Advertisement

ಉಪನೋಂದಣಾಧಿಕಾರಿ ಕಚೇರಿ ಸೀಲ್‌ ಡೌನ್‌

08:09 PM Apr 18, 2021 | Team Udayavani |

ಕನಕಪುರ: ನಗರದ ಅಯ್ಯಪ್ಪ ಸ್ವಾಮಿದೇವಾಲಯದ ಬಳಿ ಇರುವ ಉಪನೋಂದಣಾಧಿಕಾರಿಗಳ ಕಚೇರಿಯ ಇಬ್ಬರುಅಧಿಕಾರಿಗಳು ಮತ್ತು ಓರ್ವ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ ಕಚೇರಿಯನ್ನು ಸೀಲ್‌ಡೌನ್‌ ಮಾಡಲಾಯಿತು.ಕಚೇರಿಗೆ ಭೇಟಿ ಕೊಟ್ಟಿದ್ದ ಜನರಿಗೂ ಈಗಆತಂಕ ಶುರವಾಗಿದೆ.

Advertisement

ಅಲ್ಲದೆ, ಸೋಂಕಿತರಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಹೊಂದಿರುವವರನ್ನು ಪತ್ತೆಹಚ್ಚುವುದು ಆರೋಗ್ಯಇಲಾಖೆ ಅಧಿಕಾರಿಗಳಿಗೆ ತಲೆನೋವು ತರಿಸಿದೆ.ಉಪನೋಂದಣಾಧಿಕಾರಿಗಳ ಕಚೇರಿಗೆ ಪ್ರತಿದಿನನೂರಾರು ಮಂದಿ ವಿವಿಧ ಕಾರಣಗಳಿಗೆ ಭೇಟಿನೀಡುತ್ತಿದ್ದರು. ಬೆಳಗ್ಗೆಯಿಂದ ಸಂಜೆವರೆಗೂಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿಜನ ಜಂಗುಳಿ ಇರುತ್ತದೆ.

ಮೂವರಿಗೆ ಕೊರೊನಾ ಸೋಂಕು ದೃಢ: ಕಳೆದಮೂರು ನಾಲ್ಕು ದಿನಗಳಿಂದ ಅನಾರೋಗ್ಯದಿಂದಬಳಲುತ್ತಿದ್ದ ಇಬ್ಬರು ಉಪನೋಂದಣಿಅಧಿಕಾರಿಗಳನ್ನು ಕೋವಿಡ್‌ ಪರೀಕ್ಷೆಗೆಒಳಪಡಿಸಿದಾಗ ಸೋಂಕು ಇರುವುದು ಶುಕ್ರವಾರದೃಢಪಟ್ಟಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಅಧಿಕಾರಿಗಳು ಸೋಂಕಿತರ ಪ್ರಾಥಮಿಕ ಹಾಗೂದ್ವಿತೀಯ ಸಂಪರ್ಕದಲ್ಲಿದ್ದವರ ಹುಡುಕಾಟಆರಂಭಿಸಿ¨ªಾರೆ.

ನಗರಸಭೆ ಸಿಬ್ಬಂದಿ ಮುಂಜಾಗ್ರತಾ ಕ್ರಮವಾಗಿಉಪ ನೋಂದಣಾಧಿಕಾರಿಗಳ ಕಚೇರಿಸಂಪೂರ್ಣವಾಗಿ ಸ್ಯಾನಿಟೈಸ್‌ ಮಾಡಿ ಸೀಲ್‌ಡೌನ್‌ ಮಾಡಿದರು. ಹಾರೋಹಳ್ಳಿ ಕೈಗಾರಿಕಾಪ್ರದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳುಹೆಚ್ಚಾಗುತ್ತಿವೆ, ಕೈಗಾರಿಕಾ ಪ್ರದೇಶಕ್ಕೆ ಬರುತ್ತಿರುವಹೊರರಾಜ್ಯದ ಕಾರ್ಮಿಕರ ವಲಸೆಯಿಂದಸೋಂಕು ಪ್ರಕರಣಗಳು ಹೆಚ್ಚಾಗುತ್ತಿದೆ ಎಂದುಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next