Advertisement

ಅವಹೇಳನಕಾರಿ ಸಂದೇಶ: ನಿರಾಣಿ ಸ್ಪಷ್ಟನೆ

11:36 AM Jul 22, 2020 | mahesh |

ಬೆಂಗಳೂರು: ಹಿಂದೂ ದೇವರ ಬಗ್ಗೆ ಅವಹೇಳನ ಮಾಡಿರುವ ಸಂದೇಶವೊಂದು ಮಾಜಿ ಸಚಿವ ಮುರುಗೇಶ್‌ ನಿರಾಣಿ ಅವರ ಮೊಬೈಲ್‌ ಸಂಖ್ಯೆಯಿಂದ ಫಾರ್ವಡ್‌ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಮಂಗಳವಾರ ಚರ್ಚೆಗೆ ಗ್ರಾಸವಾದ ಹಿನ್ನೆಲೆಯಲ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ. ತಮ್ಮ ಸಿಬ್ಬಂದಿಯೊಬ್ಬರ ಅಚಾತುರ್ಯದಿಂದ ಆ ಸಂದೇಶ ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಫಾರ್ವಡ್‌ ಆಗಿದ್ದು, ಇದಕ್ಕಾಗಿ ರಾಜ್ಯದ ಜನರಲ್ಲಿ ಕ್ಷಮೆ ಯಾಚಿಸುವುದಾಗಿ ಮುರುಗೇಶ್‌ ನಿರಾಣಿ ಹೇಳಿದ್ದಾರೆ. ಜತೆಗೆ ಅಚಾತುರ್ಯಕ್ಕೆ ಕಾರಣರಾದ ಸಿಬ್ಬಂದಿ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ಈ ರೀತಿಯ ಅಚಾತುರ್ಯ ಆಗದಂತೆ ಎಚ್ಚರ ವಹಿಸುವುದಾಗಿ ತಿಳಿಸಿದ್ದಾರೆ.

Advertisement

ಮಂಗಳವಾರ ಬೆಳಗ್ಗೆ ವಾಟ್ಸ್‌ಆ್ಯಪ್‌ ಗ್ರೂಪ್‌ ಮೂಲಕ ಸಂದೇಶ ಫಾರ್ವಡ್‌ ಆಗಿರುವ ಮೊಬೈಲ್‌ ಸಂಖ್ಯೆ ನನ್ನದೆ. ಆದರೆ ಈ ಸಂದೇಶವನ್ನು ನಾನು ಫಾರ್ವಡ್‌ ಮಾಡಿಲ್ಲ. ಸಾರ್ವಜನಿಕರ ಸಂಪರ್ಕಕ್ಕಾಗಿ ನನ್ನ ಆಪ್ತ ಸಹಾಯಕ, ಗನ್‌ಮ್ಯಾನ್‌ ಈ ಸಂಖ್ಯೆ ಬಳಸುತ್ತಿರುತ್ತಾರೆ. ಸೋಮವಾರ ರಾತ್ರಿ ಫೋನ್‌ ನನ್ನ ಆಪ್ತ ಸಹಾಯಕನ ಬಳಿ ಉಳಿದಿತ್ತು. ಬೆಳಗ್ಗೆ ಎಲ್ಲಿಂದಲೋ ಬಂದ ಸಂದೇಶವನ್ನು ಅಜಾಗರೂಕತೆಯಿಂದ ಫಾರ್ವಡ್‌ ಮಾಡಿ ಅವಾಂತರ ಸೃಷ್ಟಿಯಾಗಿದೆ ಎಂದು ಮುರುಗೇಶ್‌ ನಿರಾಣಿ ಸ್ಪಷ್ಟನೆ ನೀಡಿದ್ದಾರೆ.

ಈ ತಪ್ಪಿಗಾಗಿ ಅವರು ನನ್ನ ಬಳಿ ಕ್ಷಮೆ ಯಾಚಿಸಿದ್ದಾರೆ. ನನ್ನ ಜೊತೆಗಿದ್ದವರು ಉದ್ದೇಶಪೂರ್ವಕವಾಗಿ ಸಂದೇಶ ಫಾರ್ವಡ್‌ ಮಾಡಿಲ್ಲ. ಇದಕ್ಕಾಗಿ ರಾಜ್ಯದ ಜನರ ಕ್ಷಮೆ ಯಾಚಿಸುತ್ತೇನೆ. ನಾನು ಸರ್ವ ಧರ್ಮ ಸಹಿಷ್ಣುವಾಗಿದ್ದೇನೆ. ಧರ್ಮ, ನಂಬಿಕೆ ಬಗ್ಗೆ ಎಂದೂ ಹಗುರವಾಗಿ ಮಾತ  ನಾಡಿಲ್ಲ. ಎಲ್ಲ ಧರ್ಮವನ್ನೂ ಸಮಾನವಾಗಿ ಗೌರವಿಸುತ್ತೇನೆ. ಸನಾತನ ಧರ್ಮದ ಬಗ್ಗೆ ಅಪಾರ ಶ್ರದ್ಧೆ, ಭಕ್ತಿಯಿಂದ ನಡೆದುಕೊಳ್ಳುತ್ತೇನೆ. ಹಿಂದೂ ಆಗಿ ನನ್ನ ಧರ್ಮದ ಬಗ್ಗೆ ಅಭಿಮಾನವಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next