Advertisement

‘ದಾಸೋಹ ಕಂಟ್ರೋಲ್‌ ರೂಂ’ಕಾರ್ಮಿಕರಿಗೆ ಆಹಾರ ಒದಗಿಸುವ ವ್ಯವಸ್ಥೆ: ಡಾ. ಅಶ್ವತ್ಥನಾರಾಯಣ

09:01 AM Apr 04, 2020 | Hari Prasad |

ಬೆಂಗಳೂರು: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಡ ಕಾರ್ಮಿಕರಿಗೆ ಆಹಾರ ಒದಗಿಸುವ ‘ದಾಸೋಹ’ ಕಾರ್ಯಕ್ರಮ ತಂತ್ರಜ್ಞಾನದ ಉತ್ತಮ ಬಳಕೆಗೆ ಉದಾಹರಣೆ. ಇಂಥ ಪಾರದರ್ಶಕ ವ್ಯವಸ್ಥೆ ಎಲ್ಲ ಇಲಾಖೆಗಳಿಗೂ ಮಾದರಿ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

Advertisement

ವಾರ್ತಾ ಭವನದ ಮಹಾತ್ಮ ಗಾಂಧಿ ಮಾಧ್ಯಮ ಕೇಂದ್ರದಲ್ಲಿ ನೂತನವಾಗಿ ರೂಪಿಸಲಾಗಿರುವ ‘ದಾಸೋಹ ಕಂಟ್ರೋಲ್ ರೂಂ’ಗೆ ಶುಕ್ರವಾರ ಚಾಲನೆ ನೀಡಿದ ನಂತರ ಡಾ. ಅಶ್ವತ್ಥನಾರಾಯಣ ಮಾಧ್ಯಮಗಳ ಜತೆ ಮಾತನಾಡಿದರು.

“ಕೋವಿಡ್ 19 ವೈರಸ್ ತಂದೊಡ್ಡಿರುವ ಸಂಕಷ್ಟದ ಸಮಯದಲ್ಲಿ ಕಾರ್ಮಿಕ ಸಚಿವ ಶಿವರಾಮ್‌ ಹೆಬ್ಬಾರ್‌ ಅವರು ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡಿದ್ದಾರೆ. ಸ್ವಿಗ್ಗಿ ಹಾಗೂ ವಾರ್ತಾ ಇಲಾಖೆಯ ಮೂಲ ಸೌಕರ್ಯ ಬಳಸಿಕೊಂಡು ಬಡ ಕೂಲಿ ಕಾರ್ಮಿಕರು ಇರುವಲ್ಲಿಗೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ. ಆಹಾರ ಪಡೆದವರ ಸಂಖ್ಯೆ ಹಾಗೂ ಅದರ ಲೆಕ್ಕ ಎಲ್ಲವನ್ನೂ ಪಾರದರ್ಶಕವಾಗಿ ಜನರ ಮುಂದಿಡುವ ಕೆಲಸವನ್ನು ಕಾರ್ಮಿಕ ಇಲಾಖೆ ಮಾಡುತ್ತಿದೆ. ಈ ಕೆಲಸ ಬೇರೆ ಇಲಾಖೆಗಳಿಗೂ ಮಾದರಿ,”ಎಂದು ಸಚಿವರು ಹೇಳಿದರು.


“ಕಾರ್ಮಿಕ ಸಚಿವ ಶಿವರಾಮ್‌ ಹೆಬ್ಬಾರ್‌, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ತೋಟಗಾರಿಕೆ ಸಚಿವ ನಾರಾಯಣ ಗೌಡ ಅವರ ಸಹಕಾರದಿಂದ ಈ ದಾಸೋಹ ಕಂಟ್ರೋಲ್‌ ರೂಂ ಯಶಸ್ವಿಯಾಗಿ ಕಾರ್ಯನಿರ್ವಹಿಸುವ ವಿಶ್ವಾಸ ಇದೆ. ಎಲ್ಲ ಸಚಿವರು ಈ ಸವಾಲನ್ನು ಅತ್ಯಂತ ಸಮರ್ಥವಾಗಿ ಎದುರಿಸುತ್ತಿದ್ದಾರೆ.

ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಆಹಾರ ತಲುಪಿಸುವ ಕಾಯಕ ಒಂದರೆಡು ದಿನಕ್ಕೆ ಸೀಮಿತ ಅಲ್ಲ. ಲಾಕ್‌ಡೌನ್‌ ಅವಧಿ ಮುಗಿಯುವರೆಗೂ ನಿರಂತರವಾಗಿ ಆಗಬೇಕಾದ ಕೆಲಸ. ಅಸಹಾಯಕರು, ನಿರಾಶ್ರಿತರು ಹಾಗೂ ಬಡ ಕೂಲಿ ಕಾರ್ಮಿಕರಿಗೆ ಆಹಾರದ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲಾಗುವುದು’ ಎಂದು ಅವರು ಹೇಳಿದರು.

ಕಾರ್ಮಿಕ ಸಹಾಯವಾಣಿ
ಕಾರ್ಮಿಕರ ಅಗತ್ಯಗಳನ್ನು ಪೂರೈಸಲು ಮತ್ತು ಆಹಾರ ಸರಬರಾಜು ಮಾಡುವ ನಿಟ್ಟಿನಲ್ಲಿ ಈ ವಾರ್‌ರೂಂ ನೆರವಾಗಲಿದೆ. ಕಾರ್ಮಿಕ ಮತ್ತು ಶ್ರಮಿಕ ವರ್ಗದ ಸಮಸ್ಯೆಗಳಿಗೆ 155214 ಸಹಾಯವಾಣಿಯನ್ನು ಸಂಪರ್ಕಿಸಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next