Advertisement

ಬ್ಯಾಂಕ್‌ ಖಾತೆಗಳ ಪೋರ್ಟೆಬಿಲಿಟಿಗೆ ಚಿಂತನೆ

02:25 AM Jun 01, 2017 | Team Udayavani |

ಹೊಸದಿಲ್ಲಿ: ಮೊಬೈಲ್‌ ನಂಬರ್‌ ಪೋರ್ಟೆಬಿಲಿಟಿ ರೀತಿಯಲ್ಲೇ ದೇಶಾದ್ಯಂತ ಬ್ಯಾಂಕ್‌ ಅಕೌಂಟ್‌ ಪೋರ್ಟೆಬಿಲಿಟಿ ವ್ಯವಸ್ಥೆ ಜಾರಿಗೆ ಬರಲಿದೆ. ಈ ಬಗ್ಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಉಪ ಗವರ್ನರ್‌ ಎಸ್‌.ಎಸ್‌.ಮುಂದ್ರಾ ಅವರು ಸುಳಿವು ನೀಡಿದ್ದು, ‘ಗ್ರಾಹಕರ ಅನುಕೂಲದ ದೃಷ್ಟಿಯಿಂದ ಬ್ಯಾಂಕ್‌ ಖಾತೆ ಸಂಖ್ಯೆಗಳ ಪೋರ್ಟೆಬಲಿಟಿಗೆ ದೇಶದ ಬ್ಯಾಂಕಿಂಗ್‌ ಕ್ಷೇತ್ರ ಸಜ್ಜಾಗಬೇಕಿದೆ,’ ಎಂದು ಬ್ಯಾಂಕ್‌ಗಳಿಗೆ ಸಲಹೆ ನೀಡಿದ್ದಾರೆ. ಒಂದೊಮ್ಮೆ ಬ್ಯಾಂಕ್‌ ಖಾತೆಗಳ ಪೋರ್ಟೆಬಲಿಟಿ ವ್ಯವಸ್ಥೆ ಜಾರಿಯಾದರೆ, ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಅನಾರೋಗ್ಯಕರ ಸ್ಪರ್ಧೆ ಏರ್ಪಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Advertisement

‘ಖಾತೆಗಳನ್ನು ಪೋರ್ಟ್‌ ಮಾಡುವ ಪ್ರಕ್ರಿಯೆಯಲ್ಲಿ ಡಿಜಿಟಲ್‌ ಬ್ಯಾಂಕಿಂಗ್‌ ಮಹತ್ವದ ಪಾತ್ರ ನಿರ್ವಹಿಸಲಿದೆ. ಇದರೊಂದಿಗೆ ಭೀಮ್‌, ಐಎಂಪಿಎಸ್‌, ಯುಪಿಐ ರೀತಿಯ ವಿಶಿಷ್ಟ ಆ್ಯಪ್‌ಗ್ಳು ಪೋರ್ಟೆಬಲಿಟಿ ಪರಿಕಲ್ಪನೆಯನ್ನು ವಾಸ್ತವಕ್ಕೆ ತರುವ ನಿಟ್ಟಿನಲ್ಲಿ ನೆರವಾಗಲಿವೆ,’ ಎಂದಿದ್ದಾರೆ‌ ಮುಂದ್ರಾ. ಇತ್ತೀಚೆಗೆ ಬ್ಯಾಂಕು ಖಾತೆಗಳಿಗೆ ಎಲ್ಲ ಗ್ರಾಹಕರ ಆಧಾರ್‌ ಸಂಖ್ಯೆಯನ್ನು ಲಿಂಕ್‌ ಮಾಡುತ್ತಿರುವ ಕಾರಣ, ಗ್ರಾಹಕರು ಸುಲಭವಾಗಿ ಖಾತೆಗಳನ್ನು ಬದಲಿಸದೆಯೇ ತಮ್ಮ ಬ್ಯಾಂಕುಗಳನ್ನು ಬದಲಿಸಿಕೊಳ್ಳಬಹುದು ಎಂದೂ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next