ಮುಖ್ಯವಾಗಿ ಸ್ವೀಪ್ ತಂಡದ ಕಾರ್ಯವೈಖರಿಯನ್ನು ಚುನಾವಣ ಆಯೋಗ ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದೆ. ಚುನಾವಣೆ ಜತೆಗೆ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಾಗಿತ್ತು. ಕಯಾಕಿಂಗ್ ಮೂಲಕ ಮತದಾನ ಜಾಗೃತಿ ಮಾಡಲಾಗಿತ್ತು.
Advertisement
ಮನೆಮನೆಗೆ ಭೇಟಿ ನೀಡಿ 80 ವರ್ಷ ಮೇಲ್ಪಟ್ಟವರು, ಅಂಗವಿಕಲರು ಮತದಾನ ಮಾಡುವಂತೆ ಪ್ರೇರೇಪಿ ಸುವುದು, ಯುವ ಮತದಾರರು ಅತೀ ಹೆಚ್ಚಿನ ಸಂಖ್ಯೆ ಯಲ್ಲಿ ನೋಂದಣಿ ಮಾಡುವಂತಾಗಲು ಕಾಲೇಜುಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಿರುವುದು ಸಹಿತ ಹಲವಾರು ಕಾರ್ಯಕ್ರಮಗಳನ್ನು ಮಾಡಲಾಗಿತ್ತು. 7,000ಕ್ಕೂ ಅಧಿಕ ಸಿಬಂದಿ ಕರ್ತವ್ಯ ನಿರ್ವಹಿಸಿದ್ದರು ಎಂದರು.
ಮತದಾನದ ದಿನ ಸೆಕ್ಟರ್ ಅಧಿಕಾರಿಯೊಬ್ಬರ ಸಂಬಂಧಿಕರು ನಿಧನ ಹೊಂದಿದ್ದರು. ಆ ಜಾಗಕ್ಕೆ ಮತ್ತೂಬ್ಬ ಅಧಿಕಾರಿ ಬಂದ ಬಳಿಕವಷ್ಟೇ ಇವರು ಮನೆಗೆ ತೆರಳಿದ್ದಾರೆ. ಅದೇ ರೀತಿ ಕರ್ತವ್ಯ ನಿರ್ವಹಿಸಿ ಬೆಳಗ್ಗಿನ ಜಾವ ಮನೆಗೆ ಹೋಗುತ್ತಿದ್ದಾಗ ಒಬ್ಬರಿಗೆ ಅಪಘಾತ ಉಂಟಾಗಿತ್ತು. ಆದರೂ ಅವರು ತನ್ನ ಕೆಲಸ ಎಂದು ನಂಬಿ ಮತ್ತೆ ಕರ್ತವ್ಯಕ್ಕೆ ಬಂದಿದ್ದರು. ಹೀಗೆ ಚುನಾವಣೆ ಅವಧಿಯಲ್ಲಿ ಇಂತಹ ಸಾಕಷ್ಟು ಘಟನೆಗಳು ನಡೆದಿವೆ. ಆದರೆ ಎಲ್ಲವನ್ನೂ ಬದಿಗಿರಿಸಿ ಸಿಬಂದಿ ಪರಿಶ್ರಮಿಸಿದ್ದಾರೆ. ಜತೆಗೆ ಎಲ್ಲ ಅಧಿಕಾರಿಗಳೂ ಸೂಕ್ತವಾಗಿ ಸ್ಪಂದಿಸಿದ್ದಾರೆ.
-ಕೂರ್ಮಾ ರಾವ್, ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ, ಉಡುಪಿ