ಉದ್ಘರ್ಷ’ ತಂಡ ಸೇರಿಕೊಂಡ ಬಗ್ಗೆ ಹೇಳುತ್ತಾರೆ ಅನೂಪ್‌.

ಅನೂಪ್‌ ಸಿಂಗ್‌, ದೇಸಾಯಿಯವರ ಕೆಲಸದ ಶೈಲಿ ನೋಡಿ ಫಿದಾ ಆಗಿದ್ದಾರೆ. ಅನೂಪ್‌ ಹೇಳುವಂತೆ, ದೇಸಾಯಿ ಹಾಲಿವುಡ್‌ ಶೈಲಿಯ ಸಿನಿಮಾ ಮೇಕರ್‌. “ದೇಸಾಯಿಯವರು ಹಾಲಿವುಡ್‌ ಶೈಲಿಯ ಫಿಲಂ ಮೇಕರ್‌. ಸಣ್ಣ  ಸಣ್ಣ ಶಾಟ್‌ ತೆಗೆಯುತ್ತಾರೆ. ನಡೆದುಕೊಂಡು ಬರೋದು, ಫೋನ್‌ನಲ್ಲಿ ಮಾತನಾಡೋದು … ಹೀಗೆ ಪ್ರತಿಯೊಂದು ಸಣ್ಣ ಸಣ್ಣ ಅಂಶವನ್ನು ಪ್ರತ್ಯೇಕವಾಗಿ ಸೆರೆಹಿಡಿಯುತ್ತಾರೆ. ಆರಂಭದಲ್ಲಿ ನನಗೆ, “ಯಾಕೆ ಇವರು ಹೀಗೆ ಮಾಡುತ್ತಾರೆ’ ಎಂದು ಬೋರ್‌ ಆಗುತ್ತಿತ್ತು. ಆ ನಂತರ ಸಿನಿಮಾ ನೋಡಿದಾಗ ಅದರ ಹಿಂದಿನ ಉದ್ದೇಶ ಅರ್ಥವಾಯಿತು’ ಎನ್ನುವುದು ಅನೂಪ್‌ ಮಾತು. 

Advertisement

“ಉದ್ಘರ್ಷ’ ಚಿತ್ರದಲ್ಲಿ ಅನೂಪ್‌ ಈ ಹಿಂದೆ ಮಾಡಿರದಂತಹ ಪಾತ್ರ ಮಾಡಿದ್ದಾರೆ. ಹಾಗಾಗಿ, ಅವರಿಗೆ ಖುಷಿ ಇದೆ. ಜೊತೆಗೆ ಇಡೀ ಸಿನಿಮಾವನ್ನು ನೈಜವಾಗಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. “ನಾನು ಈ ಹಿಂದೆ ನಟಿಸಿದ ಸಿನಿಮಾಗಳಿಗಿಂತ “ಉದ್ಘರ್ಷ’ ಸಂಪೂರ್ಣ ಭಿನ್ನ ಸಿನಿಮಾ. ಇಲ್ಲಿ ನೈಜತೆಗೆ ಹೆಚ್ಚು ಒತ್ತುಕೊಟ್ಟಿದ್ದೇವೆ. ಅದು ಕಥೆಯಿಂದ ಹಿಡಿದು ಆ್ಯಕ್ಷನ್‌ವರೆಗೆ. ಇಲ್ಲಿ ಯಾವುದೇ ರೋಪ್‌-ಡ್ನೂಪ್‌ ಇಲ್ಲದೇ ಆ್ಯಕ್ಷನ್‌ ಮಾಡಿದ್ದೇನೆ. ಗ್ಲಾಸ್‌, ಕಲ್ಲು ಮೇಲೆ ಬೀಳ್ಳೋದು, ಹಾರೋದು …. ಯಾವುದಕ್ಕೂ ಡ್ನೂಪ್‌ ಬಳಸಿಲ್ಲ’ ಎಂದು ವಿವರ ಕೊಡುತ್ತಾರೆ. ಅಂದಹಾಗೆ, ಅನೂಪ್‌ ಸಿಂಗ್‌ ಠಾಕೂರ್‌ ಬಾಡಿ ಬಿಲ್ಡರ್‌ ಕೂಡಾ. ಕಟ್ಟುಮಸ್ತಾದ ದೇಹವೊಂದಿದ್ದಾರೆ. ಹಾಗಾದರೆ ಇಲ್ಲಿ ಬಾಡಿ ಶೋ ಇದೆಯಾ ಎಂದರೆ ಖಂಡಿತಾ ಇಲ್ಲ ಎನ್ನುತ್ತಾರೆ. “ಬಾಡಿ ಇದೆ ಎಂಬ ಕಾರಣಕ್ಕೆ ಪದೇ ಪದೇ ಬಾಡಿ ಶೋ ಮಾಡಿದರೆ ಅದು ಚೆನ್ನಾಗಿರೋದಿಲ್ಲ. ಇಲ್ಲಿ ಆ ತರಹದ ಅನಾವಶ್ಯಕ ಅಂಶಗಳಿಲ್ಲ. ಕಥೆಗೆ ಏನು ಬೇಕೋ ಅದನ್ನಷ್ಟೇ ಕೊಟ್ಟಿದ್ದೇವೆ’ ಎನ್ನುತ್ತಾರೆ.

ಅನೂಪ್‌ ಸಿಂಗ್‌ ಅವರ ಮೊದಲ ಆಡಿಯನ್ಸ್‌ ಅವರ ಅಪ್ಪ-ಅಮ್ಮ ಅಂತೆ. ಇತ್ತೀಚೆಗೆ ಬಿಡುಗಡೆಯಾದ “ಯಜಮಾನ’ ಚಿತ್ರವನ್ನು ನೋಡಿ ಖುಷಿಪಟ್ಟಿದ್ದರಂತೆ. ಅದೇ ದಿನ “ಉದ್ಘರ್ಷ’ವನ್ನು ನೋಡಿ, ನೈಜ ಅಭಿನಯ ನೀಡಿದ್ದೀಯಾ ಎಂದು ಬೆನ್ನುತಟ್ಟಿದರಂತೆ. 

ಸದ್ಯ ಅನೂಪ್‌ ಬಾಲಿವುಡ್‌ಗೆ ಹಾರಲು ತಯಾರಿ ನಡೆಸಿದ್ದಾರೆ. ಆ ಕುರಿತು ಮಾತುಕತೆ ನಡೆಯುತ್ತಿದೆಯಂತೆ. ಸದ್ಯ ಅನೂಪ್‌ ಕಣ್ಣಲ್ಲಿ “ಉದ್ಘರ್ಷ’ ಓಡುತ್ತಿದೆ. 

– ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next